ಪುತ್ತೂರು: ಸುಳ್ಯದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಬ್ಲೂ ಮೂನ್ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಕಲೆಕ್ಷನ್ ಮಳಿಗೆಯ ನೂತನ ಶಾಖೆ ಜುಲೈ 1ರಂದು ಪುತ್ತೂರು ತಾಲೂಕಿನ ಕುಂಬ್ರ ಸೆಂಟರ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.ಮಳಿಗೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಾಂಶುಪಾಲೆ ಸಂದ್ಯಾ, ಕೆಯ್ಯೂರು ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಹಸೀನಾ, ಮರ್ಕಝುಲ್ ಹುದಾ ಕುಂಬ್ರ ಅಧ್ಯಕ್ಷ ಅಬ್ದುಲ್ ರಹಮಾನ್ ಹಾಜಿ ಅರಿಯಡ್ಕ, ನ್ಯಾಯವಾದಿ ದುರ್ಗಾಪ್ರಸಾದ್ ರೈ, ಉದ್ಯಮಿ ಸಾದಿಕ್ ಹಾಜಿ, ಕುಂಬ್ರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಪ್ರಕಾಶ್ಚಂದ್ರ ರೈ, ಕುಂಬ್ರ ವರ್ತಕರ ಸಂಘದ ಅಧ್ಯಕ್ಷ ಪಿ.ಕೆ. ಮಹಮ್ಮದ್, ರಂಗಭೂಮಿ ಕಲಾವಿದ ಸುಂದರ ರೈ ಮಂದಾರ, ಹಿರಿಯರಾದ ಅಬೂಭಕ್ಕರ್ ಹಾಜಿ, ಮೂಸಾ ಮುಸ್ಲಿಯಾರ್, ಕುಂಬ್ರ ವರ್ತಕರ ಸಂಘದ ಮಾಜಿ ಅಧ್ಯಕ್ಷ ದಿವಾಕರ ಶೆಟ್ಟಿ, ಉಪಾಧ್ಯಕ್ಷ ಸದಾಶಿವ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.ಕಾರ್ಯಕ್ರಮವನ್ನು ಪತ್ರಕರ್ತ ಶರೀಫ್ ಜಟ್ಟಿಪಳ್ಳ ನಿರೂಪಿಸಿದರು.ಮಳಿಗೆಯಲ್ಲಿ ವಿವಿಧ ಮಾದರಿಯ ಫ್ಯಾನ್ಸಿ ವಸ್ತುಗಳು ಹಾಗೂ ಒನ್ ಗ್ರಾಂ ಗೋಲ್ಡ್‌ನ ಚೈನ್‌ಗಳು, ಕೈಬಳೆಗಳು, ಕೈಚೈನ್‌ಗಳು, ಕಾಲುಚೈನ್‌ಗಳು, ಉಂಗುರಗಳು ಸೇರಿದಂತೆ ಆಕರ್ಷಕ ಆಭರಣಗಳ ವಿಶಾಲ ಸಂಗ್ರಹ ಗ್ರಾಹಕರಿಗೆ ಲಭ್ಯವಿದೆ.







