ಪುಣೆ: ರಿಷಭ್ ಪಂತ್ ಮೈದಾನದಲ್ಲಿದ್ದರೆ ನಗುವಿಗೆ ಯಾವುದೇ ಕೊರತೆಯಿಲ್ಲ. ಆಟದ ಜೊತೆಗೆ ತಮ್ಮ ಮಾತು, ನಡುವಳಿಕೆಯಿಂದಲೂ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವ ರಿಷಭ್ ಪಂತ್ ನಿನ್ನೆಯ ದಿನದಾಟದಲ್ಲಿ ಎದುರಾಳಿಯ ಮುಂದೆ ಬೇಸ್ತು ಬಿದ್ದ ಘಟನೆ ನಡೆದಿದೆ.

ನ್ಯೂಜಿಲೆಂಡ್ ವಿರುದ್ಧ ಪುಣೆಯಲ್ಲಿ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡುತ್ತಿದ್ದಾಗ ಅವರಿಗೆ ಹಿಂದಿಯಲ್ಲಿ ರಿಷಭ್ ಪಂತ್ ಸಲಹೆ ನೀಡಿದರು. ಸಾಮಾನ್ಯವಾಗಿ ಭಾರತೀಯ ಆಟಗಾರರು ಹಿಂದಿ ಅರಿಯದ ವಿದೇಶೀ ಆಟಗಾರರ ಮುಂದೆ ಬೌಲರ್ ಗಳಿಗೆ ಹೀಗೇ ಸಲಹೆ ಸೂಚನೆ ಕೊಡುತ್ತಿರುತ್ತಾರೆ.

ಆದರೆ ರಿಷಭ್ ದುರಾದೃಷ್ಟಕ್ಕೆ ನಿನ್ನೆ ಕ್ರೀಸ್ ನಲ್ಲಿದ್ದಿದ್ದು ಭಾರತೀಯ ಮೂಲದ ಅಝಾಜ್ ಪಟೇಲ್. ರಿಷಭ್ ಎಂದಿನಂತೆ ಕೊಂಚ ಫುಲ್ಲರ್ ಬಾಲ್ ಹಾಕು ವಾಶಿ ಎಂದು ವಾಷಿಂಗ್ಟನ್ ಸುಂದರ್ ಗೆ ಹಿಂದಿಯಲ್ಲಿ ಹೇಳಿದರು. ಆದರೆ ಅಝಾಜ್ ಪಟೇಲ್ ಗೆ ಅದು ಅರ್ಥವಾಯಿತು. ಅವರು ಆ ಎಸೆತವನ್ನು ಅರಿತು ಅದಕ್ಕೆ ತಕ್ಕಂತೆ ಆಡಿದರು.

ಇದನ್ನು ಅರಿತ ರಿಷಭ್, ‘ಅಯ್ಯೋ ನಂಗೇನು ಗೊತ್ತಿತ್ತು ಈತನಿಗೆ ಹಿಂದಿ ಬರುತ್ತೆ ಅಂತ’ ಎಂದು ಹೇಳಿದ್ದು ಮೈಕ್ ಸ್ಟಂಪ್ ನಲ್ಲಿ ಸ್ಪಷ್ಟವಾಗಿದೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ರಿಷಭ್ ಮಾತಿಗೆ ನೆಟ್ಟಿಗರೂ ನಕ್ಕಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!