ಮಂಗಳೂರು: ಬಣ್ಣಬಣ್ಣದ ಸೀರೆಗಳನ್ನುಟ್ಟು, ಸಂಭ್ರಮದಿಂದ ಹೆಜ್ಜೆ ಹಾಕಿದ ನೂರಾರು ಮಹಿಳೆಯರು ಸಾರಿ ವಾಕ್ ಆ್ಯಂಡ್ ರನ್‌ನಲ್ಲಿ ಪಾಲ್ಗೊಂಡು ಗಮನ ಸೆಳೆದರು.ನಗರದ ನಾರಿ ಕ್ಲಬ್ ವತಿಯಿಂದ ಭಾನುವಾರ ಗೋಕರ್ಣನಾಥೇಶ್ವರ ಕಾಲೇಜು ಆವರಣದಲ್ಲಿ 6ನೇ ಆವೃತ್ತಿಯ ‘ಮಂಗಳೂರು ದಿ ಸಾರಿ ವಾಕ್ ಆ್ಯಂಡ್ ರನ್’ ಆಯೋಜಿಸಲಾಗಿತ್ತು. ವಿವಿಧ ವಿನ್ಯಾಸದ ಸಾಂಪ್ರದಾಯಿಕ ಸೀರೆಗಳನ್ನುಟ್ಟು ಮಹಿಳೆಯರು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮಕ್ಕೂ ಮುನ್ನ ಜುಂಬಾ ಡ್ಯಾನ್ಸ್ ಆಯೋಜಿಸಲಾಗಿತ್ತು. ತರಬೇತುದಾರ್ತಿ ಪ್ರತೀಕ್ಷಾ ಪ್ರಭು ಅವರ ಮಾರ್ಗದರ್ಶನದಲ್ಲಿ ಮಹಿಳೆಯರು ಜುಂಬಾ ನೃತ್ಯದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು. ಬಳಿಕ ಸಾರಿ ವಾಕ್ ಆ್ಯಂಡ್ ರನ್‌ನಲ್ಲಿ ಅದೇ ಉತ್ಸಾಹದೊಂದಿಗೆ ಹೆಜ್ಜೆ ಹಾಕಿದರು.18ರಿಂದ 80 ವರ್ಷದವರೆಗೆಬೆಳಗ್ಗೆ 6.30ಕ್ಕೆ ಗೋಕರ್ಣನಾಥೇಶ್ವರ ಕಾಲೇಜು ಆವರಣದಿಂದ ಆರಂಭವಾದ ನಡಿಗೆ–ಓಟ ಮಣ್ಣುಗುಡ್ಡ, ಗುರ್ಜಿ, ಲೇಡಿಹಿಲ್ ಹಾಗೂ ಮಾರಿಯಮ್ಮ ವೃತ್ತದ ಮೂಲಕ ಸಾಗಿ ಮತ್ತೆ ಕಾಲೇಜು ಆವರಣದಲ್ಲಿ ಅಂತ್ಯಗೊಂಡಿತು. 18ರಿಂದ 80 ವರ್ಷದವರೆಗಿನ ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಸುಮಾರು 600ಕ್ಕೂ ಅಧಿಕ ಮಂದಿ ಸೀರೆ ತೊಟ್ಟು ವಾಕ್ ಆ್ಯಂಡ್ ರನ್‌ನಲ್ಲಿ ಉತ್ಸಾಹದಿಂದ ಪಾಲ್ಗೊಂಡರು.ಮಹಿಳೆಯರಲ್ಲಿ ಫಿಟ್‌ನೆಸ್ ಹಾಗೂ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಸಾಂಪ್ರದಾಯಿಕ ಉಡುಗೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸ್ಪರ್ಧೆಯಲ್ಲಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದವರಿಗೆ ಬಹುಮಾನ ನೀಡಲಾಯಿತು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ವಿತರಿಸಲಾಯಿತು.ನಾರಿ ಕ್ಲಬ್, ಮೈಸೂರು ಸಿಲ್ಕ್ ಕಾರ್ಪೊರೇಷನ್, ಫ್ರೀಡಂ ಆಯಿಲ್, ಮೈಸೂರು ಸ್ಯಾಂಡಲ್, ಜಯಲಕ್ಷ್ಮೀ ಬಿಜೈ, ಕೆನರಾ ಬ್ಯಾಂಕ್, ಆಭರಣ್ ಜ್ಯುವೆಲರ್ಸ್, ಎ.ಜೆ. ಆಸ್ಪತ್ರೆ ಹಾಗೂ ಇನ್ನರ್ ವ್ಹೀಲ್ ಕ್ಲಬ್ ಮಂಗಳೂರು ನಾರ್ತ್ ಮತ್ತು ಸುರತ್ಕಲ್ ಸೇರಿದಂತೆ ವಿವಿಧ ಸಂಸ್ಥೆಗಳು ಕಾರ್ಯಕ್ರಮಕ್ಕೆ ಸಹಕಾರ ನೀಡಿದ್ದವು.ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶಾಲೆಟ್ ಪಿಂಟೊ, ಮಂಗಳೂರು ನಗರ ಪೊಲೀಸ್ ಎಸಿಪಿ ನಜ್ಮಾ ಫಾರುಕಿ, ಸಾರಿ ವಾಕ್‌ಥಾನ್ ಸ್ಥಾಪಕ ರಾಜೇಶ್, ಜಯಲಕ್ಷ್ಮೀ ಬಿಜೈ ಶಾಖೆಯ ಸ್ಟೋರ್ ಮ್ಯಾನೇಜರ್ ಯಶ್ಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.











