
ಬೆಂಗಳೂರು : ನಗರದಲ್ಲಿ ಮತ್ತೋರ್ವ ಶಂಕಿತ ಉಗ್ರನ ಬಂಧನ ಮಾಡಿದ್ದು ಅಸ್ಸಾಂ ಎನ್‌ಐಎ ಅಧಿಕಾರಿಗಳಿಂದ ಶಂಕಿತ ಉಗ್ರನನ್ನ ನಿನ್ನೆ ಬೆಂಗಳೂರಿನ ಜಿಗಣಿಯಲ್ಲಿ ಅರೆಸ್ಟ್ ಮಾಡಲಾಗಿದೆ
ಗಿರಿಶ್ ಬೋರಾ @ ಗೌತಮ್ ಬಂಧಿತ ಶಂಕಿತ ಉಗ್ರನಾಗಿದ್ದು ಬೆಂಗಳೂರು ಗ್ರಾಮಾಂತರದ ಜಿಗಣಿಯಲ್ಲಿ ಶಂಕಿತ ಉಗ್ರನ ಬಂಧಿಸಲಾಗಿದೆ.
ಉಲ್ಫಾ ಸಂಘಟನೆಗೆ ಸೇರಿರುವ ಶಂಕಿತ ಉಗ್ರ ಆಗಿದ್ದು ಗುವಾಹತಿಯಲ್ಲಿ IED ಬಾಂಬ್ ಇಟ್ಟು ಬೆಂಗಳೂರಿಗೆ ಬಂದಿದ್ದ ಶಂಕಿತ ಫ್ಯಾಮಿಲಿ ಸಮೇತ ಬೆಂಗಳೂರಿಗೆ ಬಂದು ವಾಸವಾಗಿದ್ದು ಖಾಸಗಿ ಕಂಪನಿಯಲ್ಲಿ ಸೆಕ್ಯೂರಿಟಿಯಾಗಿ ಕೆಲಸಕ್ಕೆ ಸೇರಿದ್ದ ಶಂಕಿತ ಉಗ್ರ.
ಗೌತಮ್ ಎನ್ನುವ ಹೆಸರಲ್ಲಿ ಸೆಕ್ಯುರಿಟಿಯಾಗಿ ಕೆಲಸ ಮಾಡುತ್ತಿದ್ದು ಈ ಬಗ್ಗೆ ಪಕ್ಕಾ ಮಾಹಿತಿ ಆಧರಿಸಿ ಶಂಕಿತ ಉಗ್ರನ ಬಂಧನ ಮಾಡಲಾಗಿದ್ದು ಆಗಸ್ಟ್ ನಲ್ಲಿ ಗುವಾಹತಿಯಲ್ಲಿ ಬಾಂಬ್ ಇಟ್ಟಿದ್ದ ಶಂಕಿತ ಸುಮಾರು ಐದು IED ಬಾಂಬ್ ಗಳನ್ನ ಇಟ್ಟಿದ್ದ.ಬೆಂಗಳೂರಿನ ಜಿಗಣಿಗೆ ಬಂದು ವಾಸವಿದ್ದ ಶಂಕಿತ ಇಲ್ಲಿಯೂ ಒಂದಷ್ಟು ಪ್ಲಾನ್ ಗಳನ್ನ ನಡೆಸ್ತಿದ್ದ ಅನುಮಾನ.
ಸದ್ಯ ಶಂಕಿತನನ್ನ ಬಂಧಿಸಿರೋ ಅಸ್ಸಾಂ ಎನ್‌ಐಎ ಟೀಂಬಂಧಿತನಿಂದ ಮೊಬೈಲ್ ಮತ್ತು ಒಂದಷ್ಟು ದಾಖಲೆಗಳು ವಶಕ್ಕೆ ಪಡೆದಿದ್ದು ಇಲ್ಲಿನ ನ್ಯಾಯಾಲಯಕ್ಕೆ ಹಾಜರುಪಡಿಸಿ ಅಸ್ಸಾಂಗೆ ಕರೆದೊಯ್ದಿರೋ ಎನ್‌ಐಎ ಟೀಂ







