
ಪುತ್ತೂರಿನ ಆ್ಯಂಬುಲೆನ್ಸ್ ಮಂಗಳೂರಿನಲ್ಲಿ ಪಲ್ಟಿ !
ಹೃದ್ರೋಗಿ ಮೃತ್ಯು
ಪುತ್ತೂರು: ಪುತ್ತೂರಿನ ಆ್ಯಂಬುಲೆನ್ಸ್ ವೊಂದು ಮಂಗಳೂರಿಗೆ ತೆರಳುತ್ತಿದ್ಸ ವೇಳೆ ಮಂಗಳೂರಿಬಲ್ಲಿ ಪಲ್ಟಿಯಾದ ಮತ್ತು ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿಯೊಬ್ಬರು ಮೃತ ಪಟ್ಟ ಘಟನೆ ಸೆ.೨೫ ರ ನಸುಕಿನ ಜಾವ ನಡೆದಿದೆ.
ರಾಮಕುಂಜ ಹಳೆನೇರೆಂಕಿ ನಿವಾಸಿ ಕೃಷಿಕ ದಾಸಪ್ಪ ರೈ (೭೦ವ) ರವರು ಮೃತಪಟ್ಟವರು. ಎದೆ ನೋವು ಕಾಣಿಸಿಕೊಂಡ ದಾಸಪ್ಪ ರೈ ಅವರನ್ನು ತಡ ರಾತ್ರಿ ಪುತ್ತೂರು ಮಹಾವೀರ ಆಸ್ಪತ್ರೆಗೆ ಕರೆದು ಕೊಂಡು ಬಂದಾಗ ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಯ ವಠಾರದಲ್ಲಿದ್ದ ಇನ್ನೋವ ಆ್ಯಂಬುಲೆನ್ಸ್ ನಲ್ಲಿ ಮಂಗಳೂರು ಫಸ್ಟ್ ನ್ಯೂರೋ ಆಸ್ಪತ್ರೆಗೆ ಕರೆದು ಹೋಗುತ್ತಿರುವಾಗ ಮಂಗಳೂರು ಪಡೀಲು ಸಮೀಪ ಆ್ಯಂಬುಲೆನ್ಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅಪಘಾತದ ತೀರ್ವತೆಗೆ ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿ ದಾಸಪ್ಪ ರೈ ಅವರನ್ನು ನೋಡುವಾಗ ಮೃತಪಟ್ಟಿದ್ದರು. ಜೊತೆಯಲ್ಲಿದ್ದ ಅವರ ಪತ್ನಿ ನಳಿನಿ ತೀವ್ರ ಗಾಯಗೊಂಡು ಮಂಗಳೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಉಳಿದಂತೆ ಅವರ ಪುತ್ರ ಹರ್ಷಿತ್ ಮತ್ತು ದಾಸಪ್ಪ ರೈ ಅವರ ಸಂಬಂಧಿ ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ.







