
ಪುತ್ತೂರು : ಟಾಪ್ ಟೆನ್ ಲಕ್ಕಿ ಸ್ಕೀಮ್ ಆವೃತ್ತಿ 7 ರ 3ನೇ ಲಕ್ಕಿ ಡ್ರಾ ಪ್ರಯುಕ್ತ ನ. 16 ರಂದು ನಡೆದ ಕಾರ್ಯಕ್ರಮದಲ್ಲಿ 150ಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿದ ಮತ್ತು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಾಹಸಿ ಶೋಭಾ ಪ್ರಶಾಂತ್ ಕುಪ್ಪೆಟ್ಟಿ ಇವರನ್ನು ಟಾಪ್ ಟೆನ್ ಲಕ್ಕಿ ಸ್ಕೀಮ್ ಆಯೋಜಕರು ಪುತ್ತೂರಿನ ಜನತೆಯ ಪರವಾಗಿ ಶಾಲು ಹೊದಿಸಿ ಗೌರವ ಸ್ಮರಣಿಕೆ ನೀಡಿ ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ವಿನೋದ್ ಪುತ್ತೂರು,ಶ್ರೀಮತಿ ಅರುಣಾ ರಾವ್,ಪುನೀತ್,ಉಮ್ಮರ್ ಪೆರಿಗೇರಿ,ಟಾಪ್ ಟೆನ್ ಲಕ್ಕಿ ಸ್ಕೀಮ್ ಪಾಲುದಾರರಾಗಿರುವ ಪ್ರವೀಣ್ ಬಲ್ನಾಡ್, ಜುನೈದ್ ಸಾಲ್ಮರ ಹಾಗೂ ಭಾತಿಶ ಬಲ್ನಾಡ್ ಉಪಸ್ಥಿತರಿದ್ದರು.






