ಬೆಂಗಳೂರು (ಸೆ.25): ಕಳೆದ ಮೂರ್ನಾಲ್ಕು ದಿನಗಳಿಂದ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಬೆಂಗಳೂರು ಮಹಿಳೆಯ ಭೀಕರ ಕೊಲೆ ಪಗ್ರಕರಣದ ಆರೋಪಿ ಸಿಕ್ಕಿ ಬಿದ್ದಿದ್ದಾನೆ. ಬೆಂಗಳೂರಿನ ವೈಯಾಲಿಕಾವಲ್ ಮನೆಯಲ್ಲಿ ವಾಸವಾಗಿದ್ದ ನೇಪಾಳಿ ಕನ್ನಡತಿ ಮಹಾಲಕ್ಷ್ಮಿಯನ್ನು ಭೀಕರವಾಗಿ ಕೊಲೆ ಮಾಡಿ ಆಕೆಯ ದೇಹದ ಮಾಂಸವನ್ನು ಫ್ರಿಡ್ಜ್‌ನಲ್ಲಿ ತುಂಬಿಟ್ಟು ಪರಾರಿ ಆಗಿದ್ದವನು ಬೇರಾರೂ ಅಲ್ಲ, ಆಕೆಯ ಸಹೋದ್ಯೋಗಿ ಎಂಬುದು ಬಯಲಾಗಿದೆ.
ಕೊಂದು ತುಂಡು ತುಂಡಾಗಿ ಕತ್ತರಿಸಿದ್ದ ಆರೋಪಿಯ ಬಗ್ಗೆ ಪೋಟೋ ಸಮೇತ ರಿವೀಲ್ ಮಾಡುತ್ತಿದೆ. ಮಹಾಲಕ್ಷ್ಮಿಯನ್ನ ಕೊಲೆ ಮಾಡಿದ್ದು ಬೇರೆ ಯಾರು ಅಲ್ಲ ಆಕೆಯ ಜೊತೆ ಕೆಲಸ ಮಾಡುತ್ತಿದ್ದ ವ್ಯಕ್ತಿ. ಮಹಾಲಕ್ಷ್ಮಿ ಜೊತೆ ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಆಕೆಯನ್ನ ಕೊಂದಿದ್ದು. ಫ್ಯಾಶನ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಟೀಮ್ ಹೆಡ್ ಮುಕ್ತಿ ರಂಜನ್ ರಾಯ್ ನಿಂದಲೇ ಕೊಲೆಯಾಗಿದೆ ಎಂಬ ಸತ್ಯಾಂಶ ಬಯಲಾಗಿದೆ.
ಒರಿಸ್ಸಾ ಮೂಲದ ಮುಕ್ತಿ ರಂಜನ್ ರಾಯ್ ಹೆಬ್ಬಗೋಡಿಯಲ್ಲಿ ನೆಲೆಸಿದ್ದನು. ತಮ್ಮನೊಂದಿಗೆ ಹೆಬ್ಬಗೋಡಿಯಲ್ಲಿ ವಾಸವಿದ್ದು ಪ್ರತಿನಿತ್ಯ ಮಲ್ಲೇಶ್ವರಂನ ಫ್ಯಾಶನ್ ಫ್ಯಾಕ್ಟರಿಯಲ್ಲಿ ಟೀಂ ಹೆಡ್ ಆಗಿ ಕೆಲಸ ಮಾಡುತ್ತಿದ್ದನು. ಈ ವೇಳೆ ಅದೇ ಸ್ಟೋರ್‌ನಲ್ಲಿ ಕೆಲಸ ಮಾಡುತ್ತಿದ್ದ ಮಹಾಲಕ್ಷ್ಮಿಯನ್ನ ರಂಜನ್ ಪ್ರೀತಿಸುತ್ತಿದ್ದನು. ಇಬ್ಬರ ನಡುವೆ ಅದೇನಾಯ್ತೋ ಏನೋ ಮಹಾಲಕ್ಷ್ಮಿಯನ್ನ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದಾನೆ. ಕಳೆದ ಸೆ.1ನೇ ತಾರೀಖು ಮಹಾಲಕ್ಷ್ಮಿ ಹಾಗೂ ಮುಕ್ತಿ ಇಬ್ಬರೂ ಕೆಲಸಕ್ಕೆ ಹಾಜರಾಗಿದ್ದರು. ಮಾರನೇ ದಿನ ಅಂದರೆ ಸೆಪ್ಟೆಂಬರ್ 2ನೇ ತಾರೀಖು ಮಹಾಲಕ್ಷ್ಮಿ ವಾರದ ರಜೆ ಪಡೆದಿದ್ದಳು. ವಾರದ ರಜೆ ಪಡೆದು ನೆಲಮಂಗಲದ ತಾಯಿ ಮನೆಗೆ ಬರುವುದಾಗಿ ಹೇಳಿದ್ದಳು.
ನೆಲಮಂಗಲದಲ್ಲಿದ್ದ ತಾಯಿ ಹಾಗೂ ಕುಟುಂಬಸ್ಥರಿಗೆ ಕರೆ ಮಾಡಿ ನಿಮ್ಮನ್ನು ಭೆಟಿ ಮಾಡಲು ಬರೋದಾಗಿ ಮಹಾಲಕ್ಷ್ಮಿ ಹೇಳಿದ್ದಳು. ಆದರೆ, ಸೆ.2 ತಾರೀಖು ಮಹಾಲಕ್ಷ್ಮಿ ಕುಟುಂಬಸ್ಥರ ಸಂಪರ್ಕಕ್ಕೆ ಬಂದಿರಲಿಲ್ಲ. ಅದಾದ ಬಳಿಕ ಕುಟುಂಬಸ್ಥರ ಕಣ್ಣಿಗೆ ಮಹಾಲಕ್ಷ್ಮಿ ಫ್ರಿಡ್ಜ್‌ನಲ್ಲಿ ತುಂಡು ತುಂಡಾದ ಶವವಾಗಿ ಪತ್ತೆ ಆಗಿದ್ದಾಳೆ. ಸದ್ಯ ಮಹಾಲಕ್ಷ್ಮಿಯನ್ನ ಭೀಕರವಾಗಿ ಕೊಂದು ಪರಾರಿಯಾಗಿರೋ ಮುಕ್ತಿ ರಂಜನ್ ಮೂಲ ಒಡಿಶಾದವನು. ಈತ ಪೊಲೀಸರ ಕಣ್ತಪ್ಪಿಸಿ ಪರಾರಿ ಆಗಲೆಂದೇ ತಮ್ಮ ಮನೆಗೂ ಹೋಗದೇ ಪಶ್ಚಿಮ ಬಂಗಾಳಕ್ಕೆ ಹೋಗಿದ್ದಾನೆ. ಇದೀಗ ಪೋನ್ ಬಳಸದೇ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಓಡಾಡುತ್ತಿದ್ದು, ಕರ್ನಾಟಕ ಪೊಲೀಸರು ಆರೋಪಿಯನ್ನು ಬಂಧಿಸಲು ಪಶ್ಚಿಮ ಬಂಗಾಳಕ್ಕೆ ತೆರಳಿದ್ದಾರೆ.