
ಪುತ್ತೂರು; ಸರ್ಕಾರಿ ಬಸ್ಸಿನಲ್ಲಿ ಪಯಣಿಸುವುದೆಂದರೆ ಚಿಲ್ಲರೆಗಾಗಿ ನಿರ್ವಾಹಕನ ಕಿರಿಕಿರಿ. ೫೦೦ ರೂಪಾಯಿ ನೋಟು ನೀಡಿದರೆ ನಿರ್ವಾಹಕ ಮುಖ ದಪ್ಪಗೆ ಮಾಡಿ ನಾನೆಲ್ಲಿಂದ ಚಿಲ್ಲರೆ ತರಲಿ. ನೀವು ಚಿಲ್ಲರೆ ಕೊಡಿ. ಬಸ್ಸಿಗೆ ಬರುವಾಗ ಚಿಲ್ಲರೆ ತರಬೇಕು ಎಂಬ ಜ್ಞಾನ ಬೇಡ್ವಾ ಎಂದು ಪ್ರಯಾಣಿಕರ ಮುಂದೆ ಅಬ್ಬರಿಸಿದಾಗ ಚಿಲ್ಲರೆ ಇಲ್ಲದ ಪ್ರಯಾಣಿಕನ ಮುಖ ಸಪ್ಪೆ. ಬಹುತೇಕ ಸಂದರ್ಭದಲ್ಲಿ ಇದು ಗಲಾಟೆಗೂ ದಾರಿಯಾಗುತ್ತದೆ. ಇದಕ್ಕೆ ಇದೀಗ ಕೆಎಸ್ಸಾರ್ಟಿಸಿ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ಸರ್ಕಾರಿ ಬಸ್ಸುಗಳಲ್ಲಿ ಅತಿ ಶೀಘ್ರದಲ್ಲಿಯೇ ಆಗಲಿದೆ `ಡಿಜಿಟಲ್’ ವ್ಯವಸ್ಥೆ…!

ಪುತ್ತೂರು ಕೆಎಸ್ಸಾರ್ಟಿಸಿ ವಿಭಾಗದ ನಿರ್ವಾಹಕರಿಗೆ ಈಗಾಗಲೇ ೫೭೦ ಎಂಡ್ರಾಯಿಡ್ ಮಿಷನ್ ಗಳನ್ನು ವಿತರಣೆ ಮಾಡಲಾಗಿದೆ. ಇನ್ನು ಮುಂದೆ ಪುತ್ತೂರು ವಿಭಾಗದ ಜಿಲ್ಲೆಯ ೫ ತಾಲೂಕು ಹಾಗೂ ಕೊಡಗು ಜಿಲ್ಲೆಯ ಸರ್ಕಾರಿ ಬಸ್ಸು ನಿರ್ವಾಹಕರು ಯುಪಿಐ ಮೂಲಕ ಕ್ಯಾಶ್‌ಲೆಸ್ ವ್ಯವಸ್ಥೆಗೆ ತಮ್ಮನ್ನು ತಾವು ತೆರೆದುಕೊಳ್ಳಲಿದ್ದಾರೆ. ಪುತ್ತೂರು ವಿಭಾಗದಲ್ಲಿ ೫ ತಾಲೂಕುಗಳಲ್ಲಿ ಒಟ್ಟು ನಾಲ್ಕು ಡಿಪೋ ಹಾಗೂ ಮಡಿಕೇರಿಯ ಒಂದು ಡಿಪೋದಲ್ಲಿ ಈ ಮೆಷಿನ್ ವಿತರಣೆಯಾಗಿದೆ. ಸುಮಾರು ೭೧೫ ಮಂದಿ ನಿರ್ವಾಹಕರು ಇರುವ ಈ ೫ ಡಿಪೊಗಳಲ್ಲಿ ೪೮೫ ಅನುಸೂಚಿತ ಮಾರ್ಗಗಳಿವೆ. ಇದಕ್ಕೆ ಏಕಕಾಲಕ್ಕೆ ೪೮೫ ಮೆಷಿನ್‌ಗಳ ಅಗತ್ಯವಿದೆ. ಸುಮಾರು ೨೩೦ ಹೆಚ್ಚುವರಿ ಮಿಷಿನ್ ಗಳನ್ನು ಪುತ್ತೂರು ವಿಭಾಗಕ್ಕೆ ತರಿಸಲಾಗಿದೆ. ಮೆಷಿನ್‌ಗಳಲ್ಲಿ ಏನಾದರೂ ತೊಂದರೆ ಕಂಡುಬAದ ಸಂದರ್ಭ ತುರ್ತು ವ್ಯವಸ್ಥೆಗಾಗಿ ಈ ಹೆಚ್ಚುವರಿ ಮೆಷಿನ್‌ಗಳನ್ನು ತರಿಸಲಾಗಿದೆ.
ಪ್ರಯಾಣಿಕರು ಏನು ಮಾಡಬೇಕು..
ನಮ್ಮ ಬಳಿ ನಗದು ಹಣ ಇಲ್ಲ. ನಾವು ಚಿಲ್ಲರೆ ತಂದಿಲ್ಲ.. ನಿಮಗೆ ಇನ್ನು ಮುಂದೆ ಸರ್ಕಾರಿ ಬಸ್‌ನಲ್ಲಿ ಪಯಣಿಸುವಾಗ ಈ ಚಿಂತೆಯೇ ಬೇಕಾಗಿಲ್ಲ. ನಿಮ್ಮಲ್ಲಿ ಸ್ಮಾರ್ಟ್ ಫೋನ್ ಇದ್ದರೆ ಸಾಕು. ಡಿಜಿಟಲ್ ಪಾವತಿ ಮಾಡಿ ಟಿಕೇಟ್ ಪಡೆದುಕೊಂಡು ಆರಾಮವಾಗಿ ಬಸ್ ಪ್ರಯಾಣ ಮಾಡಬಹುದು. ಈಗ ಕೆಎಸ್ಸಾರ್ಟಿಸಿ ಸಂಸ್ಥೆ ಪ್ರಯಾಣಿಕರ ಅನುಕೂಲದ ದೃಷ್ಟಿಯಿಂದ ಡಿಜಿಟಲ್ ಪಾವತಿಯ ಹೆಜ್ಜೆ ಇಟ್ಟಿದೆ. ಬಸ್‌ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ನಿರ್ವಾಹಕರ ಬಳಿ ಇರುವ ಕ್ಯೂಆರ್ ಕೋಡ್ ಸ್ಕಾö್ಯನ್ ಮಾಡಿಕೊಂಡು ಡಿಜಿಟಲ್ ರೂಪದಲ್ಲಿ ಹಣ ಪಾವತಿಸಿ ನಿಮ್ಮ ಟಿಕೇಟ್ ನಿಮ್ಮ ಕೈಗೆ ಸಿಗುತ್ತದೆ. ಆದರೆ ಸ್ಮಾರ್ಟ್ ಫೋನ್ ಮಾತ್ರ ಅತ್ಯಗತ್ಯ. ಒಂದು ವೇಳೆ ನೆಟ್‌ವರ್ಕ್ ಸಮಸ್ಯೆ ಇದ್ದ ಸಂದರ್ಭದಲ್ಲಿ ಮಾತ್ರ ನಗದು ಹಣ ಪಾವತಿ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಪುತ್ತೂರು ವಿಭಾಗದಲ್ಲಿ ಇಂತಹ ಅನಿವಾರ್ಯತೆ ಸಂದರ್ಭದ ಸಾಧ್ಯತೆ ಬಹಳಷ್ಟು ಕಡಿಮೆ ಎನ್ನಲಾಗಿದೆ.
ವ್ಯವಸ್ಥೆ ಹೀಗೆ..
ಪ್ರಯಾಣಿಕರು ದರ ಕೇಳಿ ನಿರ್ವಾಹಕರ ಕ್ಯೂಆರ್ ಕೋಡ್ ಮೂಲಕ ಹಣ ಪಾವತಿ ಮಾಡಬೇಕು. ಹಾಗೇ ಪಾವತಿಸಿದ ಹಣ ನಿರ್ವಾಹಕ ಖಾತೆ ಮೂಲಕ ನೇರವಾಗಿ ಡಿಪೊಗಳ ಅಕೌಂಟಿಗೆ ಜಮೆ ಆಗಲಿದೆ. ಈ ಪಾವತಿಯಿಂದ ಪ್ರಯಾಣಿಕರ ಹಣವೂ ವ್ಯರ್ಥವಾಗುವುದಿಲ್ಲ. ಮೆಷಿನ್ ಮೂಲಕ ಟಿಕೇಟ್ ದೊರೆಯಲಿದೆ. ವಂಚನೆ ಮಾಡಬಹುದಾದ ಅವಕಾಶವೂ ಇಲ್ಲದಂತಾಗುತ್ತದೆ.
ಗೊಂದಲ-ಸಮಸ್ಯೆಗಳಿಗೆ ಮುಕ್ತಿ
ಈ ಕ್ಯಾಶ್‌ಲೆಸ್ ವ್ಯವಸ್ಥೆಯಿಂದ ಸರ್ಕಾರಿ ಬಸ್ ಗಳಲ್ಲಿ ಉಂಟಾಗುವ ಚಿಲ್ಲರೆ ಅಭಾವದ ದೊಡ್ಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗುತ್ತದೆ. ಪ್ರಯಾಣಿಕ- ನಿರ್ವಾಹಕ ನಡುವೆ ಉಂಟಾಗುವ ಗೊಂದಲಗಳಿಗೆ ಮುಕ್ತಿ ಸಿಗಲಿದೆ. ಪ್ರಯಾಣಿಕರು ನಿರಾಳವಾಗಿ ತಮ್ಮ ಪಯಣ ಮಾಡಬಹುದಾಗಿದೆ. ಕೆಎಸ್ಸಾರ್ಟಿಸಿ ಸಂಸ್ಥೆಯಿAದ ಉತ್ತಮ ಸೇವೆ ನೀಡಲಾಗುತ್ತದೆ. ಪ್ರತಿಯೊಂದು ಊರಿಗೂ ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಲಾಗುತ್ತಿದೆ. ಸಾರ್ವಜನಿಕರು ಕೂಡಾ ಸರ್ಕಾರಿ ಬಸ್ ನಮ್ಮದು ಎಂಬ ಹೆಮ್ಮೆಯಿಂದ ಪಯಣ ಮಾಡುತ್ತಿದ್ದಾರೆ. ಈ ಕ್ಯಾಶ್‌ಲೆಸ್ ವ್ಯವಸ್ಥೆ ಜಾರಿಗೊಳಿಸುವುದರಿಂದ ಪ್ರಯಾಣಿಕರಿಗೂ ಪ್ರಯೋಜನವಾಗಲಿದೆ. ಯಾವುದೇ ಕಿರಿಕಿರಿ ಇಲ್ಲದೆ ಪ್ರಯಾಣ ಮಾಡಲು ಅನುಕೂಲವಾಗಲಿದೆ, ನಮ್ಮ ವಿಭಾಗದ ವ್ಯವಸ್ಥಾಪಕ ನಿರ್ದೇಶಕರ ಮಾರ್ಗದರ್ಶನದಲ್ಲಿ ನಿರ್ವಾಹಕರಿಗೆ ಮೆಷಿನ್ ವಿತರಣೆ ಹಾಗೂ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಕೆಲಸ ನಡೆಯುತ್ತಿದೆ- ಜಯಶಾಂತ್ ಕುಮಾರ್ ವಿಭಾಗ ಸಂಚಲನಾಧಿಕಾರಿ ಕೆಎಸ್ಸಾರ್ಟಿಸಿ ಪುತ್ತೂರು ವಿಭಾಗ.






