ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಗೆ ಇಂದು ಒಂದೇ ಹಂತದಲ್ಲಿ ಮತದಾನ ನಡೆಯಿತು.

ಇಂದು ಚುನಾವಣೋತ್ತರ ಸಮೀಕ್ಷೆಯ ಹೊರ ಬಿದ್ದಿದೆ. ಹರಿಯಾಣದಲ್ಲಿ ಎಬಿಪಿ ನ್ಯೂಸ್ ಚುನಾವಣೋತ್ತರ ಸಮೀಕ್ಷೆ ನಡೆಸಿದೆ.

ಒಟ್ಟು 90 ಕ್ಷೇತ್ರಗಳಲ್ಲಿ ರಾಜ್ಯದ ಅಧಿಕಾರ ಯಾರ ಕೈ ಸೇರಲಿದೆ. ಅತ್ಯಧಿಕ ಮತ ಪಡೆದ ಪಕ್ಷದ ಯಾವುದು ಎಂಬ ಮಾಹಿತಿ ಇಲ್ಲಿದೆ.

ಬಿಜೆಪಿ 2014 ರಿಂದಲೂ ಎರಡು ಬಾರಿ ಗೆದ್ದು ಬೀಗಿದೆ. ಕಳೆದ ಬಾರಿ ಜೆಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚನೆ ಮಾಡಿತ್ತು. ಈ ಬಾರಿ ಆಡಳಿತ ವಿರೋಧಿ ಅಲೆ ಎದುರಿಸಿತ್ತು ಎನ್ನಲಾಗಿದೆ. ಹೀಗಾಗಿ ಇಲ್ಲಿ ಗೆಲುವು ಕಷ್ಟ ಎನ್ನಲಾಗುತ್ತಿದೆ. ಬಿಜೆಪಿ ವಿರುದ್ಧ ನಿರುದ್ಯೋಗ ಸೇರಿದಂತೆ ಕೆಲವು ಸ್ಥಳೀಯ ಸಂಸ್ಥೆಗಳ ಸಮಸ್ಯೆಗಳನ್ನು ಅಸ್ತ್ರವಾಗಿ ಮಾಡಿಕೊಂಡು ಕಾಂಗ್ರೆಸ್ ತೀವ್ರ ಪೈಪೋಟಿ ಒಡ್ಡಿದೆ.

ಬಿಜೆಪಿ 18-24 ಸ್ಥಾನಗಳನ್ನು ಗೆಲ್ಲಲಿದೆ ಎಂದು ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ.

ಕಾಂಗ್ರೆಸ್ 55-62 ಸ್ಥಾನಗಳೊಂದಿಗೆ ಪುನರಾವರ್ತನೆಯಾಗುವ ನಿರೀಕ್ಷೆಯಿದೆ, ಆದರೆ ಭಾರತೀಯ ರಾಷ್ಟ್ರೀಯ ಲೋಕದಳ (ಐಎನ್‌ಎಲ್‌ಡಿ) 3-6 ಸ್ಥಾನಗಳಿಗೆ ಸೀಮಿತವಾಗುವ ಸಾಧ್ಯತೆಯಿದೆ. ಜನನಾಯಕ ಜನತಾ ಪಕ್ಷ (ಜೆಜೆಪಿ) ಸುಮಾರು 3 ಸ್ಥಾನಗಳನ್ನು ಪಡೆಯುವ ಸಾಧ್ಯತೆಯಿದೆ ಮತ್ತು ಇತರ ಪಕ್ಷಗಳು 2-5 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆಯಿದೆ.

ಸಂಜೆ 5 ಗಂಟೆಯ ಹೊತ್ತಿಗೆ, ಮತದಾನದ ಪ್ರಮಾಣವು 61% ರಷ್ಟಿತ್ತು.

ಹರಿಯಾಣ ಮತಗಟ್ಟೆ ಸಮೀಕ್ಷೆ: (ಒಟ್ಟು ಸ್ಥಾನ 90, ಮ್ಯಾಜಿಕ್ ಸಂಖ್ಯೆ: 46)

ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಕಾಂಗ್ರೆಸ್ 44ರಿಂದ 54 ಸ್ಥಾನಗಳನ್ನುಗಳಿಸಲಿವೆ. ಎನ್‌ಡಿಟಿವಿ ಪೀಪಲ್ಸ್ ಪಲ್ಸ್ ಚುನಾವಣೋತ್ತರ ಸಮೀಕ್ಷೆ ಕೂಡಾ ಕಾಂಗ್ರೆಸ್ ಅಧಿಕಾರ ಬರುವುದಾಗಿ ಅಂದಾಜಿಸಿದೆ. ಪೀಪಲ್ಸ್ ಪಲ್ಸ್ ಪ್ರಕಾರ ಕಾಂಗ್ರೆಸ್‌ಗೆ 49ರಿಂದ 61 ಸ್ಥಾನಗಳು ಸಿಗಲಿವೆ.

ರಾಜ್ಯ ಚುನಾವಣೆ ಆಯೋಗವು ಅಕ್ಟೋಬರ್ 8 ರಂದು ಹರಿಯಾಣ ವಿಧಾನಸಭಾ ಚುನಾವಣೆಯ ಅಧಿಕೃತ ಫಲಿತಾಂಶ ಪ್ರಕಟಗೊಳ್ಳಲಿದೆ.

ಜಮ್ಮು ಮತ್ತು ಕಾಶ್ಮೀರ ಮತಗಟ್ಟೆ ಸಮೀಕ್ಷೆ: (ಒಟ್ಟು ಸ್ಥಾನ 90, ಮ್ಯಾಜಿಕ್ ಸಂಖ್ಯೆ: 46)

ದೈನಿಕ್ ಬಾಸ್ಕರ್ ಮತಗಟ್ಟೆ ಸಮೀಕ್ಷೆ ಪ್ರಕಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಕಾಂಗ್ರೆಸ್‌ಗೆ 35ರಿಂದ 40 ಸ್ಥಾನಗಳು ಸಿಗಲಿವೆ. ಬಿಜೆಪಿ 20ರಿಂದ 25 ಸ್ಥಾನಗಳನ್ನು ಗಳಿಸಿವೆ.

ಎನ್‌ಡಿಟಿವಿ ಪೀಪಲ್ಸ್ ಪಲ್ಸ್ ಪ್ರಕಾರ ಜಮ್ಮು-ಕಾಶ್ಮೀರದಲ್ಲಿ ಕಾಂಗ್ರೆಸ್ ಸರಳ ಬಹುಮತ ಪಡೆಯಲಿದ್ದು, 46ರಿಂದ 50 ಸ್ಥಾನಗಳನ್ನು ಗಳಿಸಲಿದೆ. ಬಿಜಿಪಿಗೆ 23ರಿಂದ 27 ಸ್ಥಾನಗಳು ಪಡೆಯಲಿವೆ ಎಂದು ಅಂದಾಜಿಸಲಾಗಿದೆ

Leave a Reply

Your email address will not be published. Required fields are marked *

Join WhatsApp Group
error: Content is protected !!