ಪುತ್ತೂರು: ಇಲ್ಲಿನ ಮುಕ್ರಂಪಾಡಿಯಲ್ಲಿರುವ ಆಕರ್ಷಣ್ ಇಂಡಸ್ಟ್ರೀಸ್ ನ 29 ನೇ ವರ್ಷಾಚರಣೆ ಅಂಗವಾಗಿ ʻವರುಷದ ಹರುಷʼ ಮೆಗಾ ಆಫರ್ ಸೇಲ್ ಹಾಗೂ ಬಂಪರ್ ಬಹುಮಾನ ಕೂಪನ್ ಬಿಡುಗಡೆ ಕಾರ್ಯಕ್ರಮ ಇಂದು ( ಅ 21) ಸಂಸ್ಥೆಯ ಕಚೇರಿಯಲ್ಲಿ ನಡೆಯಿತು.
ಕುಂಬ್ರ ವರ್ತಕ ಸಂಘದ ಸ್ಥಾಪಕಾದ್ಯಕ್ಷರಾದ
ಶ್ಯಾಮ್ ಸುಂದರ್ ರೈ ಕೊಪ್ಪಳ ಪ್ರಥಮ ಗ್ರಾಹಕ ಕೂಪನ್ ಸ್ವೀಕರಿಸಿದರು.

ಕಾಂಕ್ರೀಟ್ ಉತ್ಪನ್ನಗಳ ಉತ್ಪಾದನಾ ಸಂಸ್ಥೆಯಾಗಿರುವ ಪುತ್ತೂರಿನ ಆಕರ್ಷಣ್ ಇಂಡಸ್ಟ್ರೀಸ್ 29 ನೇ ವರ್ಷಕ್ಕೆ ಪಾದಾರ್ಪಣೆಯ  ಪ್ರಯುಕ್ತ  ಹಾಗೂ ದೀಪಾವಳಿ ಹಬ್ಬದ  ಅಂಗವಾಗಿ  ಸಂಸ್ಥೆಯಲ್ಲಿ ಮೆಗಾ ಆಫರ್‌ ಸೇಲ್‌ ಆಯೋಜಿಸಲಾಗಿದೆ.

ಮೆಗಾ ಆಫರ್‌ ಸೇಲ್‌  ಅ. 21ರಿಂದ ನ. 18ರ ತನಕ 29 ದಿನಗಳ ಕಾಲ ನಡೆಯಲಿದ್ದು ಸಂಸ್ಥೆಯ ಪ್ರಮುಖ ಉತ್ಪನ್ನಗಳಾದ ರೆಡಿವಾಲ್, ಫೆನ್ಸಿಂಗ್ ಪೋಲ್ಸ್, ಡ್ರಾಗನ್ ಸ್ಟ್ಯಾಂಡ್ ಮತ್ತು ಪೆಪ್ಪರ್ ಪೋಲ್ಸ್ ಹಾಗೂ ಇತರ ವಸ್ತುಗಳ ಖರೀದಿಗೆ ಕ್ಯಾಶ್‌ ಡಿಸ್ಕೌಂಟ್‌ ಹಾಗೂ ಸ್ಮಾರ್ಟ್‌ ವಾಚ್‌ ಸಹಿತ ಹತ್ತು ಹಲವು ಬಹುಮಾನಗಳನ್ನು ಗೆಲ್ಲುವ ಅವಕಾಶವಿದೆ. ಜತೆಗೆ ಗ್ರಾಹಕರಿಗೆ ಬಂಪರ್‌ ಬಹುಮಾನ ʻಹೀರೋ ಬೈಕ್‌ʼ ಗೆಲ್ಲುವ ಅವಕಾಶ ಇದ್ದು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ :
6364143375, 8861008373 ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು.

Leave a Reply

Your email address will not be published. Required fields are marked *

Join WhatsApp Group
error: Content is protected !!