
ಡೆ ಹ್ರಾಡೂನ್: ಉತ್ತರಾಖಂಡದ ಮಸ್ಸೂರಿಯಲ್ಲಿ ಪತ್ತೆಯಾದ ಸರ್ಕಾರಿ ನೌಕರನ ಮೃತದೇಹ ಭಾರೀ ಸಂಚಲನ ಸೃಷ್ಟಿಸಿದೆ.
ಮೃತರನ್ನು ಅನುಕುಲ್ ರಾವತ್ (22) ಎಂದು ಗುರುತಿಸಲಾಗಿದೆ. ಇವರು ಲಾಲ್ ಬಹದ್ದೂರ್ ಶಾಸ್ತ್ರಿ ನ್ಯಾಷನಲ್ ಅಕಾಡೆಮಿ ಆಫ್ ಅಡ್ಮಿನಿಸ್ಟ್ರೇಷನ್‌ನಲ್ಲಿ ಉದ್ಯೋಗ ಮಾಡುತ್ತಿದ್ದರು.
ಸರ್ಕಾರಿ ಕ್ವಾರ್ಟರ್ಸ್ ಕೂಡ ಸಿಕ್ಕಿದೆ. ಈ ಕ್ವಾರ್ಟರ್‌ನ ಕೋಣೆಯಲ್ಲಿ ಶವ ಪತ್ತೆಯಾಗಿರುವ ಅವರ ಸ್ಥಿತಿ ಆಘಾತಕಾರಿಯಾಗಿದೆ.
ಕ್ವಾರ್ಟರ್‌ನಲ್ಲಿ ಅನುಕುಲ್ ರಾವತ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆದರೆ ಆತ್ಮಹತ್ಯೆಗೂ ಮುನ್ನ ಮೇಕಪ್ ಮಾಡಿ, ತುಟಿಗೆ ಕೆಂಪು ಲಿಪ್ ಸ್ಟಿಕ್ ಹಚ್ಚಿ ಸೀರೆಯನ್ನೂ ಧರಿಸಿದ್ದಾನೆ. ನಂತರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಗುರುವಾರ ಅನುಕೂಲ್ ಕರ್ತವ್ಯಕ್ಕೆ ಹಾಜರಾಗದ ಹಿನ್ನೆಲೆಯಲ್ಲಿ ಆತನಿಗಾಗಿ ಶೋಧ ನಡೆಸಲಾಯಿತು. ಆತನ ಕೊಠಡಿ ಒಳಗಿನಿಂದ ಬೀಗ ಹಾಕಿರುವುದನ್ನು ಸಿಬ್ಬಂದಿ ಪತ್ತೆ ಮಾಡಿದರು. ಪೊಲೀಸರು ಬಂದ ನಂತರ ಬಾಗಿಲು ಒಡೆದು ನೋಡಿದಾಗ, ಸೀರೆಯುಟ್ಟು ಮಹಿಳೆಯರಂತೆ ಮೇಕಪ್ ಮಾಡಿದ್ದ ಸ್ಥಿತಿಯಲ್ಲಿ ಅನುಕೂಲ್ ಮೃತದೇಹ ನೇತಾಡುತ್ತಿತ್ತು. ಬಳಿಕ ಶವವನ್ನು ಕುಣಿಕೆಯಿಂದ ಬಿಡಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅನುಕುಲ್ ನೆರೆಹೊರೆಯಲ್ಲಿ ವಾಸಿಸುವ ಇತರ ಉದ್ಯೋಗಿಗಳೊಂದಿಗೆ ಹೆಚ್ಚು ಮಾತನಾಡುತ್ತಿರಲಿಲ್ಲ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಸದ್ಯ ಆತ್ಮಹತ್ಯೆಗೆ ಲೈಂಗಿಕ ಅಸ್ವಸ್ಥತೆಯೇ ಕಾರಣ ಎಂದು ಪೊಲೀಸರು ಪರಿಗಣಿಸಿದ್ದಾರೆ. ಆದರೆ ಇನ್ನೂ ಪ್ರಕರಣವನ್ನು ಇತರ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದೆ.
