ರವಿವಾರ ರಾತ್ರಿ ದುಬೈನಲ್ಲಿ ನಡೆದ ಮಹಿಳೆಯರ ಟಿ20 ವಿಶ್ವಕಪ್ ಫೈನಲ್‌ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನ್ಯೂಝಿಲ್ಯಾಂಡ್ ಜಯಭೇರಿ ಬಾರಿಸಿದೆ. ಆ ಮೂಲಕ ನ್ಯೂಝಿಲ್ಯಾಂಡ್ ಮೊದಲ ವಿಶ್ವಕಪ್ ಗೆದ್ದುಕೊಂಡಿದೆ.

ನ್ಯೂಝಿಲ್ಯಾಂಡ್‌ ನೀಡಿದ 159 ರನ್‌ ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾವು 20 ಓವರ್‌ ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 126 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಆ ಮೂಲಕ ನ್ಯೂಝಿಲ್ಯಾಂಡ್‌ ಚೊಚ್ಚಲ ವಿಶ್ವಕಪ್‌ ತನ್ನದಾಗಿಸಿಕೊಂಡಿತು.

ಇಲ್ಲಿನ ದುಬೈ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಅದು ದಕ್ಷಿಣ ಆಫ್ರಿಕ ಮಹಿಳಾ ತಂಡವನ್ನು 32 ರನ್‌ಗಳಿಂದ ಸೋಲಿಸಿದೆ.

ದಕ್ಷಿಣ ಆಫ್ರಿಕಕ್ಕೆ ನಾಯಕಿ ಹಾಗೂ ಆರಂಭಿಕ ಬ್ಯಾಟರ್ ಲಾರಾ ವೊಲ್ವಾರ್ಟ್ 27 ಎಸೆತಗಳಲ್ಲಿ 33 ರನ್ ಗಳಿಸಿ ಸದೃಢ ಆರಂಭವನ್ನು ಒದಗಿಸಿದರು. ಆದರೆ, ಇನ್ನೋರ್ವ ಆರಂಭಿಕ ಬ್ಯಾಟರ್ ಟಝ್ಮಿನ್ ಬ್ರಿಟ್ಸ್ (17)ರನ್ನು ಹೊರತುಪಡಿಸಿ ಉಳಿದ ಆಟಗಾರ್ತಿಯರು ಕಿವೀಸ್ ಬೌಲರ್‌ಗಳನ್ನು ಎದುರಿಸಲು ಪರದಾಡಿದರು.

ವಿಕೆಟ್‌ಗಳು ಒಂದರ ಹಿಂದೆ ಒಂದರಂತೆ ಕ್ಷಿಪ್ರ ಅವಧಿಯಲ್ಲಿ ಉರುಳಿದವು.

ನ್ಯೂಝಿಲ್ಯಾಂಡ್ ಪರವಾಗಿ ರೋಸ್‌ಮೇರಿ ಮೇರ್ ಮತ್ತು ಅಮೇಲಿಯಾ ಕೆರ್ ತಲಾ 3 ವಿಕೆಟ್‌ಗಳನ್ನು ಪಡೆದರು.

ಇದಕ್ಕೂ ಮೊದಲು, ಟಾಸ್ ಗೆದ್ದ ದಕ್ಷಿಣದ ಆಫ್ರಿಕ ತಂಡವು ಎದುರಾಳಿಯನ್ನು ಮೊದಲು ಬ್ಯಾಟಿಂಗ್‌ಗೆ ಇಳಿಸಿತು. ನ್ಯೂಝಿಲ್ಯಾಂಡ್ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 158 ರನ್‌ಗಳನ್ನು ಗಳಿಸಿತು. ಆರಂಭಿಕ ಬ್ಯಾಟರ್ ಜಾರ್ಜಿಯಾ ಪ್ಲಿಮರ್ (9) ವಿಫಲವಾದರೂ, ಇನ್ನೋರ್ವ ಆರಂಭಿಕ ಬ್ಯಾಟರ್ ಸುಝೀ ಬೇಟ್ಸ್ 32 ರನ್‌ಗಳನ್ನು ಗಳಿಸಿ ಉತ್ತಮ ಅಡಿಪಾಯ ಹಾಕಿದರು.

ಬಳಿಕ ಅಮೇಲಿಯಾ ಕೆರ್ 38 ಎಸೆತಗಳಲ್ಲಿ 43 ರನ್‌ಗಳನ್ನು ಕಲೆಹಾಕಿ ಕಿವೀಸ್ ಇನಿಂಗ್ಸನ್ನು ಬೆಳೆಸಿದರು. ಬ್ರೂಕ್ ಹ್ಯಾಲಿಡೇ 28 ಎಸೆತಗಳಲ್ಲಿ 38 ರನ್‌ಗಳನ್ನು ಸಿಡಿಸಿ ಉಪಯುಕ್ತ ರನ್‌ ಕಲೆ ಹಾಕಿದರು.

ದಕ್ಷಿಣ ಆಫ್ರಿಕ ಪರವಾಗಿ ನೊಂಕುಲುಲೆಕೊ ಮಲಾಬ 4 ಒವರ್‌ಗಳಲ್ಲಿ 31 ರನ್‌ಗಳನ್ನು ನೀಡಿ 2 ವಿಕೆಟ್‌ಗಳನ್ನು ಪಡೆದರು.

Leave a Reply

Your email address will not be published. Required fields are marked *

Join WhatsApp Group
error: Content is protected !!