ಮಂಗಳೂರು : ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ನಟ ದರ್ಶನವರು ಬಳ್ಳಾರಿ ಜೈಲಿನಲ್ಲಿ ಇದ್ದಾರೆ. ಅವರಿಗೆ ತೀವ್ರವಾಗಿ ಬೆನ್ನು ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ವೈದ್ಯರು, ಅವರನ್ನು ತಪಾಸಣೆ ಮಾಡಿ ಸ್ಕ್ಯಾನಿಂಗ್ ಮಾಡಿಸಿಕೊಳ್ಳುವಂತೆ ಎಷ್ಟೇ ಹೇಳಿದರು ಕೂಡ ಅವರು ಬೇಡ ಬೆಂಗಳೂರಿಗೆ ಹೋಗಿ ನಾನು ಸ್ಕ್ಯಾನಿಂಗ್ ಮಾಡಿಸಿಕೊಳ್ಳುತ್ತೇನೆ ಎಂದು ಹಠ ಹಿಡಿದಿದ್ದಾರೆ.

ಅಲ್ಲದೆ ನಟ ದರ್ಶನ್ ಅವರು ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 54ನೇ ಸಿಸಿಎಚ್ ಕೋರ್ಟ್, ವಿಚಾರಣೆಯ ಬಳಿಕ ಅಕ್ಟೋಬರ್ 14ರಂದು ತೀರ್ಪು ಕಾಯ್ದಿರಿಸಿ ಆದೇಶ ನೀಡಿದೆ.ಇದರ ಮಧ್ಯ ಜೈಲಿನಲ್ಲಿ ಆಗಾಗ ದರ್ಶನ್ ಗೆ ರೇಣುಕಾ ಸ್ವಾಮಿಯ ಆತ್ಮ ಕಾಟ ಕೊಡುತ್ತಿದೆ ಎಂಬ ಗಾಳಿ ಸುದ್ದಿ ಹರಡಿತ್ತು. ಇದು ಎಷ್ಟು ಸತ್ಯವೋ ಅಥವಾ ಮಿಥ್ಯವೋ ಎಂಬುದು ಗೊತ್ತಿಲ್ಲ. ಆದರೆ ರೇಣುಕಾ ಸ್ವಾಮಿಯ ಆತ್ಮ ನಟ ದರ್ಶನ್ ಅವರಿಗೆ ಕಾಟ ಕೊಡುತ್ತಿತ್ತು ಎಂಬ ಊಹಾಪೋಹಗಳು ಎದ್ದಿದ್ದವು.

ಇದೀಗ ದರ್ಶನ್ ಹಾಗೂ ಗ್ಯಾಂಗ್ನಿಂದ ಕೊಲೆಯಾಗಿದ್ದಾರೆ ಎನ್ನಲಾದ ಚಿತ್ರದುರ್ಗದ ರೇಣುಕಾಸ್ವಾಮಿ ಕೂಡ ಈಗ ನವರಾತ್ರಿ ವೇಷದ ಥೀಮ್ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುತ್ತಿದೆ. ರೇಣುಕಾಸ್ವಾಮಿಯ ಪ್ರೇತಾತ್ಮ ಎಂಬಂತೆ ಬಿಂಬಿತವಾದ ನವರಾತ್ರಿ ವೇಷವೊಂದು ಕರಾವಳಿ ಕರ್ನಾಟಕದ ಮಂಗಳೂರು ಸುತ್ತಮುತ್ತ ಮನೆ ಮನೆ ಸಂಚರಿಸಿದ್ದು, ವಿಡಿಯೋ ಈಗ ವೈರಲ್ ಆಗುತ್ತಿದೆ.

ಯಮನ ಜೊತೆ ಭೂಲೋಕಕ್ಕೆ ಬಂದ ಪ್ರೇತಾತ್ಮ, ಭೂಲೋಕದಲ್ಲಿ ತನಗೆ ಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಂತೆ ಚಿತ್ರಣ ಮಾಡಲಾಗಿದೆ. ಸಾಮಾನ್ಯವಾಗಿ ಕರಾವಳಿಯಲ್ಲಿ ನವರಾತ್ರಿ ಸಂದರ್ಭ ವಿವಿಧ ವೇಷ ಹಾಕಿ ವೇಷಧಾರಿಗಳು ಮನೋರಂಜನೆ ನೀಡುತ್ತಾರೆ. ಈ ಬಾರಿ ವ್ಯಕ್ತಿಗಳಿಬ್ಬರು ರೇಣುಕಾಸ್ವಾಮಿ ಪ್ರೇತಾತ್ಮ ಹಾಗೂ ಯಮನ ವೇಷ ಧಾರಣೆ ಮಾಡಿ ಬಂದಿದ್ದಾರೆ. ಚಿತ್ರಹಿಂಸೆ ನೀಡಿದವರನ್ನು ಕರೆದೊಯ್ಯಲು ಬಂದಿದ್ದೇವೆ ಎಂಬ ಅರ್ಥ ಬರುವಂತೆ ತುಳು ಭಾಷೆಯಲ್ಲಿ ವೇಷಧಾರಿಗಳು ಮಾತನಾಡಿಕೊಂಡಿದ್ದಾರೆ. ಹೊಸ ಪರಿಕಲ್ಪನೆಯ ನವರಾತ್ರಿ ವೇಷದ ವಿಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!