ನವದೆಹಲಿ: ಕರ್ನಾಟಕ, ದೆಹಲಿ, ಪಂಜಾಬ್ ಮತ್ತು ತೆಲಂಗಾಣದಲ್ಲಿ ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್) ಪ್ರಕ್ರಿಯೆಯನ್ನು ಕೆಲವು ದಿನಗಳವರೆಗೆ ವಿಸ್ತರಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.ಕರ್ನಾಟಕದಲ್ಲಿ ಜುಲೈ 29ರ ಬದಲಿಗೆ ಆಗಸ್ಟ್ 8 ರವರೆಗೆ ಗಣತಿ ನಮೂನೆ ವಿತರಿಸಲು ಅವಕಾಶ ನೀಡಲಾಗಿದೆ. ಕರಡು ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17ರಂದು ಪ್ರಕಟಿಸಲಾಗುವುದು ಎಂದು ಆಯೋಗ ತಿಳಿಸಿದೆ.ರಾಜ್ಯದಲ್ಲಿ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 7ರ ಬದಲಿಗೆ ಅಕ್ಟೋಬರ್ 19 ರಂದು ಪ್ರಕಟಿಸಲಾಗುವುದು ಎಂದು ಪರಿಷ್ಕೃತ ಪ್ರಕಟಣೆ ತಿಳಿಸಿದೆ.ಇನ್ನು, ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜುಲೈ 29ರ ಬದಲಿಗೆ ಆಗಸ್ಟ್ 8 ರವರೆಗೆ ಗಣತಿ ನಮೂನೆ ವಿತರಿಸಲಾಗುತ್ತದೆ. ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 5ರ ಬದಲಿಗೆ ಆಗಸ್ಟ್ 17 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ.ಪಂಜಾಬ್‌ನಲ್ಲಿ ಗಣತಿ ನಮೂನೆ ವಿತರಣೆಯು ಜುಲೈ 24ರ ಬದಲಿಗೆ ಆಗಸ್ಟ್ 3 ರವರೆಗೆ ಮುಂದುವರಿಯಲಿದೆ. ಕರಡು ಮತದಾರರ ಪಟ್ಟಿಯನ್ನು ಜುಲೈ 31 ರ ಬದಲಿಗೆ ಆಗಸ್ಟ್ 13 ರಂದು ಪ್ರಕಟವಾಗಲಿದೆ. ಅಂತಿಮ ಮತದಾರರ ಪಟ್ಟಿಯು ಅಕ್ಟೋಬರ್ 10ರ ಬದಲಿಗೆ ಅಕ್ಟೋಬರ್ 12 ರಂದು ಹೊರಬರಲಿದೆ.ತೆಲಂಗಾಣದಲ್ಲಿ ಕರಡು ಮತದಾರರ ಪಟ್ಟಿಯನ್ನು ಆಗಸ್ಟ್ 10 ರಂದು ಹಾಗೂ ಅಂತಿಮ ಮತದಾರರ ಪಟ್ಟಿಯನ್ನು ಅಕ್ಟೋಬರ್ 12 ರಂದು ಪ್ರಕಟಿಸಲಾಗುವುದು ಎಂದು ತಿಳಿಸಿದೆ







