ಪುತ್ತೂರು: ನಿಮ್ಮ ಭವಿಷ್ಯ ನಿಮ್ಮ ಕೈಯ್ಯಲ್ಲಿದೆ, ನೀವು ಶಿಕ್ಷಣ ಪಡೆದು ನಾಳೆಯ ಬದುಕಿಗೆ ಸುಂದರ ಹೆಜ್ಜೆ ಇಡುವ ಸಮಯ, ನೀವು ಏನಾಂಗಬೇಕೆಂದು ಬಯಸಿದ್ದೀರೋ ಅದನ್ನು ಸಾಧಿಸಿ ಸಫಲರಾಗುವ ಛಲ ನಿಮ್ಮಲ್ಲಿರಬೇಕು. ಶಿಕ್ಷಣವಂತರಾಗಿ ಸಾಧನೆ ಮಾಡುವ ಮೂಲಕ ಕಲಿತ ಸಂಸ್ಥೆಗೆ, ಊರಿಗೆ, ದೇಶಕ್ಕೆ ಕೀರ್ತಿ ತರುವ ಕೆಲಸವನ್ನು ಪ್ರತೀಯೊಬ್ಬರೂ ಮಾಡಬೇಕು, ನಿಮ್ಮ ಶಿಕ್ಷಣಕ್ಕೆ ಏನು ನೆರವು ಬೇಕೋ ಅದನ್ನು ನಾನು ಮಾಡುವೆ ಎಂದು ಶಾಸಕ ಅಶೋಕ್ ರೈ ಅವರು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.ಪುತ್ತೂರು ಎಪಿಎಂಸಿ ಸಭಾಂಗಣದಲ್ಲಿ ಸ.೩ ರಂದು ಪುತ್ತೂರಿನ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರ ಜೊತೆ ಶಾಸಕರು ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದರು.

ಶಾಸಕರು ವಿದ್ಯಾರ್ಥಿಗಳ ಜೊತೆ ಸುಮಾರು ೨ ಗಂಟೆಗಳ ಕಾಲ ವಿವಿಧ ವಿಚಾರಗಳಿಗೆ ಸಂಬಂಧಿಸಿ ಸಂವಾದ, ಚರ್ಚೆ ನಡೆಸಿದರು.ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಶಾಸಕರು ವಿದ್ಯಾರ್ಥಿ ಜೀವನ ಎಂಬುದು ನಮ್ಮ ಭವಿಷ್ಯವನ್ನು ನಿರ್ಧಾರ ಮಾಡುತ್ತದೆ. ನೀವು ಮುಂದೆ ಏನು ಆಗಬೇಕೆಂದು ಬಯಸಿದ್ದೀರೋ ಅದನ್ನು ಈಡೇರಿಸುವ ಸಮಯ ವಿದ್ಯಾರ್ಥಿ ಜೀವನ. ಎಲ್ಲಿ, ಏನೆಲ್ಲಾ ಕಲಿಯಲು ಅವಕಾಶವಿದೆಯೋ ಅದೆಲ್ಲವನ್ನೂ ಕಲಿತು ಜ್ಞಾನವನ್ನು ವೃದ್ದಿಸಿಕೊಳ್ಳಬೇಕು. ಕಲಿತ ವಿದ್ಯೆ ಎಂದೂ ವ್ಯರ್ಥವಾಗುವುದೇ ಇಲ್ಲ. ಕಲಿಕೆಯ ಜೊತೆ ಇತರೆ ಶೈಕ್ಷಣಿಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವು ಮ್ತತು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುವ ಮೂಲಕ ಜೀವನಕ್ಕೆ ಮುನ್ನುಡಿ ಬರೆಯವ ಛಲ ಎಲ್ಲರಲ್ಲೂ ಇರಬೇಕು ಎಂದು ಹೇಳಿದರು.

ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣಕ್ಕೆ ಒತ್ತು ಕೊಡಿವಿದ್ಯಾರ್ಥಿಗಳನ್ನು ರಾಜಕೀಯ ಶಕ್ತಿಗಳು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ಇಂದಿನ ಕಾಲಘಟ್ಟದಲ್ಲಿ ನೀವು ಅತ್ಯಂತ ಎಚ್ಚರದಿಂದ ಇರಬೇಕು. ವಿದ್ಯಾರ್ಥಿಗಳು ವಿದ್ಯಾರ್ಥಿಗಳಾಗಿಯೇ ಇರಬೇಕು ವಿನಾ ನಿಮ್ಮ ಕಲಿಕೆಯ ಕಾಲದಲ್ಲಿ ರಾಜಕೀಯದವರ ಬಲಿಪಶುಗಳಾಗಬೇಡಿ. ನಿಮ್ಮ ತಂದೆ ತಾಯಿ ಕಷ್ಟದಿಂದ ಯಾವುದೋ ಉದ್ದೇಶ ಇಟ್ಟುಕೊಂಡು ನಿಮಗೆ ಶಿಕ್ಷಣ ನೀಡುತ್ತಿರಬಹುದು ಅವರ ನಿರೀಕ್ಷೆಯನ್ನು ಎಂದೂ ಮಣ್ಣು ಪಾಲುಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ಶಾಸಕರು ಸಲಹೆ ನೀಡಿದರು. ಎಲ್ಲದರಲ್ಲೂ ನಾವೇ ಫಸ್ಟ್ ಆದರೆ ಸರಕಾರಿ ಕೆಲಸದಲ್ಲಿ ಲಾಸ್ಟ್ಪ್ರತೀ ಬಾರಿ ಶೈಕ್ಷಣಿಕ ವರ್ಷದ ಪಲಿತಾಂಶ ಬಂದಾಗ ದ ಕ ಮತ್ತು ಉಡುಪಿ ಜಿಲ್ಲೆಯವರೇ ಪ್ರಥಮ ಸ್ಥಾನದಲ್ಲಿರುತ್ತಾರೆ, ರ‍್ಯಾಂಕ್ ಹೊಡೆಯುವುದರಲ್ಲೂ ನಾವೇ ಪ್ರಥಮದಲ್ಲಿರುತ್ತೇವೆ ಆದರೆ ಸರಕಾರಿ ಕೆಲಸ ಪಡೆಯುವುದರಲ್ಲಿ ನಾವು ಕೊನೇಯ ಸ್ಥಾನದಲ್ಲಿರುತ್ತೇವೆ. ನಾವು ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸದೇ ಇರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಪ್ರತೀಯೊಂದು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಭಾಗವಹಿಸಬೇಕು. ಸೋಲುತ್ತದೋ, ಗೆಲ್ಲುತ್ತದೋ ಎಂಬುದರ ಬಗ್ಗೆ ನೀವು ಚಿಂತೆ ಮಾಡಬೇಡಿ. ಸೋಲೇ ಜೀವನದ ಗೆಲುವಿನ ಹಾದಿ ಎಂಬುದನ್ನೂ ಯಾರೂ ಮರೆಯಬಾರದು ಎಂದು ಶಾಸಕರು ಹೇಳಿದರು. ಸಮಸ್ಯೆಗಳನ್ನು ಶಾಸಕರ ಮುಂದಿಟ್ಟ ವಿದ್ಯಾರ್ಥಿಗಳುಬೊಳುವಾರಿನಲ್ಲಿರುವ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ವಿದ್ಯಾರ್ಥಿಗಳು ಕೆಲವೊಂದು ಸಮಸ್ಯೆಗಳನ್ನು, ಬೇಡಿಕೆಗಳನ್ನು ಈ ಸಂದರ್ಭದಲ್ಲಿ ಶಾಸಕರ ಮುಂದಿಟ್ಟರು.

ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವ ಕಾರಣ ಕಾಲೇಜಿನ ಆವರಣದಲ್ಲೇ ಕ್ಯಾಂಟೀನ್ ವ್ಯವಸ್ಥೆ ಮಾಡಬೇಕು ಮತ್ತು ಈ ಕ್ಯಾಂಟೀನ್‌ನಲ್ಲಿ ಕೈಗೆಟಕುವ ಧರದಲ್ಲಿ ವಿದ್ಯಾರ್ಥಿಗಳಿಗೆ ಉಪಹಾರ, ಊಟದ ವ್ಯವಸ್ಥೆಯನ್ನು ಮಾಡಬೇಕು. ನಾವು ವಿದ್ಯಾರ್ಥಿನಿಯರಾದ ಕಾರಣ ನಮಗೆ ಹೊರಗೆ ಹೋಗಿ ಹೊಟೇಲ್‌ಗಳಲ್ಲಿ ಊಟ ಮಾಡುವುದು ಅಷ್ಟು ಸರಿಯಾಗುವುದಿಲ್ಲ ಈ ಕಾರಣಕ್ಕೆ ಕ್ಯಾಂಟೀನ್ ವ್ಯವಸ್ಥೆ ಮಾಡಿ ಎಂದು ಬೇಡಿಕೆ ಇಟ್ಟಾಗ ಶಾಸಕರು ಅದಕ್ಕೆ ಒಪ್ಪಿಗೆ ಸೂಚಿಸಿದರು. ಕಾಲೇಜಿನ ಕಂಪ್ಯೂಟರ್ ಸಂಖ್ಯೆ ಕೇವಲ ನಾಲ್ಕು ಇದೆ ಅದನ್ನು ಹತ್ತಕ್ಕೆ ಏರಿಸಿ ಎಂದು ವಿದ್ಯಾರ್ಥಿಗಳ ಮನವಿಗೆ ಶಾಸಕರು ಸ್ಪಂದಿಸಿದರು. ಕಾಲೇಜಿಗೆ ಬರಲು ಸಿಟಿ ಬಸ್ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದು ಅದಕ್ಕೂ ಶಾಸಕರು ಸ್ಪಂದನೆ ನೀಡಿದರು.ಉಳಿದಂತೆ ವಿವಿಧ ಗ್ರಾಮಾಂತರ ಭಾಗದಿಂದ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ಇದ್ದು ಅದನ್ನು ಶಾಸಕರ ಗಮನಕ್ಕೆ ತಂದರು. ಈಗ ಇರುವ ರೂಟ್‌ಗಳಲ್ಲಿ ಬಸ್‌ನ ಕೊರತೆ ಅಥವಾ ಸಮಯ ವೆತ್ಯಾಸ ಮಾಡಬೇಕಿದ್ದರೆ ಅದನ್ನು ಮಾಡಬಹುದು ಎಂದು ಶಾಸಕರು ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತಿಳಿಸಿದರು.ನಮಗೆ ವಾಸ ಮಾಡಲು ಮನೆಯಿಲ್ಲ, ನಮಗೆ ಮನೆ ಕಟ್ಟಲು ನಿವೇಶನ ಕೊಡಿ, ನಮ್ಮ ಮನೆ ಕಾಮಗಾರಿ ಆರ್ಧದಲ್ಲಿದೆ, ನಮ್ಮ ಮನೆಯ ಅಕ್ರಮ ಸಕ್ರಮ ಮಾಡಿಕೊಡಿ, ನಮ್ಮ ರಸ್ತೆಗೆ ಕಾಂಕ್ರೀಟ್ ಮಾಡಿ, ನಮಗೆ ಸ್ಪರ್ಧಾತ್ಮ ಪರೀಕ್ಷೆ ಬರೆಯುವಲ್ಲಿ ನಿಮ್ಮ ಸಹಕಾರ ಬೇಕು ಮುಂತಾದ ಕೆಲವೊಂದು ಬೇಡಿಕೆಗಳನ್ನು ವಿದ್ಯಾರ್ಥಿಗಳು ಶಾಸಕರ ಮುಂದಿಟ್ಟರು.ವಿದ್ಯಾರ್ಥಿಗಳ ಬೇಡಿಕೆಗಳನ್ನು ಸ್ಥಳದಲ್ಲೇ ಮಂಜೂರು ಮಾಡಿದ ಶಾಸಕರು ರಸ್ತೆ ನಿಮಾಣಕ್ಕೆ ಒಟ್ಟು ೫೦ ಲಕ್ಷದ ಅನುದಾನ ಮಂಜೂರು ಮಾಡಿದರು. ಅಕ್ರಮ ಸಕ್ರಮ ಅರ್ಜಿಯ ಮಾಹಿತಿ ನೀಡುವಂತೆಯೂ ಸೂಚನೆಯನ್ನು ನೀಡಿದರು. ಮನೆ ಇಲ್ಲದವರಿಗೆ ನಿವೇಶನ ಕೊಟ್ಟೇ ಕೊಡ್ತೇನೆ ಮನೆ ಕಟ್ಟಲು ಎರಡು ಲಕ್ಷ ರೂ ಕೊಡಿಸುವುದಾಗಿಯೂ ಶಾಸಕರು ವಿದ್ಯಾರ್ಥಿಗಳಲ್ಲಿ ತಿಳಿಸಿದರು. ಬಾಕ್ಸ್ಶಾಸಕರ ಸಂವಾದ ಕಾರ್ಯಕ್ರಮ ಒಳ್ಳೆಯ ಕಾರ್ಯಕ್ರಮವಾಗಿದೆ, ನಮ್ಮ ಸಮಸ್ಯೆಗಳನ್ನು ಅವರ ಬಳಿ ಹೇಳಿಕೊಂಡೆವು. ಸಂವಾದದಲ್ಲಿ ಉತ್ತಮ ಮಾಹಿತಿಯೂ ದೊರೆತಿದೆ, ಶಾಸಕರ ಮಾತುಗಳು ನಮಗೆ ಭರವಸೆಗಳನ್ನು ಮೂಡಿಸಿದೆ. ಇಂಥಹ ಕಾರ್ಯಕ್ರಮಗಳು ಇನ್ನೂ ನಡೆಯಬೇಕು. ಅವರಾಗಿಯೇ ನಮ್ಮನ್ನು ಕರೆದು ಈ ಸಂವಾದ ಕಾರ್ಯಕ್ರಮ ಏರ್ಪಡಿಸಿದ್ದಾರೆ. ಗೌತಮಿ , ವಿದ್ಯಾರ್ಥಿನಿ ಶಾಸಕರು ನಮ್ಮೊಂದಿಗೆ ಚೆನ್ನಾಗಿ ಮಾತನಾಡಿದ್ರು, ಸಮಸ್ಯೆಗಳನ್ನು ಹೇಳಿದ್ದೇವೆ ಅವರು ಆಲಿಸಿದ್ದಾರೆ, ಸಮಸ್ಯೆಗೆ ಪರಿಹಾರ ಕೊಟ್ಟಿದ್ದಾರೆ. ಶಾಸಕರಲ್ಲಿ ಮುಕ್ತವಾಗಿ ಮಾತನಾಡಲು ಅವಕಾಶ ಸಿಕ್ಕಿದೆ. ಶಾಸಕರಿಗೆ ದನ್ಯವಾದಗಳು ಅಂಕಿತಾ, ವಿದ್ಯಾರ್ಥಿ ಬೇರೆ ಯಾರೂ ಈ ರೀತಿಯ ಕಾರ್ಯಕ್ರಮ ಮಾಡುವುದಿಲ್ಲ. ನಮಗೆ ಉತ್ತಮ ಮಾರ್ಗದರ್ಶನ ತರಗತಿ ಜೊತೆಗೆ ನಾವು ಜೀವನದಲ್ಲಿ ಮುಂದೆ ಏನು ಮಾಡಬೇಕು, ಹೇಗೆ ವ್ಯಾಸಂಗ ಮಾಡಬೇಕು ಎಂಬುದನ್ನು ಚೆನ್ನಾಗಿ ಮನಮುಟ್ಟುವಂತೆ ನಮಗೆ ವಿವರಿಸಿದ್ದಾರೆ. ಇಂಥಹ ಕಾರ್ಯಕ್ರಮ ಮುಂಧೆಯೂ ನಡೆಯಬೇಕು. ವಿದ್ಯಾರ್ಥಿಗಳ ಸಮಸ್ಯೆ, ಬೇಡಿಕೆಗಳನ್ನು ಆಲಿಸಿದ ಶಾಸಕರಿಗೆ ಅಭಿನಂದನೆಗಳು ಅಸ್ಮಾವಿದ್ಯಾರ್ಥಿನಿ ಶಾಸಕರು ತಮ್ಮ ಮೌಲ್ಯಯುತ ಸಮಯವನ್ನು ವಿದ್ಯಾರ್ಥಿಗಳಿಗಾಗಿ ಮೀಸಲಿಟ್ಟಿದ್ದಾರೆ.ನಮ್ಮ ಕಷ್ಟಗಳನ್ನು ಆಲಿಸಿ ಅದಕ್ಕೆ ಪರಿಹಾರ ಒದಗಿಸಿದ್ದಾರೆ. ಶಿವಾನಿ ವಿದ್ಯಾರ್ಥಿ ಬಾಕ್ಸ್ನನ್ನ ವಿಧಾನ ಸಭಾ ಕ್ಷೇತ್ರದ ಕಾಲೇಜು ವಿದ್ಯಾರ್ಥಿಗಳ ಜೊತೆ ಒಂದು ದಿನ ಬೆರೆತು ಅವರ ಬೇಡಿಕೆ, ಸಮಸ್ಯೆಗಳನ್ನು ಆಲಿಸುವ ಒಂದು ಹೊಸ ಪ್ರಯೋಗವನ್ನು ಆರಂಭಿಸಿದ್ದೇನೆ. ಎಲ್ಲಾ ಕಾಲೇಜು ವಿದ್ಯಾರ್ಥಿಗಳ ಜೊತೆ ಈ ಸಂವಾದ ನಡೆಯಲಿದೆ. ಪ್ರಾರಂಭದಲ್ಲಿ ಪುತ್ತೂರಿನ ಪ್ರಥಮ ದರ್ಜೆ ಸರಕಾರಿ ಮಹಿಳಾ ಕಾಲೇಜು ವಿದ್ಯಾರ್ಥಿಗಳನ್ನು ಬೇಟಿಯಾಗಿದ್ದೇನೆ. ಅವರ ಜೊತೆ ಮುಕ್ತವಾಗಿ ಮಾತನಾಡಿದ್ದೇನೆ. ಸಂಪನ್ಮೂಲ ವ್ಯಕ್ತಿಗಳಿಂದ ಅವರಿಗೆ ತರಬೇತಿಯನ್ನು ನೀಡಿದ್ದೇನೆ. ಯುವ ವಿದ್ಯಾರ್ಥಿ ಸಮೂಹದ ಶಿಕ್ಷಣ ಅಥವಾ ಕಲಿಕೆಗೆ ಯಾವುದೇ ತೊಂದರೆಗಳಿದ್ದಲ್ಲಿ ಅದನ್ನು ಪರಿಹರಿಸಿ ಮತ್ತು ಅವರ ಸಮಸ್ಯೆಗಳನ್ನು ಆಲಿಸುವ ಉದ್ದೇಶ ಇದರ ಹಿಂದಿದೆ.

ಬಹುತೇಕ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯದ ಹಿತ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜನೆ ಮಾಡಿದ್ದೇವೆ ಅಶೋಕ್ ರೈ, ಶಾಸಕರು, ಪುತ್ತೂರು ಭರ್ಜರಿ ಊಟೋಪಚಾರಮಧ್ಯಾಹ್ನಕ್ಕೆ ಬಿರಯಾನಿ, ತರಕಾರಿ ಉಪಹಾರ, ಐಸ್‌ಕ್ರೀಂ ನೀಡಲಾಯಿತು. ಭಾಗವಹಿಸಿದ ಪ್ರತೀಯೊಬ್ಬ ವಿದ್ಯಾರ್ಥಿಗೂ ಶಾಸಕರು ಉಡುಗೋರೆ ನೀಡಿ ಗೌರವಿಸಿದರು. ವಿದ್ಯಾರ್ಥಿಗಳ ಜೊತೆ ಊಟಕಾರ್ಯಕ್ರಮದ ಕೊನೇಯಲ್ಲಿ ವಿದ್ಯಾರ್ಥಿಗಳ ಜೊತೆ ಶಾಸಕರು ಊಟವನ್ನು ಮಾಡಿದರು. ತಾನು ಮನೆಯಿಂದ ತಂದಿದ್ದ ಮೀನ್ ಫ್ರೈಯನ್ನು ವಿದ್ಯಾರ್ಥಿಗಳಿಗೆ ಹಂಚಿದರು. ಶಾಸಕರ ಪತ್ನಿ ಸುಮಾ ಅಶೋಕ್ ರೈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ಹುರಿದುಂಬಿಸಿದರು. ರೈ ಚಾರಿಟೇಬಲ್ ಟ್ರಸ್ಟ್ ಕಾಯಾಧ್ಯಕ್ಷ ಸುದೇಶ್ ಶೆಟ್ಟಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಸತೀಶ್ ಭಟ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು. ವಾಹನದ ವ್ಯವಸ್ಥೆಎಪಿಎಂಸಿ ಸಭಾಂಗಣಕ್ಕೆ ಬರಲು ಕಾಲೇಜಿನಿಂದ ಮಿನಿ ಬಸ್ ವ್ಯವಸ್ಥೆ ಮಾಡಲಾಗಿತ್ತು. ನಿಗಧಿತ ಸಮಯಕ್ಕೆ ವಿದ್ಯಾರ್ಥಿಗಳನ್ನು ಬೀಲ್ಕೊಡಲಾಯಿತು.

Leave a Reply

Your email address will not be published. Required fields are marked *

You missed

Join WhatsApp Group
error: Content is protected !!