ಪುತ್ತೂರು :  ಸರ್ಪಂಗಳ ನಿವಾಸಿಯಾದ  ಸೆಂಟ್ರಿಂಗ್ ಕಾರ್ಮಿಕರೋರ್ವರ  ಮೃತದೇಹ ಪುತ್ತೂರಿನ ಹಾರಾಡಿ ಸಮೀಪ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ  ಪತ್ತೆಯಾಗಿದೆ.ಮೃತ ವ್ಯಕ್ತಿ ಉಕ್ಕಿನಡ್ಕ ಸಮೀಪದ ಸರ್ಪಂಗಳ ನಿವಾಸಿ ತಿಮ್ಮ ನಾಯ್ಕ ಎಂಬವರ ಪುತ್ರ ಚನಿಯಪ್ಪ ಯಾನೆ ರಾಧಾಕೃಷ್ಣ ನಾಯ್ಕ (46) ಎಂದು ಗುರುತಿಸಲಾಗಿದೆ.


ಸೆಂಟ್ರಿಂಗ್ ಕಾರ್ಮಿಕರಾದ ಇವರು ಪುತ್ತೂರು ಸಮೀಪದ ಕಬಕ ಪರಿಸರದಲ್ಲಿ ಕೆಲಸ ನಿರ್ವಹಿಸುತ್ತಿದ್ದು ವಾರಕ್ಕೊಮ್ಮೆ ಊರಿಗೆ ಬರುತ್ತಿದ್ದರು. ಬುಧವಾರ ಬೆಳಗ್ಗೆ ಮನೆಯಿಂದ ತೆರಳಿದ್ದರು ಎನ್ನಲಾಗಿದೆ. ಕಬಕ  ಸ್ಟೇಶನ್ ವ್ಯಾಪ್ತಿಯ ರೈಲು ಹಳಿಯಲ್ಲಿ ಗುರುವಾರ ಮಧ್ಯಾಹ್ನ ಮೃತದೇಹ ಪತ್ತೆಯಾಗಿದ್ದು ಬುಧವಾರ ರಾತ್ರಿ ಹಳಿ ದಾಟುವಾಗ ರೈಲು ಡಿಕ್ಕಿಯಾಗಿರಬೇಕೆಂದು ಸಂಶಯಿಸಲಾಗಿದೆ. ಡಿಕ್ಕಿಯಾದ ರಭಸಕ್ಕೆ ಕಾಲು ತುಂಡಾಗಿದ್ದು ರಾತ್ರಿ ವೇಳೆ ಯಾರ ಗಮನಕ್ಕೂ ಬಾರದೆ ಅತೀವ ರಕ್ತಸ್ರಾವದಿಂದ ವ್ಯಕ್ತಿ ಮೃತಪಟ್ಟಿರಬೇಕೆಂದು ಪೋಲಿಸರು ತಿಳಿಸಿದ್ದಾರೆ.  ಮೃತರು ತಾಯಿ ರಾಧಾವತಿ,ಪತ್ನಿ ಸುಮತಿ, ಮಕ್ಕಳಾದ ಸಪ್ತಮಿ,ಸಾತ್ವಿಕ್ ಸಹೋದರರನ್ನು ಅಗಲಿದ್ದಾರೆ, ರೈಲ್ವೆ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!