
ಪುತ್ತೂರು :ಕಾಲೇಜಿಗೆ ಬಸ್ಸಿನಲ್ಲಿ ಬರುತ್ತಿರುವಾಗ ಯುವತಿಗೆ ಅನ್ಯ ಧರ್ಮಿಯ ಅಪ್ರಾಪ್ತ ಬಾಲಕನೊಬ್ಬ ಕಿರುಕುಳ ನೀಡಿದ ಬಗ್ಗೆ ಸಂತ್ರಸ್ತ ವಿದ್ಯಾರ್ಥಿನಿ ಪುತ್ತೂರು ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. 19ರ ಹರೆಯದ ಸಂತ್ರಸ್ತ ವಿದ್ಯಾರ್ಥಿನಿಯು ಪುತ್ತೂರು ಕಾಲೇಜೊಂದರ ವಿದ್ಯಾರ್ಥಿನಿ.ಈಕೆ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿಯಾಗಿದ್ದು, ಅಲ್ಲಿಂದ ಕಾಲೇಜಿಗೆ ಬಸ್ಸಿನಲ್ಲಿ ಬರುತ್ತಿರುವಾಗ ಘಟನೆ ನಡೆದಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ. ಬಸ್ಸಿನಲ್ಲಿ ಪುತ್ತೂರಿನ ಪ್ರೌಢ ಶಾಲೆಯೊಂದರ ಎಸ್ ಎಸ್ ಎಲ್ ಸಿ ವಿದ್ಯಾರ್ಥಿ ಯುವತಿಯ ಜತೆ ಅಸಭ್ಯವಾಗಿ ವರ್ತಿಸಿದ್ದಾನೆ ಎನ್ನಲಾಗಿದೆ.
ಬಾಲಕ ಬಸ್ಸಿನಿಂದ ಇಳಿಯುತ್ತಿದ್ದಂತೆ ಸಾರ್ವಜನಿಕರು ಅವನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ವೇಳೆ ಬಾಲಕ ತಾನು ಗೇರುಕಟ್ಟೆ ನಿವಾಸಿ ಎಂದು ತಿಳಿಸಿದ್ದು, ಬಾಲಕನ ಮಾವ ಹಾಗೂ ಚಿಕ್ಕಪ್ಪನ ಪ್ರಚೋಧನೆ ಮೇರೆಗೆ ಕೃತ್ಯ ಎಸಗಿರುವುದಾಗಿ ತಪ್ರೊಪ್ಪಿಕೊಂಡಿರುವುದಾಗಿ ಹೇಳಲಾಗುತ್ತಿದೆ
ಈ ಹಿನ್ನಲೆಯಲ್ಲಿ ಪುತ್ತೂರು ಬಿಜೆಪಿ ನಿಯೋಗವು ಪುತ್ತೂರು ಮಹಿಳಾ ಠಾಣೆಗೆ ತೆರಳಿ ಬಾಲಕನ ಮೇಲೆ ಹಾಗೂ ಆತನಿಗೆ ಪ್ರಚೋಧನೆ ನೀಡಿದ ಆತನ ಸಂಬಂಧಿಕರ ಮೇಲೂ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು, ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಉಜಿರೆಮಾರು, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಮಾರ್ತ, ತಾ.ಪಂ ಮಾಜಿ ಅಧ್ಯಕ್ಷೆ ಪುಲಸ್ಯ ರೈ, ಮುಖಂಡರಾದ ಹರಿಪ್ರಸಾದ್ ಯಾದವ್, ಮುರಳಿಕೃಷ್ಣ ಹಸಂತಡ್ಕ, ಸುನೀಲ್ ಆಳ್ವ, ಹರಿಪ್ರಸಾದ್ ಯಾದವ್, ಹರೀಶ್ ಬಿಜತ್ರೆ, ಯುವರಾಜ್ ಪೆರಿಯತ್ತೋಡಿ, ಸಹಿತ ಹಲವರು ನಿಯೋಗದಲ್ಲಿದ್ದರು
