ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ದ ಬಿ.ಸಿ ರೋಡ್ ನಲ್ಲಿ ಸೋಮವಾರ ನಡೆದ ಹಿಂದೂ ಸಂಘಟನೆಗಳ ಶಕ್ತಿ ಪ್ರದರ್ಶನ ವಿಚಾರದಲ್ಲಿ ವಿಹೆಚ್‌ಪಿ ಮುಖಂಡ ಶರಣ್ ಪಂಪ್‌ವೆಲ್ ಮತ್ತು ಬಂಟ್ವಾಳ ಭಜರಂಗದಳ ಮುಖಂಡ ಭರತ್ ಕುಮ್ಡೆಲು ಅವರುಗಳ ವಿರುದ್ದ ಬಂಟ್ವಾಳ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಂಟ್ವಾಳ ನಗರ ಠಾಣೆಗೆ ದೂರು ಮಹಮ್ಮದ್ ರಫೀಕ್ ಎಂಬವರು ಈ ಇಬ್ಬರು ಮುಖಂಡರುಗಳ ವಿರುದ್ದ ದೂರು ಸಲ್ಲಿಸಿದ್ದರು. ಶರಣ್ ಪಂಪ್ ವೆಲ್‌ಗೆ ಸವಾಲು ಹಾಕಿದ್ದ ಶರೀಫ್ ವಿರುದ್ಧ ಇವರು ಅವ್ಯಾಚ್ಯ ಶಬ್ಧ ಪ್ರಯೋಗ ಮಾಡಿದ ಆರೋಪದ ಹಿನ್ನಲೆ ಮತ್ತು ಮುಸ್ಲಿಂ ಧರ್ಮದ ಬಗ್ಗೆ ನಿಂದನೆ ಮಾಡಿದ ಆರೋಪ ಮೇಲೆ ದೂರು ದಾಖಲಾಗಿದೆ. ಈ ಹಿನ್ನಲೆ ಯಲ್ಲಿ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ ನಗರ ಠಾಣಾ ಪೊಲೀಸರು FIR ದಾಖಲು ಮಾಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!