ಬೆಂಗಳೂರು, (ಸೆಪ್ಟೆಂಬರ್ 27): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ವಿಕೃತ ಕಾಮಿಗಳ ಸಂಖ್ಯೆ ಹೆಚ್ಚಾಗಿತ್ತಿದೆ. ಇತ್ತೀಚೆಗೆ ಕಬ್ಬನ್ ಪಾರ್ಕ್‌ನಲ್ಲೊಬ್ಬ, ಜಯನಗರದ ಮಹಿಳಾ ಕಾಲೇಜಿನ ಬಳಿ ಒಬ್ಬ ತಮ್ಮ ಮ್ಮ ಖಾಸಗಿ ಅಂಗಾಂಗವನ್ನು ತೋರಿಸಿ ವಿಕೃತಿ ಮೆರೆದಿದ್ದ. ಇದೀಗ ಇದೇ ರೀತಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ರಾಜಾಜಿನಗರದಲ್ಲಿ ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುವ ಯುವತಿಯೊಬ್ಬಳಿಗೆ ಆಟೋ ಚಾಲಕ ತನ್ನ ಪ್ಯಾಂಟ್ ಬಿಚ್ಚಿ ಖಾಸಗಿ ಭಾಗವನ್ನು ತೋರಿಸಿ ವಿಕೃತಿ ಮೆರೆದಿದ್ದಾನೆ. ಅದೂ ಕೂಡ ಹಾಡ ಹಗಲೇ ತೀರಾ ವಿಕೃತಿಯ ರೀತಿಯಲ್ಲಿ ಮಹಿಳೆ ಮುಂದೆ ಎರಡೆರೆಡು ಬಾರಿ ಪ್ಯಾಂಟ್ ಬಿಚ್ಚಿ ಅಂಗಾಂಗ ತೋರಿಸಿದ್ದಾನೆ.

ಇಂದು (ಸೆಪ್ಟೆಂಬರ್ 27) ಯುವತಿ ಮಧ್ಯಾಹ್ನ ಊಟಕ್ಕೆಂದು ಬ್ಯೂಟಿ ಪಾರ್ಲರ್ ನಿಂದ ಅನತಿ ದೂರದಲ್ಲಿದ್ದ ಮನೆಗೆ ಹೋಗುವಾಗ ಈಸ್ಟ್ ವೆಸ್ಟ್ ಕಾಲೇಜು ಬಳಿ ಫಾಲೋ ಮಾಡಿಕೊಂಡು ಬಂದ ಆಟೋ ಚಾಲಕ, ಯಾರೂ ಇಲ್ಲದ ಸಮಯ ನೋಡಿ ಪ್ಯಾಂಟ್ ಜಿಪ್ ಬಿಚ್ಚಿ ಖಾಸಗಿ ಅಂಗ ಪ್ರದರ್ಶಿಸಿದ್ದಾನೆ. ಆಟೋ ಚಾಲಕನ ಲೈಂಗಿಕ ಚೇಷ್ಟೆಗೆ ಬ್ಯೂಟಿಷಿಯನ್ ಯುವತಿ ಬೆಚ್ಚಿ ಬಿದ್ದಿದ್ದಾಳೆ. ಆ ವೇಳೆ ಭಯದಿಂದ ಯುವತಿ ತನ್ನ ಕಾಲಲ್ಲಿದ್ದ ಚಪ್ಪಲಿ ಕಿತ್ತುಕೊಂಡು ಎಸೆದಿದ್ದಾಳೆ. ಬಳಿಕ ಆಟೋ ಚಾಲಕ ಅಲ್ಲಿಂದ ಪರಾರಿಯಾಗಿದ್ದಾನೆ.

ಇದಾದ ಬಳಿಕ ಸ್ವಲ್ಪ ಹೊತ್ತಿನಲ್ಲೇ ಸೈಕೋಪಾತ್ ಆಟೋ ಚಾಲಕ, ಮತ್ತೆ ಯುವತಿ ಮುಂದೆ ಬಂದು ಮತ್ತೆ ಖಾಸಗಿ ಅಂಗ ತೋರಿಸಿ ವಿಕೃತಿ ಮೆರೆದಿದ್ದಾನೆ. ಇದನ್ನ ಕಂಡ ಯುವತಿ ಬೊಬ್ಬೆ ಹಾಕಿದ್ದಾಳೆ. ಬಳಿಕ ಏನಾಯ್ತು ಎಂದು ಸ್ಥಳೀಯರು ಆಗಮಿಸುತ್ತಿದ್ದಂತೆಯೇ ಸೈಕೋ ಆಟೋ ಚಾಲಕ ಎಸ್ಕೇಪ್ ಆಗಿದ್ದಾನೆ. ಈ ಸಂಬಂಧ ಯುವತಿ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.

ಅದು ಕೂಡ ಈತ ಒಂದು ಬಾರಿಯಾದರೆ ನೋಡಿಯೂ ನೋಡದಂತೆ ಸುಮ್ಮನಿದ್ದುಬಿಡಬಹುದು. ಆದರೆ, ಎರಡೆರಡು ಬಾರಿ ಅದೇ ಯುವತಿಯನ್ನು ಟಾರ್ಗೆಟ್ ಮಾಡಿಕೊಂಡು ಬಂದು ಹೀಗೆ ವರ್ತಿಸಿದ್ದಾರೆ. ರಾಜಾಜಿನಗರದಲ್ಲಿ ಬ್ಯೂಟಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಯುವತಿಯ ಎಲ್ಲ ಚಟುವಟಿಕೆಗಳನ್ನು ಈತ ಗಮನಿಸಿದ್ದ. ಆಗ ಬ್ಯೂಟಿ ಪಾರ್ಲರ್ ಇರುವ ಸ್ಥಳದಲ್ಲಿ ಜನರು ಇಲ್ಲದ ವೇಳೆ ಈ ಯುವತಿ ತನಗೆ ಎಲ್ಲಾದರೂ ಒಬ್ಬಂಟಿಯಾಗಿ ಸಿಗುತ್ತಾಳೆಯೇ ಎಂದು ಗಮನಿಸಿ ಈ ರೀತಿ ಮಾಡಿದ್ದಾನೆ.

Leave a Reply

Your email address will not be published. Required fields are marked *

Join WhatsApp Group
error: Content is protected !!