ಬೆಳ್ತಂಗಡಿ: ನವರಾತ್ರಿ ಹಬ್ಬದ ಪ್ರಯುಕ್ತ ಧರ್ಮಸ್ಥಳದಲ್ಲಿ ಅ.11ರಿಂದ 19ರವರೆಗೆ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ನವರಾತ್ರಿ ಅವಧಿಯಲ್ಲಿ ಪ್ರತಿದಿನ ರಾತ್ರಿ ಅಮ್ಮನವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಡೆಯಲಿದೆ. ಇದರೊಂದಿಗೆ ಪ್ರತಿದಿನ ಸಂಜೆ 6ರಿಂದ ರಾತ್ರಿ 9ರವರೆಗೆ ದೇವಸ್ಥಾನದ ಎದುರಿನ ಪ್ರವಚನ ಮಂಟಪದಲ್ಲಿ ನಾಡಿನ ಖ್ಯಾತ ಕಲಾವಿದರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ.

ಕಾರ್ಯಕ್ರಮಗಳ ವಿವರ:ಅ.11, ಭಾನುವಾರ: ಕುಮಾರಿ ಪ್ರಾಪ್ತಿ ಶೆಟ್ಟಿ, ಧರ್ಮಸ್ಥಳ ಹಾಗೂ ಕುಮಾರಿ ಆದ್ವಿ ನಿಡಗಲ್ ಅವರಿಂದ ಭಕ್ತಿಸಂಗೀತ.ಅ.12, ಸೋಮವಾರ: ಪವಿತ್ರ ವಿನಯ್ ಮಯ್ಯ ಅರ್ಕುಳ, ಮಂಗಳೂರು ಅವರಿಂದ ಸುಗಮ ಸಂಗೀತ.ಅ.13, ಮಂಗಳವಾರ: ಕುಮಾರಿ ಮಾನ್ಸಿ, ಮೈಸೂರು ಅವರಿಂದ ಭಕ್ತಿಸಂಗೀತ.ಅ.14, ಬುಧವಾರ: ಮಾಸ್ಟರ್ ಆಗಮ ಪೆರ್ಲ, ಮಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.ಅ.15, ಗುರುವಾರ: ಕುಮಾರಿ ಧೃತಿ ಬಿ. ಆತ್ರೇಯಾಸ್, ಕುಮಾರಿ ಧನ್ವಿ ಬಿ. ಆತ್ರೇಯಾಸ್ ಹಾಗೂ ಅಸ್ರಮೇಯ ಗುರುಪ್ರಸಾದ್, ಬೆಂಗಳೂರು ಅವರಿಂದ ನೃತ್ಯ ಹಾಗೂ ಗಾನಲಹರಿ.ಅ.16, ಶುಕ್ರವಾರ: ಸನತ್ ಕುಮಾರ್, ಬೆಂಗಳೂರು ಅವರಿಂದ ವಯಲಿನ್ ವಾದನ.ಅ.17, ಶನಿವಾರ: ಕುಮಾರಿ ಮಯೂರಿ ಭಟ್, ಪೊಳಲಿ, ಬಂಟ್ವಾಳ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ.ಅ.18, ಭಾನುವಾರ: ಕುಮಾರಿ ಐಶ್ವರ್ಯ ಜೋಗಿ ಹಾಗೂ ತಂಡ, ಕುಂದಾಪುರ ಇವರಿಂದ ಸುಮಧುರ ಗಾನವೈಭವ.ಅ.19, ಸೋಮವಾರ: ಸಂಜೆ 6.30ರಿಂದ ರಾತ್ರಿ 8.30ರವರೆಗೆ ಕುಮಾರಿ ಅರ್ಚಿಷಾ ರಾವ್ ಹಾಗೂ ಬಳಗ, ಬೆಂಗಳೂರು ಇವರಿಂದ ಹಾಗೂ ರಾತ್ರಿ 9ರಿಂದ 11.30ರವರೆಗೆ ಮಲ್ಲಿಕಾಮಟ್ಟಿ ಹಾಗೂ ಬಳಗ, ಪೊಳಲಿ ಇವರಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಲಿದೆ.

ನವರಾತ್ರಿ ಪ್ರಯುಕ್ತ ನಡೆಯಲಿರುವ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಧರ್ಮಸ್ಥಳದ ಆಡಳಿತ ಮಂಡಳಿ ಮನವಿ ಮಾಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!