ಪುತ್ತೂರು; ತುಳುನಾಡಿನ ಪಾರಂಪರಿಕ ವಿಶಿಷ್ಟ ಸಂಸ್ಕೃತಿಯನ್ನು ಬಿಂಬಿಸುವ ಪಿಲಿಗೊಬ್ಬು ಕೇವಲ ಮನೋರಂಜನೆಯ ಆಟವಾಗಿರದೆ ಧಾರ್ಮಿಕ ನೆಲೆಗಟ್ಟನ್ನೂ ಹೊಂದಿದೆ. ಕೃಷಿ ಬದುಕನ್ನು ದೈವ-ದೇವರುಗಳ ಉಪಾಸನೆ ಎಂದು ಭಾವಿಸಿ ನಂಬಿಕೊAಡ ಬಂದವರು ತುಳುವರು. ಕಂಬಳ, ಕೋಳಿಅಂಕ, ಯಕ್ಷಗಾನ ಹಾಗೂ ಪಿಲಿಗೊಬ್ಬು ತುಳುನಾಡಿನ ಪರಂಪರೆ ಮತ್ತು ನಂಬಿಕೆ ವಿಶಿಷ್ಠಾಚರಣೆಗಳು. ತುಳುವರ ಮೆಚ್ಚಿನ ಆಟವಾಗಿರುವ ಕೋಳಿಅಂಕವೂ ದೇವರ ನಂಬಿಕೆಯ ಹಿನ್ನಲೆಯಲ್ಲಿ ಆರಂಭಗೊAಡಿತ್ತು. ಹಾಗಾಗಿ ಕೋಳಿಅಂಕಕ್ಕೆ ನಿಷಿದ್ಧ ಅಲ್ಲ. ಇದಕ್ಕೆ ನಿಷೇಧ ಸಲ್ಲ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಪುತ್ತೂರು ಮಹಾಲಿಂಗೇಶ್ವರ ದೇವಳದ ದೇವರಮಾರುಗದ್ದೆಯಲ್ಲಿ ವಿಜಯ ಸಾಮ್ರಾಟ್ ಆಯೋಜನೆಯ ಪಿಲಿಗೊಬ್ಬು ಸಮಿತಿ ವತಿಯಿಂದ ಭಾನುವಾರ ನಡೆದ `ಪುತ್ತೂರುದ ಪಿಲಿಗೊಬ್ಬು’ ಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಿಲಿಗೊಬ್ಬು ವಾಸ್ತವವಾಗಿ ಸ್ಪರ್ಧೆ ಅಲ್ಲ. ಅದೊಂದು ಧಾರ್ಮಿಕ ಪರಿಕಲ್ಪನೆಯ ಆಚರಣೆ. ಆದರೆ ಇಂದು ಅದಕ್ಕೆ ಹೊಸ ಆಯಾಮ ನೀಡಲಾಗುತ್ತಿದೆ. ಹಾಗಾಗಿ ಮಂಗಳೂರು, ಕೊಲ್ಲೂರು ಗಳಂತೆ ಪುತ್ತೂರಿನಲ್ಲಿಯೂ ಪಿಲಿಗೊಬ್ಬು ಸ್ಪರ್ಧೆಯ ಅಂಗಣಕ್ಕೆ ಬದಲಾಗಿದೆ. ಆದರೆ ಯಾವುದೇ ಆಚರಣೆ-ಆಟಗಳು ನಾಡಿನ ಪರಂಪರೆಯನ್ನು ಉಳಿಸುವ ಜತೆಗೆ ನಮ್ಮ ಭಾವನೆ-ನಂಬಿಕೆಗಳನ್ನು ಉಳಿಸುವ ನಿಟ್ಟಿನಲ್ಲಿಯೂ ಕಾರ್ಯಕ್ರಮಗಳಾಗಬೇಕು ಎಂದು ಅವರು ಹೇಳಿದರು.
ಪಿಲಿಗೊಬ್ಬು ವೇದಿಕೆ ಉದ್ಘಾಟನೆ ಮಾಡಿದ ಕತ್ತಾರ್ ಕರ್ನಾಟಕ ಸಂಘದ ಅಧ್ಯಕ್ಷ, ಉದ್ಯಮಿ ಮೂಡಂಬೈಲು ರವಿ ಶೆಟ್ಟಿ ಅವರು ಮಾತನಾಡಿ, ಸಾಮಾಜಿಕ ಕೆಲಸದ ಜತೆಗೆ ನಾಡಿನ ಸಾಂಸ್ಕೃತಿಕ ಪರಂಪರೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು. ದೇಶದ ದೊಡ್ಡ ಶಕ್ತಿ ಯುವಶಕ್ತಿ. ಯುವಜನತೆಗೆ ಸಮರ್ಥವಾಗಿ ಸಮಾಜ ಕಟ್ಟುವ ಶಕ್ತಿ ಇದ್ದು, ಈ ಕೆಲಸವನ್ನು ಸಮರ್ಪಕವಾಗಿ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರಿನ ಉದ್ಯಮಿ ಸುನಿಲ್ ಆಚಾರ್ ವಹಿಸಿದ್ದರು. ಮಾಜಿ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಹಾಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವಪ್ರಸಾದ್ ಮುಳಿಯ, ಸ್ವರ್ಣೋದ್ಯಮಿ ಬಲರಾಮ ಆಚಾರ್ಯ ಅವರು ಮಾತನಾಡಿದರು.
ಉದ್ಯಮಿ ಹರ್ಷಕುಮಾರ್ ರೈ ಮಾಡಾವು,ಉಪ್ಪಿನಂಗಡಿ ಸಹಸ್ತçಲಿಂಗೇಶ್ವರ ದೇವಳದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಬಿ.ಎಂ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್.ಬಿ.ಜಯರಾಮ ರೈ ಬಳಜ್ಜ ಮತ್ತು ಶಶಿಕುಮಾರ್ ರೈ ಬಾಲ್ಯೊಟ್ಟು, ಕರಾವಳಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ನಗರಸಭೆಯ ಮಾಜಿ ಅಧ್ಯಕ್ಷ ಜೀವಂಧರ್ ಜೈನ್, ಪುತ್ತೂರು ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಪುರಸಭೆಯ ಮಾಜಿ ಅಧ್ಯಕ್ಷ ರಾಜೇಶ್ ಬನ್ನೂರು, ನಗರಸಭೆಯ ಸದಸ್ಯರಾದ ಭಾಮಿ ಅಶೋಕ್ ಶೆಣೈ, ರಮೇಶ್ ರೈ ಮೊಟ್ಟೆತ್ತಡ್ಕ ಮತ್ತು ಸುಂದರ ಪೂಜಾರಿ ಬಡಾವು, ಪ್ರಗತಿಪರ ಕೃಷಿಕ ದಯಾಕರ ಆಳ್ವ ಕುಂಬ್ರ, ಎ.ಕೆ.ಜಯರಾಮ ರೈ ಕೆಯ್ಯೂರು, ಸುಧೀರ್ ರೈ ನೇಸರ, ವಿದ್ಯಾಮಾತಾ ಸಂಸ್ಥೆಯ ಭಾಗ್ಯೇಶ್ ರೈ ಅತಿಥಿಗಳಾಗಿದ್ದರು.
ಕಾರ್ಯಕ್ರಮದಲ್ಲಿ ಸ್ವಚ್ಛತಾ ಸೇನಾನಿಗಳಾಗಿರುವ ಗದಗ್ ಜಿಲ್ಲೆಯ ರೇಣುಕಾ ಮತ್ತು ತಂಡಕ್ಕೆ ಗೌರವಾರ್ಪಣೆ ಮಾಡಲಾಯಿತು.
ವಿಜಯ ಸಾಮ್ರಾಟ್ ಸಂಘಟನೆಯ ಸ್ಥಾಪಕಾಧ್ಯಕ್ಷ ಹಾಗೂ ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷರಾದ ಕಾರ್ಯಕ್ರಮದ ರೂವಾರಿ ಸಹಜ್ ರೈ ಬಳಜ್ಜ ಸ್ವಾಗತಿಸಿದರು. ಪಿಲಿಗೊಬ್ಬು ಸಮಿತಿಯ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಆದರ್ಶ ಶೆಟ್ಟಿ ಉಪ್ಪಿನಂಗಡಿ ವಂದಿಸಿದರು. ಶಿಕ್ಷಕ ಬಾಲಕೃಷ್ಣ ಪೊರ್ದಾಳ್ ನಿರೂಪಿಸಿದರು.
ಪಿಲಿಗೊಬ್ಬು ಸಮಿತಿಯ ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಸಂಚಾಲಕ ನಾಗರಾಜ್ ಭಟ್ ನಡುವಡ್ಕ, ಪ್ರಧಾನ ಕಾರ್ಯದರ್ಶಿ ಶರತ್ ಆಳ್ವ, ಉಪಾಧ್ಯಕ್ಷರಾದ ದೇವಿಪ್ರಕಾಶ್ ಭಂಡಾರಿ ಮತ್ತು ಶಂಕರ ಭಟ್ ಈಶಾನ್ಯ, ಕಾರ್ಯದರ್ಶಿ ಸುರೇಶ್ ಪಿದಪಟ್ಲ, ಕೋಶಾಧಿಕಾರಿಗಳಾದ ಅಶೋಕ್ ಅಡೂರು ಮತ್ತು ರಾಜೇಶ್ ಕೆ.ಗೌಡ, ಸಂಘಟನಾ ಕಾರ್ಯದರ್ಶಿ ಅರುಣ್ ರೈ ಮತ್ತಿತರರು ಇದ್ದರು.