ಉ ತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮಹಿಳೆಯೊಬ್ಬರ ಜೊತೆ ಕೋಣೆಯಲ್ಲಿ ರೆಡ್‌ ಹ್ಯಾಂಡ್‌ ಆಗಿ ಸಿಕ್ಕಿಬಿದ್ದ 40 ವರ್ಷದ ರಾಮ್ ಬಾಲಕ್ ನಿಶಾದ್ ಎಂಬಾತನನ್ನು ಗುಂಪೊಂದು ಬರ್ಬರವಾಗಿ ಹತ್ಯೆ ಮಾಡಿದೆ.

ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಬಳಿಕ ಪೊಲೀಸರು ದುಷ್ಕರ್ಮಿಗಳನ್ನು ಗುರುತಿಸಿದ್ದು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

ನಿಶಾದ್ ತನ್ನ ಸ್ನೇಹಿತೆಯೊಂದಿಗೆ ಬೀಗ ಹಾಕಿದ ಕೋಣೆಯಲ್ಲಿ ಪತ್ತೆಯಾದಾಗ ಈ ಘಟನೆ ಸಂಭವಿಸಿದೆ. ಇದರಿಂದ ಆಕ್ರೋಶಗೊಂಡ ಸ್ಥಳೀಯರು ಗುಂಪು ಗುಂಪಾಗಿ ಆತನ ಮೇಲೆ ಹಲ್ಲೆ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿದ್ದು, ಬಳಿಕ ಆತ ಮೃತಪಟ್ಟಿದ್ದ. ವಿಡಿಯೋ ದೃಶ್ಯಗಳಿಂದ ಆರೋಪಿಗಳನ್ನು ಗುರುತಿಸಿರುವ ಪೊಲೀಸರು ಬಂಧನಕ್ಕೆ ಮುಂದಾಗಿದ್ದಾರೆ.

40 ವರ್ಷದ ವ್ಯಕ್ತಿ ತನ್ನ ಮಹಿಳಾ ಸ್ನೇಹಿತೆಯೊಂದಿಗೆ ಇದ್ದ ಕೋಣೆಯ ಬೀಗವನ್ನು ವ್ಯಕ್ತಿಯೊಬ್ಬ ತೆರೆಯುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಮೂವರು ವ್ಯಕ್ತಿಗಳು ಕೋಲಿನೊಂದಿಗೆ ಕೋಣೆಗೆ ಪ್ರವೇಶಿಸಿದ್ದು, ಬಳಿಕ ಅವನ ಮೇಲೆ ನಿರಂತರವಾಗಿ ಕಪಾಳಮೋಕ್ಷ ಮಾಡಿ ಕೋಲಿನಿಂದ ಹೊಡೆಯುತ್ತಾರೆ. ಹೊರಗಡೆ ಬಂದ ಬಳಿಕವೂ ನೆಲದ ಮೇಲೆ ಬಿದ್ದ ಅವನಿಗೆ ಮನಬಂದಂತೆ ಥಳಿಸಿದ್ದಾರೆ

ಆರೋಪಿಗಳು ಮಹಿಳೆಯ ಮೇಲೂ ದೊಣ್ಣೆಗಳಿಂದ ಹಲ್ಲೆ ಮಾಡಿದ್ದು, ಪುರುಷ ಮತ್ತು ಮಹಿಳೆ ವಿವಾಹೇತರ ಸಂಬಂಧದಲ್ಲಿ ಭಾಗಿಯಾಗಿದ್ದ ಕಾರಣಕ್ಕೆ ಈ ಕೃತ್ಯ ನಡೆದಿದೆ ಎನ್ನಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!