ಮೈ ಸೂರು: ದುರದೃಷ್ಟಕರ ಘಟನೆಯೊಂದರಲ್ಲಿ ಮೈಸೂರಿನಿಂದ ದರ್ಬಾಂಗ್ಗೆ ಹೊರಟಿದ್ದ ಮೈಸೂರು ದರ್ಬಾಂಗ್ ಭಾಗಮತಿ ಎಕ್ಸ್‌ಪ್ರೆಸ್‌ ರೈಲು, ತಮಿಳುನಾಡಿನ ಕವರಪೆಟ್ಟೈನಲ್ಲಿ ಶುಕ್ರವಾರ ರಾತ್ರಿ (ಅಕ್ಟೋಬರ್ 11ರ 8.30ರ ಸುಮಾರಿಗೆ) ಚೆನ್ನೈ – ಗುದ್ದೂರು ವಿಭಾಗದಲ್ಲಿ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದಿದೆ.

ಅಪಘಾತಕ್ಕೀಡಾದ ಎರಡೂ ರೈಲುಗಳ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಧಗಧಗನೆ ಹೊತ್ತಿ ಉರಿಯುತ್ತಿವೆ. 30ಕ್ಕೂ ಹೆಚ್ಚು ಮಂದಿಗೆ ಸುಟ್ಟ ಗಾಯಗಳಾಗಿದ್ದು, ಕೆಲವು ಪ್ರಯಾಣಿಕರು ಗಾಯಗೊಂಡಿದ್ದಾರೆ. 12-13 ಬೋಗಿಗಳು ಹಳಿ ತಪ್ಪಿವೆ. ನಿಂತಿದ್ದ ಗೂಡ್ಸ್ ರೈಲಿನ ಹಿಂಭಾಗಕ್ಕೆ 12578 ಮೈಸೂರು-ದರ್ಬಾಂಗ್ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ ಎಂದು ರೈಲ್ವೆ ಮೂಲಗಳು ತಿಳಿಸಿವೆ. ರೈಲು ಅಪಘಾತಕ್ಕೆ ಹಳಿಯಲ್ಲಿನ ಜರ್ಕ್ ಕಾರಣ ಎಂದು ಮೇಲ್ನೋಟಕ್ಕೆ ಗೊತ್ತಾಗಿದೆ.

ಎಲ್‌ಎಚ್‌ಬಿ ಕೋಚ್‌ಗಳನ್ನು ಒಳಗೊಂಡಿರುವ ಈ ರೈಲು ಪೊನ್ನೇರಿ ರೈಲು ನಿಲ್ದಾಣವನ್ನು ದಾಟಿದ ನಂತರ ಮುಖ್ಯ ಮಾರ್ಗದ ಮೂಲಕ ಮುಂದಿನ ನಿಲ್ದಾಣವಾದ ಕವರಾಯಪೆಟ್ಟೈ ಮೂಲಕ ಓಡಲು ಹಸಿರು ನಿಶಾನೆ ಪಡೆಯಿತು. ಕವರಪೆಟ್ಟೈ ನಿಲ್ದಾಣವನ್ನು ಪ್ರವೇಶಿಸುವಾಗ ರೈಲು ಸಿಬ್ಬಂದಿಗೆ ಭಾರೀ ಜರ್ಕ್ ಅನುಭವವಾಯಿತು. ಲೈನ್ ಸ್ಪಷ್ಟ ಮತ್ತು ಸಿಗ್ನಲ್‌ಗಳ ಪ್ರಕಾರ ಮುಖ್ಯ ಮಾರ್ಗಕ್ಕೆ ಹೋಗುವ ಬದಲು, ರೈಲು 75 ಕಿಮೀ ವೇಗದಲ್ಲಿ ಲೂಪ್/ಲೈನ್‌ಗೆ ಪ್ರವೇಶಿಸಿತು.ಹೀಗಾಗಿ ಲೂಪ್ ಲೈನ್‌ನಲ್ಲಿ ಸ್ಥಿರವಾಗಿರುವ ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆಯಿತು. ಇದರಿಂದ ಇಂಜಿನ್ ಪಕ್ಕದಲ್ಲಿದ್ದ ಪಾರ್ಸೆಲ್ ವ್ಯಾನ್‌ಗೆ ಬೆಂಕಿ ಹೊತ್ತಿಕೊಂಡಿದ್ದು, ಅಗ್ನಿಶಾಮಕ ದಳದವರು ಅದನ್ನು ನಂದಿಸಿದ್ದಾರೆ. ಗಾಯಗೊಂಡ ಎಲ್ಲ ಪ್ರಯಾಣಿಕರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಎರಡೂ ದಿಕ್ಕಿನಲ್ಲಿ ರೈಲು ಸಂಚಾರವನ್ನು ಮುಚ್ಚಲಾಗಿದೆ.

ಸ್ಥಳಕ್ಕೆ ರಕ್ಷಣಾ ತಂಡಗಳು ಮತ್ತು ಆಂಬ್ಯುಲೆನ್ಸ್‌ಗಳನ್ನು ರವಾನಿಸಲಾಗಿದೆ. ಅಲ್ಲದೆ, ಅಗ್ನಿಶಾಮಕ ದಳದ ಸಿಬ್ಬಂದಿಯು ಸ್ಥಳಕ್ಕೆ ಆಗಮಿಸಿದ್ದು, ಬೆಂಕಿಯನ್ನು ನಂದಿಸಲಾಗುತ್ತದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೆ, ಜನರಲ್ ಮ್ಯಾನೇಜರ್ (ದಕ್ಷಿಣ ರೈಲ್ವೆ), ವಿಭಾಗೀಯ ರೈಲ್ವೆ ವ್ಯವಸ್ಥಾಪಕ (ಡಿಆರ್‌ಎಂ) ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ರಕ್ಷಣಾ ತಂಡ ಕೂಡ ಹೊರಟಿದೆ ಎಂದು ಅದು ಹೇಳಿದೆ.

ಸಹಾಯವಾಣಿ ಸಂಖ್ಯೆಗಳು

ಚೆನ್ನೈ ವಿಭಾಗ: 04425354151, 0442435499

ಬೆಂಗಳೂರು ವಿಭಾಗ: 8861309815

ಮೈಸೂರು ವಿಭಾಗ: 9731143981

ಕೆಎಸ್‌ಆರ್ ಬೆಂಗಳೂರು, ಮಂಡ್ಯ ಮತ್ತು ಕೆಂಗೇರಿ ನಿಲ್ದಾಣಗಳಲ್ಲಿ ಸಹಾಯ ಕೇಂದ್ರಗಳು ಲಭ್ಯವಿದೆ

ಮೈಸೂರು ನಿಲ್ದಾಣದಲ್ಲಿ ಸಹಾಯ ಕೇಂದ್ರ ಲಭ್ಯ – 08212422400

ಸಮಸ್ತಿಪುರ್ – 8102918840

ದರ್ಬಾಂಗ್ – 8210335395

ಡಣಾಪುರ – 9031069105

ದೀನದಯಾಳ್ ಉಪಾಧ್ಯಾಯ ಜಂಕ್ಷನ್ – 7525039558

Leave a Reply

Your email address will not be published. Required fields are marked *

Join WhatsApp Group
error: Content is protected !!