ಬೆಂಗಳೂರು, ಅಕ್ಟೋಬರ್ 14: ಜಿಲ್ಲೆಯ ಯಲಹಂಕ ತಾಲೂಕಿನ ಗ್ರಾಮ ಸಿಂಗನಾಯಕನಹಳ್ಳಿಯ ಯಡಿಯೂರಪ್ಪ ನಗರದಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ (death) ಮಾಡಿಕೊಂಡಿರುವ ಘಟನೆ ನಡೆದಿದೆ. ನೇಣುಬಿಗಿದುಕೊಂಡು ದಂಪತಿ ಅವಿನಾಶ್(33), ಮಮತಾ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಸ್ಥಳಕ್ಕೆ ರಾಜಾನುಕುಂಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಹಣಕಾಸಿನ ಆರ್ಥಿಕ ತೊಂದರೆಯಿಂದ ಮನನೊಂದು ಕುಟುಂಬ ಆತ್ಮಹತ್ಯೆಗೆ ಶರಣಾಗಿದೆ.

ಗಂಡನ ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣವಾಯ್ತಾ?

5 ವರ್ಷಗಳಿಂದ ಟ್ಯಾಕ್ಸಿ ಚಾಲಕನಾಗಿ ಕೆಲಸ ಮಾಡುತ್ತಿದ್ದ ಅವಿನಾಶ್, 5 ವರ್ಷದ ಹಿಂದೆ ಕಲಬುರಗಿಯಿಂದ ಬೆಂಗಳೂರಿಗೆ ಕುಟುಂಬ ಸಮೇತ ಬಂದಿದ್ದರು. ಗಂಡನ ಆರ್ಥಿಕ ಸಂಕಷ್ಟದಿಂದ ಪತ್ನಿ ಮಮತಾ ಆತ್ಮಹತ್ಯೆಗೆ ನಿರ್ಧರಿಸಿದ್ದಾರೆ. ಮೊದಲಿಗೆ ಇಬ್ಬರು ಮಕ್ಕಳ ಕತ್ತು ಹಿಸುಕಿ ಕೊಂದಿದ್ದು, ನಂತರ ತಾನು ಹಗ್ಗ ಕಟ್ಟಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗಂಡನಿಗೆ ಕರೆ ಮಾಡಿ ಮಮತಾ ಮಾತನಾಡಿದ್ದಾರೆ.
ಇನ್ನು ಸಂಜೆ ಪತಿ ಹಲವು ಭಾರಿ ಕರೆ ಮಾಡಿದರು ಫೋನ್ ರಿಸೀವ್ ಮಾಡಿಲ್ಲ. ಹೀಗಾಗಿ ಮೇಲಿನ ಮನೆಯವರಿಗೆ ಕರೆ ಮಾಡಿ ಪತ್ನಿಗೆ ಫೋನ್ ನೀಡುವಂತೆ ಪತಿ ಅವಿನಾಶ್ ಹೇಳಿದ್ದಾರೆ. ಈ ವೇಳೆ ಹಲವು ಭಾರೀ ಬಾಗಿಲು ಬಡಿದರು ತೆಗೆದಿಲ್ಲ. ಹೀಗಾಗಿ ರಾತ್ರಿ 9 ಗಂಟೆ ಸುಮಾರಿಗೆ ಅವಿನಾಶ್ ಮನೆಗೆ ವಾಪಸ್ ಬಂದಿದ್ದಾರೆ. ಮತ್ತೊಂದು ಕೀ ಇಂದು ಮನೆ ಬೀಗ ತೆಗೆದು ಒಳ ಹೋದಾಗ ಮಕ್ಕಳನ್ನ ಸಾಯಿಸಿ ಪತ್ನಿ ಆತ್ಮಹತ್ಯೆಗೆ ಶರಣಾಗಿರುವುದು ಪತ್ತೆಯಾಗಿದೆ. ಪತ್ನಿ ಮಕ್ಕಳ ಕೊಲೆ ಕಂಡು ಅವಿನಾಶ್ ಬೆಚ್ಚಿಬಿದ್ದಿದ್ದಾರೆ. ನಂತರ ಪತ್ನಿ ಮೃತದೇಹ ತೆಗೆದು ಅದೇ ಹಗ್ಗಕ್ಕೆ ಅವಿನಾಶ್ ಕೂಡ ನೇಣಿಗೆ ಶರಣಾಗಿದ್ದಾರೆ. ಸದ್ಯ ನಾಲ್ವರ ಮೃತದೇಹಗಳನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಮರಣೋತ್ತರ ಪರೀಕ್ಷೆ ನಡೆಯಲಿದೆ.

ಅವಿನಾಶ್ ಸಂಬಂಧಿ ಹೇಳಿದ್ದೇನು?
ಅವಿನಾಶ್ ಸಂಬಂಧಿ ದತ್ತು ರಾಥೋಡ್ ಪ್ರತಿಕ್ರಿಯಿಸಿದ್ದು, ಸುಮಾರು 6 ವರ್ಷಗಳಿಂದ ದಂಪತಿ ಇಲ್ಲಿ ನೆಲೆಸಿದ್ದರು. ಸ್ವಂತ ಕ್ಯಾಬ್ ತೆಗೆದುಕೊಂಡು ಓಲಾ ಮತ್ತು ಊಬರ್ಗೆ ಅಟ್ಯಾಚ್ ಮಾಡಿ ಕೆಲಸ ಮಾಡುತ್ತಿದ್ದರು. ಗಂಡ-ಹೆಂಡತಿ ಇಬ್ಬರು ಅನ್ಯೋನ್ಯವಾಗಿದ್ದರು. ಈ ಘಟನೆ ನಮಗೆ ಶಾಕ್ ನೀಡಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!