ಬೆಂಗಳೂರು : ನಗರದ ಕೋಣನಕುಂಟೆ ಯಲ್ಲಿ ದೀಪಾವಳಿಯ ಸಂದರ್ಭದಲ್ಲಿ ಸ್ನೇಹಿತರು ಹೇಳಿದರೆಂದು ಪಟಾಕಿಯ ಬಾಕ್ಸ್ ಮೇಲೆ ಕುಳಿತುಕೊಂಡ ಯುಕನೊಬ್ಬ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ಸೋಮವಾರ ತಿಳಿಸಿದ್ದಾರೆ.

ಮೃತ ಯುವಕ ಶಬರೀಶ್ ಎಂಬಾತನಾಗಿದ್ದಾನೆ. ಮದ್ಯದ ಅಮಲಿನಲ್ಲಿದ್ದ ಶಬರೀಶ್, ಕುಡಿದ ಮತ್ತಿನಲ್ಲಿದ್ದ ತನ್ನ ಆರು ಮಂದಿ ಸ್ನೇಹಿತರ ಸವಾಲನ್ನು ಸ್ವೀಕರಿಸಿ ಬಾಕ್ಸ್ ಮೇಲೆ ಕುಳಿತುಕೊಂಡಿದ್ದು, ಸಿಡಿದಾಗ ಗಂಭೀರವಾಗಿ ಗಾಯಗೊಂಡಿದ್ದ.

ತತ್ ಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶನಿವಾರ ಮೃತಪಟ್ಟಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಕ್ಟೋಬರ್ 31 ರಂದು ಘಟನೆ ನಡೆದಿದ್ದು, ಜಮಾಯಿಸಿದ ಆರು ಜನರ ಗುಂಪು ಪಟಾಕಿ ತುಂಬಿರುವ ಬಾಕ್ಸ್ ಮೇಲೆ ಕುಳಿತರೆ ಆಟೋರಿಕ್ಷಾ ಖರೀದಿಸಿ ನೀಡುವುದಾಗಿ ಹೇಳಿದ್ದಾರೆ.

ವಿಡಿಯೋದಲ್ಲಿ ಸೆರೆಯಾದ ಈ ಘಟನೆಯು ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ, ದೊಡ್ಡ ಸ್ಫೋಟದ ಬಳಿಕ ಶಬರೀಶ್ ನೆಲಕ್ಕೆ ಬೀಳುವುದನ್ನು ಕಾಣಬಹುದಾಗಿದೆ.

‘ಹತ್ಯೆ ಪ್ರಕರಣವನ್ನು ದಾಖಲಿಸಲಾಗಿದೆ ಮತ್ತು ಘಟನೆಯಲ್ಲಿ ಭಾಗಿಯಾಗಿರುವ ಆರು ಮಂದಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ’ ಎಂದು ದಕ್ಷಿಣ ಬೆಂಗಳೂರು ಉಪ ಪೊಲೀಸ್ ಆಯುಕ್ತ ಲೋಕೇಶ್ ಜಗಲಾಸರ್ ಹೇಳಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!