ಪುತ್ತೂರು, ಜು.30: ತುರ್ತು ಕಾಮಗಾರಿ ಹಿನ್ನೆಲೆಯಲ್ಲಿ ಪುತ್ತೂರು ಮತ್ತು ಸುತ್ತಮುತ್ತಲಿನ ಹಲವೆಡೆ ಇಂದು (ಜು.30) ಬೆಳಗ್ಗೆ 10.00ರಿಂದ ಸಂಜೆ 5.30ರವರೆಗೆ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಿಸಿದೆ.110/33/11 ಕೆ.ವಿ. ಪುತ್ತೂರು ವಿದ್ಯುತ್ ಉಪಕೇಂದ್ರದಿಂದ ಹೊರಡುವ ನಗರ, ರಾಮಕುಂಜ, ಉಪ್ಪಿನಂಗಡಿ ಓಲ್ಡ್, ಉಪ್ಪಿನಂಗಡಿ ಎಕ್ಸ್‌ಪ್ರೆಸ್, ಕಾಂಚನ, ವಾಟರ್ ಸಪ್ಪೆ ಹಾಗೂ ಕೆಮ್ಮಾಯಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆ ಇರಲಿದೆ.ಇದರಿಂದ ಕಬಕ, ವಿದ್ಯಾಪುರ, ನಗರ, ಮುರ, ಕೊಡಿಪ್ಪಾಡಿ, ಕಲೆಂಬಿ, ಪಡೀಲು, ಸಾಲ್ಮರ, ಬೀರ್ನಹಿತ್ತು, ಕೆಮ್ಮಾಯಿ, ಕೃಷ್ಣನಗರ, ಆನೆಮಜಲು, ಬನ್ನೂರು, ಹಲಂಗ, ಸೇಡಿಯಾಪು, ಕೋಡಿಂಬಾಡಿ, ಮಠಂತಬೆಟ್ಟು, ಶಾಂತಿನಗರ, ದಾರಂದಕುಕ್ಕು, ಕಟಾರ, ಚಿಕ್ಕಮುಳ್ಳೂರು, ಬೆಳ್ಳಿಪ್ಪಾಡಿ, ರಾಮಕುಂಜ, ಕೈಲ, ಹಿರೇಬಂಡಾಡಿ, ವಾಟರ್ ಸಪ್ಪೆ, ಹಳೆನೇರೆಂಕಿ ಹಾಗೂ ನೆಕ್ಕಿಲಾಡಿ ಭಾಗಗಳ ವಿದ್ಯುತ್ ಬಳಕೆದಾರರು ತೊಂದರೆ ಅನುಭವಿಸಲಿದ್ದಾರೆ.ಇದೇ ವೇಳೆ, ಬನ್ನೂರು ಜಂಕ್ಷನ್‌ನಲ್ಲಿ ತುರ್ತು ಕಾಮಗಾರಿ ನಡೆಯುವ ಕಾರಣ ಪುತ್ತೂರು–ಕಡಬ–ಸುಬ್ರಹ್ಮಣ್ಯ ಹಾಗೂ 33 ಕೆ.ವಿ. ಪುತ್ತೂರು–ಸವಣೂರು–ನೆಲ್ಯಾಡಿ ವಿದ್ಯುತ್ ಮಾರ್ಗಗಳಲ್ಲೂ ಬೆಳಗ್ಗೆ 10ರಿಂದ ಸಂಜೆ 5.30ರವರೆಗೆ ವಿದ್ಯುತ್ ನಿಲುಗಡೆ ಇರಲಿದೆ.ಇದರಿಂದ 33/11 ಕೆ.ವಿ. ಕಡಬ, ಸುಬ್ರಹ್ಮಣ್ಯ, ನೆಲ್ಯಾಡಿ, ಸವಣೂರು ಹಾಗೂ ಬಿಂದು ವಿದ್ಯುತ್ ಉಪಕೇಂದ್ರಗಳಿಂದ ಹೊರಡುವ ಎಲ್ಲಾ 11 ಕೆ.ವಿ. ಫೀಡರ್‌ಗಳ ವ್ಯಾಪ್ತಿಯ ವಿದ್ಯುತ್ ಬಳಕೆದಾರರು ಅಗತ್ಯ ಮುನ್ನೆಚ್ಚರಿಕೆ ವಹಿಸಿ ಸಹಕರಿಸುವಂತೆ ಮೆಸ್ಕಾಂ ಮನವಿ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!