ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್ ಇಂದು ಇಂಟರ್‌ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಕಣಜವನ್ನು ಹೊಂದಿದೆ. ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪನಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ವಿಶ್ವದ ಅಸಮಾನ್ಯ ಸಾಮ್ರಾಟ ಆಗಲಿದೆ ಎಂದು ಹೇಳಲಾಗಿದೆ.

ಪ್ರತಿ ಪ್ರಶ್ನೆಗೂ ಗೂಗಲ್ ಬಳಿ ಉತ್ತರವಿದೆ ಎಂದು ಹೇಳಲಾಗುತ್ತದೆ. ಅಂತೆಯೆ ಪ್ರತಿ ವರ್ಷ ಗೂಗಲ್ನಲ್ಲಿ ಜನರು ಏನೆಲ್ಲ ಹುಡುಕಾಟ ನಡೆಸಿದ್ದಾರೆ ಎಂಬ ಫಲಿತಾಂಶಗಳ ವರದಿಯನ್ನು ಕಂಪನಿ ಬಿಡುಗಡೆ ಮಾಡುತ್ತದೆ.

ಹೌದು, ಇದರಲ್ಲಿ ಮಹಿಳೆಯರ ಇಂಟರ್‌ನೆಟ್ ಬಳಕೆಗೆ ಸಂಬಂಧಿಸಿದ ಅನೇಕ ಅಚ್ಚರಿಯ ಸಂಗತಿಗಳು ಬೆಳಕಿಗೆ ಬಂದಿವೆ. ದೇಶದ ಒಟ್ಟು 150 ಮಿಲಿಯನ್ ಇಂಟರ್ನೆಟ್ ಬಳಕೆದಾರರಲ್ಲಿ, ಭಾರತದಲ್ಲಿ ಸುಮಾರು 60 ಮಿಲಿಯನ್ ಮಹಿಳೆಯರು ಆನ್‌ಲೈನ್‌ನಲ್ಲಿರುತ್ತಾರಂತೆ. ಇವುಗಳ ಜೊತೆಗೆ ಹುಡುಗಿಯರು ಗೂಗಲ್‌ನಲ್ಲಿ ಏನನ್ನು ಸರ್ಚ್ ಮಾಡುತ್ತಾರೆ ಎನ್ನುವ ಅಂಶ ಕೂಡ ಬೆಳಕಿಗೆ ಬಂದಿದೆ. ಹಾಗಿದ್ದರೆ ಹುಡುಗಿಯರು ಒಬ್ಬರೇ ಇದ್ದಾಗ ಗೂಗಲ್ನಲ್ಲಿ ಸರ್ಚ್ ಮಾಡುವಂತಹ ಪ್ರಮುಖ ವಿಷಯಗಳು ಏನು ಎಂಬುದನ್ನು ನೋಡೋಣ.

ಭಾರತದಲ್ಲಿ ಇಂಟರ್‌ನೆಟ್‌ ಮಹಿಳಾ ಬಳಕೆದಾರರ ಪೈಕಿ ಶೇ.75ರಷ್ಟು ಜನರು 15 ರಿಂದ 34 ವಯಸ್ಸಿನವರು ಆಗಿದ್ದಾರೆ. ಅದರಲ್ಲಿಯೂ ಯುವತಿಯರು ಏಕಾಂಗಿಯಾಗಿದ್ದ ವೇಳೆ ಗೂಗಲ್‌ನಲ್ಲಿ ಏನು ಸರ್ಚ್ ಮಾಡ್ತಾರೆ ಎಂಬುದನ್ನು ವರದಿ ಮಾಡಿದೆ. ಯುವತಿಯರು ಗೂಗಲ್‌ನಲ್ಲಿ ಏನು ನೋಡತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ. ಆ ವಿಷಯಗಳು ಏನು ಎಂಬುದನ್ನು ನೋಡೋಣ ಬನ್ನಿ.

ಶಿಕ್ಷಣ, ವೃತ್ತಿಜೀವನ: ಇಂದು ಬಾಲ್ಯದಿಂದಲೂ ಯುವತಿಯರು ಮಹತ್ವಾಕಾಂಕ್ಷೆಯನ್ನು ಹೊಂದಿರುತ್ತಾರೆ. ಶೇ.80ರಷ್ಟು ಜನರು ತಾವು ಏನು ಮಾಡಬೇಕು? ಏನು ಓದಬೇಕು? ಭವಿಷ್ಯದಲ್ಲಿ ಯಾವ ಹಂತಕ್ಕೆ ಹೋಗಬೇಕು ಎಂಬ ನಿರ್ಧಿಷ್ಟ ಗುರಿಯನ್ನು ಹೊಂದಿರುತ್ತಾರೆ. ಹೀಗಾಗಿ ತಮ್ಮ ವೃತ್ತಿ ಭವಿಷ್ಯದ ಕುರಿತ ವಿಷಯಗಳನ್ನು ಸರ್ಚ್ ಮಾಡುತ್ತಾರೆ. ವೃತ್ತಿ ಜೀವನದಲ್ಲಿ ಉನ್ನತಮಟ್ಟಕ್ಕೆ ತಲುಪಬೇಕಾದ್ರೆ ಏನು ಮಾಡಬೇಕು? ಯಾವ ಕೋರ್ಸ್ ಸೇರಿಕೊಂಡರೆ ಏನು ಮಾಡಬೇಕು ಎಂದು ಹುಡುಕಾಡುತ್ತಿರುತ್ತಾರೆ.

ಇನ್ನು ವಿದ್ಯಾರ್ಥಿನಿಯರು ತಮ್ಮ ಶಿಕ್ಷಣದ ಕುರಿತ ವಿಷಯಗಳ ಬಗ್ಗೆ ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ.

ರೊಮ್ಯಾಂಟಿಕ್ಹಾಡುಮತ್ತುಸಂಗೀತ:ಯುವತಿಯರು ಸೇರಿದಂತೆ ಮಧ್ಯ ವಯಸ್ಕ ಮಹಿಳೆಯರು ಏಕಾಂತದಲ್ಲಿ ರೊಮ್ಯಾಂಟಿಕ್ ಹಾಡು ಮತ್ತು ಸಂಗೀತ ಕೇಳಲು ಇಷ್ಟಪಡುತ್ತಾರೆ. ಗೂಗಲ್‌ನಲ್ಲಿ ರೊಮ್ಯಾಂಟಿಕ್ ಹಾಡುಗಳನ್ನು ಸದಾ ಹುಡುಕುತ್ತಾರೆ. ಮನೆಯಲ್ಲಿದ್ದಾ ಇಂಪಾದ ಹಾಡುಗಳನ್ನು ಕೇಳುತ್ತಲೇ ಹಲವರು ಕೆಲಸ ಮಾಡುತ್ತಾರೆ.

ಫ್ಯಾಶನ್ಟಿಪ್ಸ್: ಪುರುಷರಿಗಿಂತ ಮಹಿಳೆಯರು ಹೆಚ್ಚು ತಮ್ಮ ಸೌಂದರ್ಯದ ಬಗ್ಗೆ ಆಸಕ್ತಿ ಹೊಂದಿರುತ್ತಾರೆ. ಬೇರೆಯವರಿಗಿಂತ ತಾನು ಹೇಗೆ ಚೆನ್ನಾಗಿ ಕಾಣಬೇಕು ಎಂಬುದರ ಕುರಿತಾಗಿ ಗೂಗಲ್‌ನಲ್ಲಿ ಸರ್ಚ್ ಮಾಡುತ್ತಿರುತ್ತಾರೆ. ಸೌಂದರ್ಯಕ್ಕಾಗಿ ಯಾವ ಪ್ರೊಡಕ್ಟ್ ಬಳಸಬೇಕು? ಹೇಗೆ ಬಳಸಬೇಕು? ಯಾವ ಪ್ರೊಡಕ್ಟ್ ಉತ್ತಮ? ಮದುವೆ ಸೇರಿದಂತೆ ವಿವಿಧ ಸಮಾರಂಭಗಳಿಗೆ ಹೇಗೆ ತಯಾರಾಗಬೇಕು ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಹುಡುಕಾಡುತ್ತಿರುತ್ತಾರೆ. ಫ್ಯಾಶನ್, ನೇಲ್ ಆರ್ಟ್, ಹೇರ್ ಕೇರ್, ಡಯಟಿಂಗ್ ಟಿಪ್ಸ್, ಟ್ರೆಂಡ್, ಸೌಂದರ್ಯ ಚಿಕಿತ್ಸೆ, ಮನೆಮಮದ್ದುಗಳ ಬಗ್ಗೆಯೂ ಗೂಗಲ್‌ನಲ್ಲಿ ಹುಡುಕಾಡುತ್ತಿರುತ್ತಾರೆ.

ಆನ್‌ಲೈನ್‌ಶಾಪಿಂಗ್:ಶಾಪಿಂಗ್ ಮಾಡೋದು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. ಆನ್‌ಲೈನ್‌ನಲ್ಲಿ ಯಾವುದಾದ್ರೂ ಟ್ರೆಂಡ್ ಬಂದಿದ್ಯಾ? ಯಾವ ಪ್ಲಾಟ್‌ಫಾರಂನಲ್ಲಿ ಡಿಸ್ಕೌಂಟ್ ಸಿಗುತ್ತೆ? ತಮ್ಮ ಬಜೆಟ್‌ನಲ್ಲಿ ಫ್ಯಾಷನ್ ಬಟ್ಟೆ ಎಲ್ಲಿ ಸಿಗುತ್ತೆ ಎಂಬುದನ್ನು ನೋಡುತ್ತಿರುತ್ತಾರೆ. ಅಮೆಜಾನ್, ಮಿಂತ್ರಾ, ಫ್ಲಿಪ್‌ಕಾರ್ಟ್, ಆಜಯೋ ಅಂತಹ ಆಪ್‌ಗಳು ಗೂಗಲ್‌ನಲ್ಲಿ ಸಿಗುತ್ತವೆ. ಫೇಸ್‌ಬುಕ್, ಟೆಲಿಗ್ರಾಂ, ಇನ್‌ಸ್ಟಾಗ್ರಾಂನಲ್ಲಿಯೂ ಶಾಪಿಂಗ್ ಮಾಡಬಹುದಾಗಿದೆ.

ಮೆಹಂದಿಡಿಸೈನ್: ಮಹೆಂದಿ ಹಾಕಿಕೊಳ್ಳೋದು ಅಂದ್ರೆ ಯುವತಿಯರಿಗೆ ಬಲುಇಷ್ಟ. ತಮ್ಮ ಅಂಗೈ ಯಾವಾಗಲೂ ಕಲರ್‌ಫುಲ್ ಆಗಿರಬೇಕು ಎಂದು ಬಯಸುತ್ತಾರೆ. ಅದಕ್ಕಾಗಿ ಗೂಗಲ್‌ನಲ್ಲಿ ಹೊಸ ಹೊಸ ಮೆಹಂದಿ ಡಿಸೈನ್‌ಗಳನ್ನು ಹುಡುಕುತ್ತಾರೆ. ಮೆಹಂದಿ ವಿನ್ಯಾಸಗಳನ್ನು ನೋಡಲು ಮಹಿಳೆಯರು ಇಷ್ಟಪಡುತ್ತಾರೆ ಅನ್ನೋ ಅಂಶ ಅಧ್ಯಯನದಲ್ಲಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!