

ನವದೆಹಲಿ: ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮೊದಲು ಭಾರತೀಯ ವೇಗಿ ಅರ್ಷ್ದೀಪ್ ಸಿಂಗ್ರನ್ನು 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಭರ್ಜರಿ ಬಿಡ್ಡಿಂಗ್ನಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಮ್ಮ ತಂಡಕ್ಕೆ ಅರ್ಷ್ದೀಪ್ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು.
ಇನ್ನು ನಂತರದಲ್ಲಿ ಬಂದ ದಕ್ಷಿಣ ಆಫ್ರಿಕಾ ವೇಗಿ ಕಗಿಸೋ ರಬಾಡ ನಂತರ ಹರಾಜಿಗೆ ಬಂದ ಭಾರತದ ಸ್ಟಾರ್ ಬ್ಯಾಟರ್ ಶ್ರೇಯಸ್ ಅಯ್ಯರ್ಗೆ ದೊಡ್ಡ ಬಿಡ್ಡಿಂಗ್ ನಡೆದಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಾ ಮುಂದು ತಾ ಮುಂದು ಎಂದು ಖರೀದಿಗೆ ಬಿದ್ದರು. ಈ ವೇಳೆ 25 ಕೋಟಿ ರೂ. ತಲುಪಿದರೂ ಕೂಡ ಬಿಡ್ಡಿಂಗ್ನಲ್ಲಿ ಕೈಬಿಡದ ಪಂಜಾಬ್ ಕಿಂಗ್ಸ್, ತಮ್ಮ ಗುರಿಯನ್ನು ಸಾಧಿಸುವಲ್ಲಿ ಸೋಲಲಿಲ್ಲ.
ಅಂತಿಮವಾಗಿ 26.75 ಕೋಟಿ ರೂ.ಗೆ ಶ್ರೇಯಸ್ ಅಯ್ಯರ್ರನ್ನು ಪ್ರೀತಿ ಜಿಂಟಾ ಮಾಲೀಕತ್ವದ ಪಂಜಾಬ್ ಕಿಂಗ್ಸ್ ಖರೀದಿ ಮಾಡಿತು.
