ಹಾಸನ: ಇದು ನಿಜಕ್ಕೂ ದುರಂತ ಕಥೆ. ನೂರಾರು ಕನಸು ಕಂಡು, ಕಷ್ಟ ಪಟ್ಟು ಐಪಿಎಎಸ್ ಪರೀಕ್ಷೆ (IPS Exam) ಪಾಸು ಮಾಡಿ, ಪೊಲೀಸ್ ತರಬೇತಿಯನ್ನೂ (Police Training) ಪಡೆದು, ಮೊದಲ ದಿನ ಕರ್ತವ್ಯಕ್ಕೆ ಹಾಜರಾಗಿದ್ದ ಐಪಿಎಸ್ ಅಧಿಕಾರಿಯೊಬ್ಬರು (IPS Officer) ದುರ್ಮರಣಕ್ಕೆ ಈಡಾಗಿದ್ದಾರೆ.

ಹಾಸನದ (Hassan) ತಾಲೂಕಿನ ಕಿತ್ತಾನೆ ಗ್ರಾಮದ ಬಳಿ ಅಪಘಾತದಲ್ಲಿ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು (probationary IPS officer) ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ ಮೂಲಕ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಎಂಬುವರು ಅಪಘಾತದಲ್ಲಿ ಕೊನೆಯುಸಿರೆಳೆದಿದ್ದಾರೆ. ಇಂದಿನಿಂದ ಕರ್ತವ್ಯಕ್ಕೆ ಹಾಜರಾಗಬೇಕಿದ್ದು, ಅಧಿಕಾರ ಸ್ವೀಕರಿಸಲು ಜಿಲ್ಲಾ ಪೊಲೀಸ್ ವರಿಷ್ಠ (SP) ಕಚೇರಿಗೆ ಬರುತ್ತಿದ್ದಾಗಲೇ ಅಪಘಾತ ಸಂಭವಿಸಿದೆ.

ಕೆಲಸಕ್ಕೆ ಸೇರಲು ಬರುತ್ತಿದ್ದ ಐಪಿಎಸ್ ಅಧಿಕಾರಿ ಸಾವು

ಐಪಿಎಸ್ ತರಬೇತಿ ಮುಗಿಸಿ, ಇಂದು ಮೊದಲ ದಿನದ ಕರ್ತವ್ಯಕ್ಕೆ ಹಾಜರಾಗಬೇಕಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿಯೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಮಧ್ಯಪ್ರದೇಶ ಮೂಲದ ಹರ್ಷಬರ್ದನ್ ಎಂಬುವರೇ ಅಪಘಾತದಲ್ಲಿ ಮೃತಪಟ್ಟವರು.

ಪೊಲೀಸ್‌ ಜೀಪ್ ವಾಹನದ ಟೈಯರ್ ಸಿಡಿದು ಅವಘಡ

ಹಾಸನ ತಾಲ್ಲೂಕಿನ ಕಿತ್ತಾನೆ ಬಳಿ ಇಂದು ಪೊಲೀಸ್ ಜೀಪ್‌ನ ಟೈಯರ್ ಸಿಡಿದು ಅಪಘಾತ ಸಂಭವಿಸಿತ್ತು. ಜೀಪ್‌ನಲ್ಲಿದ್ದ ಪ್ರೊಬೆಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಹಾಗೂ ಚಾಲಕ ಗಂಭೀರವಾಗಿ ಗಾಯಗೊಂಡಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವು

KA-13-G-1386 ನಂಬರ್‌ನ ಪೊಲೀಸ್ ಜೀಪ್‌ ಅಪಘಾತಕ್ಕೆ ಈಡಾಗಿತ್ತು. ಈ ವೇಳೆ ತೀವ್ರವಾಗಿ ಗಾಯಗೊಂಡಿರುವ ಪ್ರೊಬೇಷನರಿ ಅಧಿಕಾರಿ ಹರ್ಷಬರ್ಧನ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಹರ್ಷಬರ್ದನ್ ಸಾವನ್ನಪ್ಪಿದ್ದಾರೆ.

ಕೆಲಸಕ್ಕೆ ಸೇರಬೇಕಿದ್ದ ಮೊದಲ ದಿನವೇ ದುರಂತ ಅಂತ್ಯ

ಹರ್ಷಬರ್ದನ್ 2023ನೇ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದರು. 2022ನೇ ಬ್ಯಾಚ್‌ನಲ್ಲಿ‌153ನೇ ರ್ಯಾಂಕ್ ಪಡೆದಿದ್ದರು. ಮೈಸೂರಿನಲ್ಲಿದ್ದ ಕರ್ನಾಟಕ ಪೊಲೀಸ್ ಆಕಾಡೆಮಿಯಲ್ಲಿ ತರಬೇತಿ ಪಡೆದಿದ್ದರು. ಇಂದು ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಪ್ರೊಬೇಷನರಿ ಡಿವೈಎಸ್‌ಪಿಯಾಗಿ ರಿಪೋರ್ಟ್ ಮಾಡಲು ತೆರಳುತ್ತಿದ್ದರು.

ಎಸ್ಪಿ ಕಚೇರಿಗೆ ತೆರಳುತ್ತಿದ್ದಾಗಲೇ ದುರಂತ!

ಮೈಸೂರಿನಲ್ಲಿ ತರಬೇತಿ ಮುಗಿಸಿದ ಹರ್ಷಬರ್ದನ್, ಮೈಸೂರಿನ ಪೊಲೀಸ್ ಅಕಾಡೆಮಿಯಿಂದ ಹಾಸನ ಎಸ್ಪಿ ಕಚೇರಿಗೆ ಬರುತ್ತಿದ್ದರು. ಈ ವೇಳೆ ಪೊಲೀಸ್ ಜೀಪ್‌ನ ಟೈಯರ್ ಸಿಡಿದು, ದುರಂತ ಸಂಭವಿಸಿದೆ.

ಇನ್ನಿಬ್ಬರಿಗೆ ಗಾಯ, ಆಸ್ಪತ್ರೆಯಲ್ಲಿ ಮುಂದುವರೆದ ಚಿಕಿತ್ಸೆ

ಇನ್ನು ಘಟನೆಯಲ್ಲಿ ದೀಕ್ಷಿತ್ ಹಾಗೂ ಜೀಪ್ ಚಾಲಕ ಮಂಜೇಗೌಡ ಎಂಬುವರು ಗಾಯಗೊಂಡಿದ್ದಾರೆ. ಸದ್ಯ ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಮುಂದುವರೆದಿದೆ.

ಯುವ ಅಧಿಕಾರಿ ಸಾವಿಗೆ ಅಲೋಕ್ ಕುಮಾರ್ ಕಂಬನಿ

ಇನ್ನು ಪ್ರೊಬೇಷನರಿ ಐಪಿಎಸ್ ಅಧಿಕಾರಿ ಹರ್ಷಬರ್ದನ್ ಸಾವಿಗೆ ಕರ್ನಾಟಕ ಪೊಲೀಸ್ ಆಕಾಡೆಮಿ ಎಡಿಜಿಪಿ ಅಲೋಕ್ ಕುಮಾರ್ ಕಂಬನಿ ಮಿಡಿದಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಂದು ಸಂಜೆ ಹಾಸನದ ಬಳಿ ನಡೆದ ರಸ್ತೆ ಅಪಘಾತದಲ್ಲಿ ನಮ್ಮ 2023ರ ಬ್ಯಾಚ್ ಐಪಿಎಸ್ ಪ್ರೊಬೇಷನರ್ ಹರ್ಷ ವರ್ಧನ್ ಅವರನ್ನು ಕಳೆದುಕೊಂಡಿದ್ದೇವೆ ಅಂತ ಹೇಳಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!