ರ ತನ್ ಟಾಟಾ (Ratan Tata) ಹೆಸರಾಂತ ಕೈಗಾರಿಕೋದ್ಯಮಿ (Industrialist) ಹಾಗೂ ಭಾರತದ ಶ್ರೀಮಂತ ಉದ್ಯಮಿಗಳಲ್ಲಿ (India’s richest businessman) ಒಬ್ಬರಾಗಿದ್ದರು. ಇವರು ಒಂದು ರೀತಿ ಅಜಾತ ಶತ್ರು ಎಂದು ಹೇಳಬಹುದು ಏಕೆಂದರೆ, ಉದ್ಯಮಿ ಎಂದರೆ, ಪೈಪೋಟಿ, ದ್ವೇಷ ಎಲ್ಲವೂ ಇದ್ದೇ ಇರುತ್ತವೆ.
ಆದರೆ ರತನ್ ಟಾಟಾ ಅವರಿಗೆ ಮಾತ್ರ ಜಗತ್ತಿನಲ್ಲಿ ಒಬ್ಬನೇ ಒಬ್ಬ ವಿರೋಧಿಯೂ ಇರಲಿಲ್ಲ. ಪ್ರಪಂಚದಾದ್ಯಂತದ ಅನೇಕ ಜನರು ಅವರನ್ನು ಮೆಚ್ಚಲು ಕಾರಣ ಅವರ ಮಾನವೀಯ ಕೆಲಸಗಳು (Humanitarian Work). ಪ್ರತಿಯೊಂದು ಸಂಘಟಿತ ಸಂಸ್ಥೆಯು ಸಮಾಜಮುಖಿ ಕೆಲಸಗಳನ್ನು ಮಾಡುತ್ತಿದ್ದರೂ, ರತನ್ ಟಾಟಾ ಅವರ ಸಮಾಜ ಸೇವೆಗೆ (Social service) ಸರಿಸಾಟಿ ಯಾವುದೂ ಇರಲಿಲ್ಲ.
ರತನ್ ಟಾಟಾ ಅವರು ಸಮಾಜಕ್ಕೆ ನೀಡಿದ ಕೊಡುಗೆಯಿಂದಲೇ ಅವರು ದೇಶದ ನಿಜವಾದ ‘ಹೀರೋ’ ಆಗಿ ಗುರುತಿಸಿಕೊಂಡರು. ಈ ಬಿಲಿಯನೇರ್ ಉದ್ಯಮಿ ಚಾರಿಟಿ ದೇಣಿಗೆಗಳನ್ನು ನೀಡಲು ಹೆಸರುವಾಸಿಯಾಗಿದ್ದರು. ರತನ್ ಟಾಟಾ ಅವರಿಗೆ 2000 ರಲ್ಲಿ ಪ್ರತಿಷ್ಠಿತ ಪದ್ಮಭೂಷಣ ಮತ್ತು 2008 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿಯನ್ನು ನೀಡಲಾಗಿತ್ತು.
ನಮ್ರತೆ ಮತ್ತು ಸಮಾಜಮುಖಿ ಕಾರ್ಯಗಳಿಂದ ರತನ್ ಟಾಟಾ ಎಲ್ಲರ ಹೃದಯವನ್ನು ಗೆದ್ದ ಕ್ಷಣಗಳು
ರತನ್ ಟಾಟಾ ಅವರು ತಮ್ಮ ಆದಾಯದ ಶೇ. 60-65 ರಷ್ಟನ್ನು ಚಾರಿಟಿಗೆ ದಾನ ಮಾಡಿದ್ದಾರೆ ಎಂಬುದು ಬಹಳಷ್ಟು ಜನರಿಗೆ ತಿಳಿದಿಲ್ಲ. ರತನ್ ಟಾಟಾ ಅವರನ್ನು ಕೇವಲ ದಾನಧರ್ಮಕ್ಕಾಗಿ ಮಾತ್ರವಲ್ಲ, ಅವರ ವಿನಮ್ರತೆಗೆ ಮತ್ತು ಗೌರವಾನ್ವಿತ ಸ್ವಭಾವಕ್ಕಾಗಿ ಭಾರತೀಯರು ಪ್ರೀತಿಸುತ್ತಾರೆ. ಕೈಗಾರಿಕೋದ್ಯಮಿ ಯಾವುದೇ ವಿವಾದಕ್ಕೆ ಗುರಿಯಾದವರಲ್ಲ. ಇಂದು ನಾವು ರತನ್ ಟಾಟಾ ಅವರಂತಹ ಪ್ರಸಿದ್ಧ, ಯಶಸ್ವಿ, ಶ್ರೀಮಂತ ಮತ್ತು ವಿನಮ್ರ ವ್ಯಕ್ತಿಯನ್ನು ಮತ್ತೆಂದೂ ನೋಡಲು ಸಾಧ್ಯವೇ ಇಲ್ಲ..
1. ರತನ್ ಟಾಟಾ ಅವರು ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ
ಕೆಲವು ವರ್ಷಗಳ ಹಿಂದೆ, ಉದ್ಯಮಿ ರತನ್ ಟಾಟಾ ಅವರು ವಿಮಾನದಲ್ಲಿ ಎಕಾನಮಿ ಕ್ಲಾಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಪ್ರಯಾಣಿಕರೊಬ್ಬರು ರತನ್ ಟಾಟಾ ಅವರೊಂದಿಗಿನ ಚಿತ್ರವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಅದು ತಕ್ಷಣವೇ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಸುದ್ದಿ ವಾಹಿನಿಗಳು ಕೂಡ ಬಿಲಿಯನೇರ್‌ನ ಸರಳತೆಯನ್ನು ಕೊಂಡಾಡಿದ್ದವು.
2. ರತನ್ ಟಾಟಾರನ್ನು `ಛೋಟು’ ಎಂದ ಮಹಿಳೆ ಟ್ರೋಲ್: ಟ್ರೋಲ್ ಮಾಡಬೇಡಿ ಎಂದು ವಿನಂತಿಸಿದ್ದ ಉದ್ಯಮಿ
ಫೆಬ್ರವರಿ 2020ರಲ್ಲಿ, ರತನ್ ಟಾಟಾ ಅವರು ತಮ್ಮ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ಅದರಲ್ಲಿ ಅವರು ನೆಲದ ಮೇಲೆ ಕಾಲು ಚಾಚಿ ಕುಳಿತು ಕ್ಯಾಮರಾಗೆ ದೊಡ್ಡ ನಗುವಿನೊಂದಿಗೆ ಪೋಸ್ ನೀಡಿದ್ದರು. ಆ ಪೋಸ್ಟ್‌ಗೆ ಇನ್‌ಸ್ಟಾಗ್ರಾಮ್‌ನಲ್ಲಿ 1 ಮಿಲಿಯನ್ ವೀಕ್ಷಣೆ ಪಡೆದಿತ್ತು, ಸಾವಿರಾರು ಲೈಕ್ಸ್ ಮತ್ತು ಕಾಮೆಂಟ್‌ಗಳು ಬಂದಿದ್ದವು ಆದರೆ ಅಂತರ್ಜಾಲದಲ್ಲಿ ವಿವಾದವನ್ನೂ ಸೃಷ್ಟಿಸಿತ್ತು. ಮಹಿಳೆಯೊಬ್ಬರು ರತನ್ ಟಾಟಾ ಅವರನ್ನು ‘ಅಭಿನಂದನೆಗಳು ಛೋಟು’ ಎಂದು ಕಾಮೆಂಟ್ ಮಾಡಿದ್ದರು. ಇದು ರತನ್ ಟಾಟಾ ಅವರ ಅಪಾರ ಅಭಿಮಾನಿಗಳಲ್ಲಿ ಕೋಪ ತರಿಸಿತ್ತು.
ಆ ಮಹಿಳೆ ಕಾಮೆಂಟ್ ಮಾಡುತ್ತಿದ್ದಂತೆ ರತನ್ ಟಾಟಾ ಅವರ ಅಭಿಮಾನಿಗಳು ಆಕೆಯನ್ನು ಟ್ರೋಲ್ ಮಾಡಲು ಪ್ರಾರಂಭಿಸಿದರು. ಆಗ ತಕ್ಷಣಕ್ಕೆ ರಿಯಾಕ್ಟ್ ಮಾಡಿದ ಟಾಟಾ ಅವರು, ಯುವತಿಯನ್ನು ಟ್ರೋಲ್ ಮಾಡಬೇಡಿ ಎಂದು ತಮ್ಮ Instagram ಖಾತೆಯಲ್ಲಿ ವಿನಂತಿಸಿದ್ದರು.
4. ಅಪೌಷ್ಟಿಕತೆಯ ವಿರುದ್ಧ ರತನ್ ಟಾಟಾ ಹೋರಾಟ
ರತನ್ ಟಾಟಾ ಅವರು ಹಲವು ವರ್ಷಗಳಿಂದ ಸಾಮಾಜಿಕ ಸಮಸ್ಯೆಗಳ ವಿರುದ್ಧ ಹೋರಾಡಿದ್ದನ್ನು ನಾವು ನೋಡಿದ್ದೇವೆ. ಆದರೆ ಭಾರತದ ಪ್ರಮುಖ ಸಮಸ್ಯೆಯಾದ ಅಪೌಷ್ಟಿಕತೆಯ ವಿರುದ್ಧದ ಅವರ ಹೋರಾಟವೇ ಸಮಾಜಕ್ಕೆ ಅವರ ದೊಡ್ಡ ಕೊಡುಗೆಯಾಗಿದೆ. ರತನ್ ಟಾಟಾ ಅವರು ಹಲವು ವರ್ಷಗಳಿಂದ ಮಕ್ಕಳು ಮತ್ತು ಗರ್ಭಿಣಿಯರಲ್ಲಿ ಅಪೌಷ್ಟಿಕತೆಯನ್ನು ತೊಡೆದುಹಾಕಲು ಸಾಕಷ್ಟು ಕೆಲಸ ಮಾಡಿದ್ದಾರೆ.
5. COVID-19 ಸಮಯದಲ್ಲಿ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾಗೊಳಿಸದಂತೆ ರತನ್ ಟಾಟಾ ಒತ್ತಾಯ
COVID-19 ಸಾಂಕ್ರಾಮಿಕ ಸಮಯದಲ್ಲಿ, ತಮ್ಮ ಉದ್ಯೋಗಿಗಳಿಗೆ ಆರ್ಥಿಕವಾಗಿ ಸಹಾಯ ಮಾಡಲು ಟಾಟಾ ಟ್ರಸ್ಟ್‌ನಿಂದ 500 ಕೋಟಿ ರೂ. ನೀಡಿದ್ದರು. ಇತರ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿರುವ ಸಮಯದಲ್ಲಿ, ರತನ್ ಟಾಟಾ ಅವರು ತಮ್ಮ ಉದ್ಯೋಗಿಗಳ ಪರವಾಗಿ ನಿಲುವನ್ನು ತೆಗೆದುಕೊಂಡರು ಮತ್ತು ಅಂತಹ ಕಷ್ಟದ ಸಮಯದಲ್ಲಿ ಜನರನ್ನು ವಜಾಗೊಳಿಸದಂತೆ ಇತರ ಕಂಪನಿಗಳಿಗೆ ವಿನಂತಿಸಿದ್ದರು.
6. ಕಾರ್ನೆಲ್ ವಿಶ್ವವಿದ್ಯಾಲಯದಲ್ಲಿ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ರತನ್ ಟಾಟಾ 28 ಮಿಲಿಯನ್ USD ಖರ್ಚು
ಸಮಾಜದ ಅಭಿವೃದ್ಧಿ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಹೆಚ್ಚು ಖರ್ಚು ಮಾಡುವುದರ ಜೊತೆಗೆ, ರತನ್ ಟಾಟಾ ಅವರು ಭಾರತದಾದ್ಯಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ಒದಗಿಸುವಲ್ಲಿ ಸಾಕಷ್ಟು ಸಕ್ರಿಯರಾಗಿದ್ದರು. ಇದು ಮಾತ್ರವಲ್ಲದೆ ಕಾರ್ನೆಲ್ ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲು ಅವರು 28 ಮಿಲಿಯನ್ USD ಮೊತ್ತವನ್ನು ಖರ್ಚು ಮಾಡಿದ್ದಾರೆ.
7. ರತನ್ ಟಾಟಾ ಯಾವಾಗಲೂ ತನ್ನ ಚಾಲಕನ ಪಕ್ಕದಲ್ಲಿ ಕುಳಿತುಕೊಳ್ಳುತ್ತಿದ್ದರು
ರತನ್ ಟಾಟಾ ಅವರನ್ನು ಪ್ರಪಂಚದಾದ್ಯಂತ ಅನೇಕ ಜನರು ಮೆಚ್ಚಲು ಕಾರಣವೆಂದರೆ ಅವರು ತಮ್ಮ ಉದ್ಯೋಗಿಗಳನ್ನು ತಮ್ಮ ಕುಟುಂಬವೆಂದು ಪರಿಗಣಿಸುತ್ತಾರೆ. ವರದಿಗಳ ಪ್ರಕಾರ, ಬಿಲಿಯನೇರ್ ಉದ್ಯಮಿ ಎಂದಿಗೂ ತನ್ನ ಕಾರಿನ ಹಿಂದಿನ ಸೀಟಿನಲ್ಲಿ ಕುಳಿತುಕೊಳ್ಳುತ್ತಿರಲಿಲ್ಲ ಮತ್ತು ಯಾವಾಗಲೂ ಮುಂಭಾಗದ ಸೀಟಿನಲ್ಲಿ ಕೂರುತ್ತಿದ್ದರು. ತನ್ನ ಡ್ರೈವರ್‌ನಿಂದ ಹಿಡಿದು ಪ್ರತಿಯೊಬ್ಬ ಉದ್ಯೋಗಿಯನ್ನು ಅತ್ಯಂತ ಗೌರವದಿಂದ ನಡೆಸಿಕೊಳ್ಳುತ್ತಿದ್ದರು.
8.. ಬೀದಿನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ರತನ್ ಟಾಟಾ ಮನವಿ
ರತನ್ ಟಾಟಾ ಪ್ರಾಣಿ ಪ್ರಿಯರಾದರೂ ಅವರ ಹೃದಯದಲ್ಲಿ ನಾಯಿಗಳಿಗೆ ವಿಶೇಷ ಸ್ಥಾನವಿತ್ತು. ಕೆಲವು ವರ್ಷಗಳ ಹಿಂದೆ, ಅವರು ಬೀದಿ ನಾಯಿಯ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ನಾವು ನೋಡಿದ್ದೇವೆ ಮತ್ತು ಆ ಬೀದಿ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ಮನವಿ ಮಾಡಿದ್ದರು. ಅವರ ಪೋಸ್ಟ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ತಕ್ಷಣ, ಯಾರೋ ನಾಯಿಯನ್ನು ದತ್ತು ಪಡೆದರು ಮತ್ತು ಅದಕ್ಕಾಗಿ ರತನ್ ಟಾಟಾ ಅವರನ್ನು ಶ್ಲಾಘಿಸಿದ್ದರು.
9. ರತನ್ ಟಾಟಾ ಅವರು 26/11 ರ ಭಯೋತ್ಪಾದಕ ದಾಳಿಯಿಂದ ಹಾನಿಗೊಳಗಾದ 80 ಉದ್ಯೋಗಿಗಳ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು
ಅದು ನವೆಂಬರ್ 26, 2008 ರಂದು, ಭಯೋತ್ಪಾದನೆಯ ಅತ್ಯಂತ ಭೀಕರ ಮತ್ತು ಅಮಾನವೀಯ ದಾಳಿಗಳಿಗೆ ಮುಂಬೈ ಸಾಕ್ಷಿಯಾಗಿತ್ತು. ಆ ಭಯೋತ್ಪಾದಕ ದಾಳಿಯಲ್ಲಿ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ಮತ್ತು 166 ಜನರು ಗಂಭೀರವಾಗಿ ಗಾಯಗೊಂಡಿದ್ದರು. ರತನ್ ಟಾಟಾ ಅವರು 26/11 ರ ಭಯೋತ್ಪಾದಕ ದಾಳಿಯಿಂದ ಹಾನಿಗೊಳಗಾದ 80 ಉದ್ಯೋಗಿಗಳ ಕುಟುಂಬಗಳನ್ನು ವೈಯಕ್ತಿಕವಾಗಿ ಭೇಟಿ ಮಾಡಿದ್ದರು. ಆ ಮೂಲಕ ರತನ್ ಟಾಟಾ ಅವರು ತಮ್ಮ ಉದ್ಯೋಗಿಗಳು ಅವರ ಕುಟುಂಬ ಎಂದು ಭಾವಿಸಿದ್ದರು ಎನ್ನುವುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದರು.
10. ರತನ್ ಟಾಟಾ ಅವರು ತಮ್ಮ ಉದ್ಯೋಗಿಗಳೊಂದಿಗೆ ಗ್ರೂಪ್ ಫೋಟೋಗಾಗಿ ನೆಲದ ಮೇಲೆ ಮಂಡಿಯೂರಿ ಕುಳಿತಾಗ
ಭಾರತದ ಬಿಲಿಯನೇರ್, ರತನ್ ಟಾಟಾ ಅವರು ಜಗತ್ತಿನಾದ್ಯಂತ ಇರುವ ಎಲ್ಲಾ ಬಾಸ್‌ಗಳಿಗೆ ಉದಾಹರಣೆಯಾಗಿ ನಿಂತಿದ್ದಾರೆ. 2012 ರಲ್ಲಿ, ತಮ್ಮ ಸಂಸ್ಥೆಗೆ ಹೊಸದಾಗಿ ನೇಮಕಗೊಂಡ ತಂಡದೊಂದಿಗೆ ಫೋಟೋ ತೆಗೆಸಿಕೊಳ್ಳಲು ರತನ್ ಟಾಟಾ ಅವರನ್ನು ಕರೆದಾಗ, ಬಿಲಿಯನೇರ್ ಉದ್ಯಮಿ ಅವರು ನೆಲದ ಮೇಲೆ ಮಂಡಿಯೂರಿ ಮತ್ತು ಚಿತ್ರಕ್ಕೆ ಪೋಸ್ ನೀಡಿದಾಗ ಎಲ್ಲರೂ ಅಚ್ಚರಿಪಟ್ಟಿದ್ದರು.