ಪುತ್ತೂರು: ನಗರಸಭಾ ಅಧ್ಯಕ್ಷೆ ಹಾಗೂ ಇತರರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿ ಅದ್ದು ಪಡೀಲ್ ನನ್ನು ಪೊಲೀಸರು ಡಿ 01 ರಂದು ಸಂಜೆ ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ವಾಟ್ಸಾಪ್ ಗ್ರೂಪ್ ಗಳಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಅದ್ದು ಪಡೀಲ್ ವಿರುದ್ಧ ನಗರ ಪೊಲೀಸರಿಗೆ ಬಿಜೆಪಿ ನಿಯೋಗ ದೂರು ನೀಡಿದ್ದು ಈ ಸಂದರ್ಭ ಅದ್ದು ವಿರುದ್ಧ ದೂರು ಸ್ವೀಕರಿಸಲು ಮತ್ತು ಸೂಕ್ತ ಕಾನೂನು ಕ್ರಮ ಜರಗಿಸಲು ಹಿಂದೇಟು ಹಾಕುತ್ತಿರುವ ಪೊಲೀಸರ ನಡೆಯನ್ನು ಖಂಡಿಸಿ ಮಾಜಿ ಶಾಸಕ ಸಂಜೀವ ಮಠoದೂರು ಅವರು ನಗರಸಭೆಯ ಬಿಜೆಪಿ ಸದಸ್ಯರೊಂದಿಗೆ ನಗರ ಠಾಣೆಯ ಮುಂಭಾಗದಲ್ಲಿ ತಮ್ಮ ಆಕ್ರೋಶ ಹೊರಹಾಕಿದ್ದರು.
ಇದೀಗ ಬಿಜೆಪಿ ನಾಯಕರ ಪ್ರತಿಭಟನೆಯ ಬೆನ್ನಲ್ಲೇ, ಅವಹೇಳನಕಾರಿ ಪೋಸ್ಟ್ ಹಾಕಿದ್ದ ಅದ್ದು ಪಡೀಲ್ ನನ್ನು ಡಿ 1 ರಂದು ಸಂಜೆ ವಶಕ್ಕೆ ಪಡೆದಿರುವ ಪುತ್ತೂರು ನಗರ ಠಾಣೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ದೌರ್ಜನ್ಯ ಕಾಯ್ದೆಯಡಿ ಆರೋಪಿಯ ವಿರುದ್ದ ಪ್ರಕರಣ ದಾಖಲಾಗಿದೆ.