ಫ್ಲೈದುಬೈ ವಿಮಾನದ ಕಾಕ್‌ಪಿಟ್‌ ನಲ್ಲಿ ದಾಳಿ ನಡೆದಾಗ ಗಂಭೀರವಾಗಿ ಗಾಯಗೊಂಡಿದ್ದರೂ ಧೈರ್ಯ ಕಳೆದುಕೊಳ್ಳದೆ ಕಾಕ್‌ಪಿಟ್ ಬಾಗಿಲು ತೆರೆದು, ಸಂಭವಿಸಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಲು ನೆರವಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರಿಗೆ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಗೌರವ ಸಲ್ಲಿಸಿದೆ.

ಸೆಪ್ಟೆಂಬರ್ 30ರಂದು ‘ಫ್ಲೈದುಬೈ’ ವಿಮಾನದಲ್ಲಿ ನಡೆದ ಘಟನೆಯ ವೇಳೆ ಕ್ಯಾಪ್ಟನ್ ಮಚ್ಚಾರ್ ಗಂಭೀರವಾಗಿ ಗಾಯಗೊಂಡಿದ್ದರು. ಈ ಸ್ಥಿತಿಯಲ್ಲೂ ಅವರು ಕಾಕ್‌ಪಿಟ್ ಬಾಗಿಲು ತೆರೆದು ಸಿಬ್ಬಂದಿ ಮತ್ತು ಪ್ರಯಾಣಿಕರು ಮಧ್ಯಪ್ರವೇಶಿಸಲು ನೆರವಾಗಿದ್ದರು. ಅವರ ಧೈರ್ಯ ಮತ್ತು ಸಮಯೋಚಿತ ಕ್ರಮದಿಂದ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಸಾಧ್ಯವಾಗಿತ್ತು.ಕ್ಯಾಪ್ಟನ್ ಮಚ್ಚಾರ್ ಸೇರಿದಂತೆ ಘಟನೆಯಲ್ಲಿ ಭಾಗಿಯಾಗಿದ್ದ ವಿಮಾನ ಸಿಬ್ಬಂದಿಗೆ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅಲ್ ನಹ್ಯಾನ್ ಅವರು ‘ಫಸ್ಟ್ ಕ್ಲಾಸ್ ಆರ್ಡರ್ ಆಫ್ ಝಾಯೆದ್ II’ ಪ್ರಶಸ್ತಿ ಪ್ರದಾನ ಮಾಡಿದ್ದಾರೆ. ತುರ್ತು ಪರಿಸ್ಥಿತಿಯಲ್ಲಿ ಪ್ರಯಾಣಿಕರ ಜೀವ ರಕ್ಷಣೆ ಮತ್ತು ವಿಮಾನದ ಸುರಕ್ಷತೆಗಾಗಿ ಸಿಬ್ಬಂದಿ ತೋರಿದ ಧೈರ್ಯ ಹಾಗೂ ವೃತ್ತಿಪರತೆಯನ್ನು ಗುರುತಿಸಿ ಈ ಗೌರವ ನೀಡಲಾಗಿದೆ.’ಧೈರ್ಯ, ಜವಾಬ್ದಾರಿಗೆ ಮೆಚ್ಚುಗೆ’ದುಬೈನ ಯುವರಾಜ, ಉಪ ಪ್ರಧಾನ ಮಂತ್ರಿ, ರಕ್ಷಣಾ ಸಚಿವ ಹಾಗೂ ದುಬೈ ಕಾರ್ಯಕಾರಿ ಮಂಡಳಿಯ ಅಧ್ಯಕ್ಷ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರು ಸಿಬ್ಬಂದಿಗೆ ಗೌರವ ಪ್ರದಾನ ಮಾಡಿದರು

ಮಂಗಳವಾರ ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಝಾಯೆದ್ ಅವರು, ದುಬೈ ಆಡಳಿತಗಾರ, ಉಪಾಧ್ಯಕ್ಷ ಮತ್ತು ಪ್ರಧಾನ ಮಂತ್ರಿ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಮ್ಮುಖದಲ್ಲಿ ವಿಮಾನ ಸಿಬ್ಬಂದಿಯನ್ನು ಭೇಟಿಯಾದರು.ಪ್ರಯಾಣಿಕರ ರಕ್ಷಣೆ ಮತ್ತು ವಿಮಾನದ ಸುರಕ್ಷತೆಗಾಗಿ ಸಿಬ್ಬಂದಿ ತೋರಿದ ಧೈರ್ಯ ಹಾಗೂ ವೃತ್ತಿಪರತೆಯನ್ನು ಯುಎಇ ನಾಯಕತ್ವ ಶ್ಲಾಘಿಸಿತು. ಜನರ ಸುರಕ್ಷತೆಯನ್ನು ಕಾಪಾಡುವುದು ದೇಶದ ಪ್ರಮುಖ ಆದ್ಯತೆಯಾಗಿದೆ ಎಂದು ಈ ಸಂದರ್ಭದಲ್ಲಿ ಪುನರುಚ್ಚರಿಸಲಾಯಿತು. ಗೌರವ ಸ್ವೀಕರಿಸಿದ ಸಿಬ್ಬಂದಿ ಯುಎಇ ಅಧ್ಯಕ್ಷರಿಗೆ ಧನ್ಯವಾದ ಅರ್ಪಿಸಿ, ಪ್ರಶಸ್ತಿ ದೊರೆತಿದ್ದಕ್ಕೆ ಹೆಮ್ಮೆ ವ್ಯಕ್ತಪಡಿಸಿದರು.ಅಕ್ಟೋಬರ್ 3ರಂದು ಗಾಯಗಳಿಗೆ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಪ್ಟನ್ ಮಚ್ಚಾರ್ ಅವರನ್ನು ಶೇಖ್ ಹಮ್ದಾನ್ ಭೇಟಿಯಾಗಿದ್ದರು. ಮಚ್ಚಾರ್ ಅವರ ಧೈರ್ಯ, ಜವಾಬ್ದಾರಿ ಮತ್ತು ಮಾನವ ಜೀವದ ಬಗ್ಗೆ ಕಾಳಜಿಯನ್ನು ಶ್ಲಾಘಿಸಿದ್ದ ಅವರು, “ನಮ್ಮ ಕಡೆಯಿಂದ ಮತ್ತು ರಾಷ್ಟ್ರದ ನಾಯಕತ್ವದ ಕಡೆಯಿಂದ ಅವರಿಗೆ ಸಂಪೂರ್ಣ ಮೆಚ್ಚುಗೆ ಮತ್ತು ಪ್ರಶಂಸೆ ಸಲ್ಲುತ್ತದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದರು.

ಯುಎಇ ತನ್ನ ತಂಡದಲ್ಲಿ ಕ್ಯಾಪ್ಟನ್ ಮಚ್ಚಾರ್ ಅವರಿರುವುದಕ್ಕೆ ಹೆಮ್ಮೆಪಡುತ್ತದೆ ಎಂದೂ ಹೇಳಿದ್ದ ಶೇಖ್ ಹಮ್ದಾನ್, ದೇಶವನ್ನು ‘ಕರುಣೆಯ ರಾಷ್ಟ್ರ, ಶಾಂತಿಯ ರಾಷ್ಟ್ರ ಮತ್ತು ಜೀವದ ರಾಷ್ಟ್ರ’ ಎಂದು ಬಣ್ಣಿಸಿದ್ದರು.ಈ ಘಟನೆಯನ್ನು ನಿಯಂತ್ರಣಕ್ಕೆ ತರಲು ನೆರವಾದ ಕ್ಯಾಪ್ಟನ್ ಮಚ್ಚಾರ್, ಸಿಬ್ಬಂದಿ ಮತ್ತು ಪ್ರಯಾಣಿಕರನ್ನು ಯುಎಇಯ ಜನರಲ್ ಸಿವಿಲ್ ಏವಿಯೇಷನ್ ಅಥಾರಿಟಿ ಕೂಡ ಶ್ಲಾಘಿಸಿತ್ತು.ಮೋದಿ, ನೆತನ್ಯಾಹು, ಟ್ರಂಪ್‌ ರಿಂದಲೂ ಪ್ರಶಂಸೆಕ್ಯಾಪ್ಟನ್ ಮಚ್ಚಾರ್ ಅವರ ಧೈರ್ಯಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ‘ಲೀಡರ್’ ಎಂದು ಕರೆದಿದ್ದಾರೆ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಶೌರ್ಯವನ್ನು ಕೊಂಡಾಡಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ತೀವ್ರವಾಗಿ ಗಾಯಗೊಂಡಿದ್ದರೂ ಕಾಕ್‌ಪಿಟ್ ಬಾಗಿಲು ತೆರೆದಿದ್ದಕ್ಕಾಗಿ ಮಚ್ಚಾರ್ ಅವರನ್ನು ಶ್ಲಾಘಿಸಿದ್ದಾರೆ.ಇಸ್ರೇಲ್ ಕೂಡ ಕ್ಯಾಪ್ಟನ್ ಮಚ್ಚಾರ್ ಅವರಿಗೆ ನಾಗರಿಕ ಧೈರ್ಯ ಪ್ರಶಸ್ತಿಯನ್ನು ಘೋಷಿಸಿದೆ. ಗಾಯಗಳಿಂದ ಚೇತರಿಸಿಕೊಂಡ ಬಳಿಕ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!