ಬೆಂಗಳೂರು , ಅ.17- ಪತ್ನಿಯ ಶೀಲ ಶಂಕಿಸಿದ ಪತಿ ದೊಣ್ಣೆಯಿಂದ ಹೊಡೆದು ಪತ್ನಿ ಹಾಗೂ ಆಕೆಯ ಪ್ರಿಯಕರನನ್ನು ಕೊಲೆ ಮಾಡಿ ತಾನೂ ಆತಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ ನಡೆದಿದೆ.

ಆಂಧ್ರಪ್ರದೇಶ ಮೂಲದ ಕೋಲುಸುಗೊಲ್ಲ(41) ಎಂಬಾತನೇ ಪತ್ನಿ ಕೋಲುಲಕ್ಷ್ಮಿ(33) ಮತ್ತು ಆಕೆಯ ಪ್ರಿಯಕರ ಗಣೇಶ್ಕುಮಾರ್(20)ನನ್ನು ಕೊಲೆ ಮಾಡಿ ಆತಹತ್ಯೆಗೆ ಶರಣಾದವನು.ಆರ್ಬಿಐ ಲೇಔಟ್ನ ಸೋಮೇಶ್ವರ ಬಡಾವಣೆಯಲ್ಲಿ ಈ ಮೂವರು ನಿರ್ಮಾಣ ಹಂತದ ಕಟ್ಟಡದಲ್ಲಿ ಗಾರೆ ಕೆಲಸ ಮಾಡಿಕೊಂಡು ಅಲ್ಲೇ ನೆಲೆಸಿದ್ದರು.

ಈ ನಡುವೆ ಪತ್ನಿ ಲಕ್ಷ್ಮೀ ಮೇಲೆ ಪತಿಗೆ ಅನುಮಾನ. ರಾತ್ರಿ ಊಟ ಮಾಡಿ ಮಲಗಿದ್ದು, ಬೆಳಗಿನ ಜಾವ ಪತಿಗೆ ಎಚ್ಚರವಾಗಿದೆ. ಆ ವೇಳೆ ಪತ್ನಿ ಲಕ್ಷ್ಮೀ ತನ್ನ ಪ್ರಿಯಕರ ಗಣೇಶನೊಂದಿಗೆ ಇರುವುದು ನೋಡಿ ಜಗಳವಾಡಿ ಕೈಗೆ ಸಿಕ್ಕಿದ ದೊಣ್ಣೆಯಿಂದ ಮನಬಂದಂತೆ ಇಬ್ಬರನ್ನೂ ಹೊಡೆದು ರಕ್ತದೋಕುಳಿ ಹರಿಸಿ ಕೊಲೆ ಮಾಡಿದ್ದಾನೆ.

ನಂತರ ಪತ್ನಿಯ ಸಹೋದರಿಗೆ ಮೊಬೈಲ್ ಕರೆ ಮಾಡಿ ಗಣೇಶನೊಂದಿಗೆ ನಿನ್ನ ಅಕ್ಕ ಲಕ್ಷ್ಮೀ ಅಕ್ರಮ ಸಂಬಂಧ ಇಟ್ಟುಕೊಂಡಿದ್ದರಿಂದ ಇಬ್ಬರನ್ನೂ ಕೊಲೆ ಮಾಡಿದ್ದು, ನಾನು ಆತಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಹೇಳಿ ಮೊಬೈಲ್ ಸ್ಥಗಿತಗೊಳಿಸಿದ್ದಾನೆ.

ತದನಂತರ ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ಆತ ಅದೇ ಕಟ್ಟಡದಲ್ಲೇ ಹಗ್ಗದಿಂದ ನೇಣು ಬಿಗಿದುಕೊಂಡು ಆತಹತ್ಯೆಗೆ ಶರಣಾಗಿದ್ದಾನೆ. ಸುದ್ದಿ ತಿಳಿದು ಕೋಣನಕುಂಟೆ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿ ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!