ಪುತ್ತೂರು; ದೇಶದ ಆರ್ಥಿಕತೆಯಲ್ಲಿ ಸಹಕಾರಿ ಕ್ಷೇತ್ರಕ್ಕೆ ಮಹತ್ತರವಾದ ಸ್ಥಾನವಿದೆ. ದೇಶದ ಜಿಡಿಪಿಯಲ್ಲಿ ಶೇ.೨೫ ರಷ್ಟು ಸಹಕಾರಿ ಕ್ಷೇತ್ರದ ಕೊಡುಗೆಯಾಗಿದೆ. ಸಂಕ್ರಮಣದ ಕಾಲಘಟ್ಟದಲ್ಲಿ ಸಹಕಾರಿ ಕ್ಷೇತ್ರ ಸರ್ಕಾರಕ್ಕೆ ದೊಡ್ಡ ಸಹಕಾರ ನೀಡುತ್ತಿದೆ ಎಂದು ಕ್ಯಾಂಪ್ಕೊ ಸಂಸ್ಥೆಯ ಮಾಜಿ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಹೇಳಿದರು.
ಪುತ್ತೂರಿನಲ್ಲಿ ಕಳೆದ ೧೧೫ ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಪುತ್ತೂರು ಕೊ-ಆಪರೇಟಿವ್ ಟೌನ್‌ಬ್ಯಾಂಕ್ ಇದರ ಮೊತ್ತ ಮೊದಲ ಶಾಖೆಯ ಉದ್ಘಾಟನಾ ಕಾರ್ಯಕ್ರಮ ವಿಟ್ಲದಲ್ಲಿ ಗುರುವಾರ ನಡೆದಿದ್ದು, ಈ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಮಾತನಾಡಿದರು.
ಸ್ವಾತಂತ್ರö್ಯಪೂರ್ವದಲ್ಲಿ ಆರಂಭಗೊAಡ ಈ ಸಹಕಾರಿ ಸಂಸ್ಥೆ ಹಲವು ಸವಾಲುಗಳ ಮಧ್ಯೆಯೂ ನಿರಂತರವಾಗಿ ಲಾಭದಾಯಕವಾಗಿಯೇ ಬೆಳೆದುಕೊಂಡು ಬಂದಿದೆ. ಸಹಕಾರಿ ಕ್ಷೇತ್ರದಲ್ಲಿಯೂ ಇಂದು ಮಹತ್ತರವಾದ ಬದಲಾವಣೆಯಾಗಿದೆ. ೮ ಕೋಟಿಗಿಂತಲೂ ಅಧಿಕ ಸದಸ್ಯರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಸುಮಾರು ೮ ಲಕ್ಷಕ್ಕೂ ಅಧಿಕವಾದ ಸಹಕಾರಿ ಸಂಸ್ಥೆಗಳು ಕಾರ್ಯಾಚರಿಸುತ್ತಿವೆ. ಈ ಸಹಕಾರಿ ಕ್ಷೇತ್ರ ಅವಕಾಶಗಳ ಆಗರವಾಗಿದೆ ಮತ್ತು ಹೆಚ್ಚು ಪವಿತ್ರವಾಗಿ ಉಳಿದುಕೊಂಡಿದೆ. ಆರ್ಥಿಕ ಬಲಿಷ್ಠತೆಯನ್ನು ನೀಡುವಲ್ಲಿ ದೊಡ್ಡ ಕೊಡುಗೆ ನೀಡಿದೆ ಎಂದು ಅವರು ಹೇಳಿದರು.
ವಿಟ್ಲದಲ್ಲಿ ನೂತನವಾಗಿ ಟೌನ್‌ಬ್ಯಾಂಕ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದ ವಿಧಾನಪರಿಷತ್ ಸದಸ್ಯ ಕಿಶೋರ್‌ಕುಮಾರ್ ಪುತ್ತೂರು ಅವರು ಕೃಷಿಕ ಸಮಾಜದ ಕಷ್ಟಗಳಿಗೆ ನಿರಂತರವಾಗಿ ಸ್ಪಂಧಿಸಿದ ಏಕೈಕ ಸಹಕಾರಿ ಸಂಸ್ಥೆಯಾಗಿರುವ ಪುತ್ತೂರು ಟೌನ್‌ಬ್ಯಾಂಕ್ ಉತ್ತಮ ಕೊಡುಗೆಯಾಗಿದೆ. ಜನರು ಕೂಡಾ ತಮಗೆ ಸಹಕಾರ ನೀಡಿದ ಸಂಸ್ಥೆಗಳನ್ನು ಯಾವತ್ತೂ ಮರೆಯುವುದಿಲ್ಲ. ಸಹಕಾರಿ ಸಂಸ್ಥೆಯ ಬೆನ್ನೆಲುಬಾಗಿ ನಿಲ್ಲುತ್ತಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಶಾಖೆಗಳನ್ನು ತೆರೆಯುವ ಮೂಲಕ ಪುತ್ತೂರು ಟೌನ್ ಬ್ಯಾಂಕ್ ಮತ್ತಷ್ಟು ಅಭಿವೃದ್ಧಿಯ ಪಥವನ್ನು ಕಾಣಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಕೋ-ಆಪರೇಟಿವ್ ಟೌನ್‌ಬ್ಯಾಂಕ್ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ ಅವರು ಮಾತನಾಡಿ, ಆರ್ಥಿಕವಾಗಿ ಸದೃಢವಾಗಿರುವ ಟೌನ್‌ಬ್ಯಾಂಕ್ ಮೊದಲ ಶಾಖೆ ತೆರೆಯುವ ತನ್ನ ದಿಟ್ಟ ಹೆಜ್ಜೆಯ ಕನಸು ಇಂದು ನನಸಾಗಿದೆ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ನಿರ್ದೇಶಕ ಚಂದ್ರಶೇಖರ್ ರಾವ್ ಬಪ್ಪಳಿಗೆ ಅವರು ಜನತೆಯ ಪಾಲಿಗೆ ಭದ್ರತೆ ಮತ್ತು ಬಲಿಷ್ಟತೆಯನ್ನು ಹೊಂದಿರುವ ಟೌನ್ ಬ್ಯಾಂಕ್ ತನ್ನ ೧೧೫ ವರ್ಷಗಳ ಕಾಲಾವಧಿಯ ಪಯಣದಲ್ಲಿ ಯಾವತ್ತೂ ನಷ್ಟ ಅನುಭವಿಸಿಲ್ಲ. ಆ ಮೂಲಕ ಇದು ಜನತೆಯ ಬ್ಯಾಂಕ್ ಆಗಿ ಪರಿವರ್ತನೆಗೊಂಡಿದೆ ಎಂದರು.
ಕಾರ್ಯಕ್ರಮದಲ್ಲಿ ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯರ ಭಾವಚಿತ್ರ ಅನಾವರಣ ಮಾಡಲಾಯಿತು. ೨೦೨೫ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು.ಪ್ರಥಮ ಠೇವಣಿ ಪತ್ರವನ್ನು ಗೋವರ್ಧನ ವಿಟ್ಲ ಅವರಿಗೆ ನೀಡಲಾಯಿತು. ನೂತನ ಶಾಖೆಗೆ ಸ್ಥಳಾವಕಾಶ ನೀಡಿರುವ ಎಂಪೈಯರ್ ಕಟ್ಟಡ ಮಾಲಕ ಪೀಟರ್ ಫ್ರಾನ್ಸಿಸ್, ಟೌನ್‌ಬ್ಯಾಂಕ್ ಅಧ್ಯಕ್ಷ ಎನ್.ಕಿಶೋರ್ ಕೊಳತ್ತಾಯ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೇಖರ್ ಶೆಟ್ಟಿ ಅವರನ್ನು ಎಂಎಲ್‌ಸಿ ಕಿಶೋರ್ ಕುಮಾರ್ ಬೊಟ್ಯಾಡಿ ಸನ್ಮಾನಿಸಿದರು. ಪುತ್ತೂರು ಟೌನ್‌ಬ್ಯಾಂಕ್ ಉಪಾಧ್ಯಕ್ಷ ಕುಡ್ಗಿ ವಿಶ್ವಾಸ ಶೆಣೈ ಸ್ವಾಗತಿಸಿದರು. ಪುತ್ತೂರು ಟೌನ್‌ಬ್ಯಾಂಕ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೇಖರ್ ಶೆಟ್ಟಿ ವಂದಿಸಿದರು.  ಅದ್ವಿಕಾ ಪ್ರಾರ್ಥಿಸಿದರು. ವಿಟ್ಲ ಶಾಖಾ ವ್ಯವಸ್ಥಾಪಕ ಚೇತನ್ ಕಾರ್ಯಕ್ರಮ ನಿರೂಪಿಸಿದರು.  ಕಾರ್ಯಕ್ರಮದಲ್ಲಿ ವಿಟ್ಲ ಪಟ್ಟಣಪಂಚಾಯತ್ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು, ನಿರ್ದೇಶಕರಾದ ಸದಾಶಿವ ಪೈ, ಕಿರಣ್ ಕುಮಾರ್ ರೈ, ಚಂದ್ರಶೇಖರ ಗೌಡ ಕೆ, ನಾರಾಯಣ ಎ.ಬಿ, ವಿನೋದ್ ಕುಮಾರ್ ಜಿ, ಮಲ್ಲೇಶ್ ಕುಮಾರ್, ಜಯಂತಿ, ಹೇಮಾವತಿ, ಅರವಿಂದ ಕೃಷ್ಣ ಬಿ ಉಪಸ್ಥಿತರಿದ್ದರು.

ಸಹಕಾರಿ ಕ್ಷೇತ್ರದ ಫವರ್..!
ದೇಶದ ಆರ್ಥಿಕತೆಯ ಒಂದು ಪ್ರಮುಖ ಶಕ್ತಿಯಾಗಿರುವ ಸಹಕಾರಿ ಕ್ಷೇತ್ರ ಕೇವಲ ಒಂದು ದಿನ ಬಂದ್ ಆದರೆ ಸಾಕು, ಕೇಂದ್ರ ಸಚಿವರಾದ ಅಮಿತ್ ಶಾ ಕೂಡಾ ಓಡಿ ಬಂದು ನಮ್ಮ ಜತೆಗೆ ಮಾತುಕತೆ ನಡೆಸುತ್ತಾರೆ. ಅಂತಹ ಫವರ್ ಸಹಕಾರಿ ಕ್ಷೇತ್ರಕ್ಕಿದೆ. ಹಾಗಾಗಿ ಕೇವಲ ಲಾಭ ಮಾಡುವುದು ಮಾತ್ರ ಸಹಕಾರಿ ಕ್ಷೇತ್ರದ ಗುರಿಯಾಗಬಾರದು. ಸಮಾಜದ ಬದುಕಿಗೂ ನಮ್ಮ ಸ್ಪಂದನೆ ಇರಬೇಕು- ಎಸ್.ಆರ್.ಸತೀಶ್ಚಂದ್ರ ಕ್ಯಾಂಪ್ಕೊ ಸಂಸ್ಥೆಯ ಮಾಜಿ ಅಧ್ಯಕ್ಷರು

 

Leave a Reply

Your email address will not be published. Required fields are marked *

Join WhatsApp Group
error: Content is protected !!