ಪುತ್ತೂರು: ಕೆದಂಬಾಡಿ ಗ್ರಾಮದ ಚಾವಡಿ ಹೊಸಮನೆ ಜನಾರ್ದನ ರೈ ಸಿ.ಎಚ್.(57ವ.) ಅಲ್ಪಕಾಲದ ಅನಾರೋಗ್ಯದಿಂದ ಅ.20 ರಂದು ನಿಧನರಾದರು.

ಮೃತರು ಪತ್ನಿ ಚಂದ್ರಲತಾ ಜೆ.ರೈ, ಪುತ್ರಿಯರಾದ ಕೃತಿ ರೈ,ಕೃಪಾ ರೈ, ಅಳಿಯಂದಿರಾದ ಪುನೀತ್ ಶೆಟ್ಟಿ,ಜಿತೇಶ್ ಶೆಟ್ಟಿ, ಸಹೋದರರಾದ ಸದಾಶಿವ ರೈ, ಸುದ್ದಿ ಬಿಡುಗಡೆಯ ಸಂಪಾದಕ ಕರುಣಾಕರ ರೈ, ಸಹೋದರಿಯರಾದ ಸರೋಜಿನಿ ರೈ, ಶಶಿಕಲಾ ರೈ, ಪ್ರಮೀಳಾ ರೈ, ಬಾವಂದಿರಾದ ಸೀತಾರಾಮ ರೈ, ದಾಸಪ್ಪ ರೈ, ಮೋಹನ ಪಕಳ ಕುಂಡಾಪು, ನಾದಿನಿಯರಾದ ಶುಭಾ ರೈ,ಜ್ಯೋತಿ ಕೆ.ರೈ ಮತ್ತು ಇಬ್ಬರು ಮೊಮ್ಮಕ್ಕಳನ್ನು ಅಗಲಿದ್ದಾರೆ.

ಅ.21 ರಂದು ಅಂತ್ಯಕ್ರಿಯೆ

ಮೃತ ಜನಾರ್ದನ ರೈ ಅವರ ಅಂತಿಮ ಕ್ರಿಯೆಯನ್ನು ಅ.21ರಂದು ಬೆಳಿಗ್ಗೆ ಸ್ವಗೃಹ ಚಾವಡಿ ಹೊಸಮನೆಯಲ್ಲಿ ನಡೆಯಲಿದೆ ಎಂದು ಅವರ ಸಹೋದರ ಕರುಣಾಕರ ರೈ ಸಿ.ಎಚ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!