

ಫೆಂಗಾಲ್ ಚಂಡಮಾರುತದಿಂದ ಚೆನ್ನೈ ನಡುಗುತ್ತಿದೆ. ತಮಿಳುನಾಡಿನ ಉತ್ತರ ಜಿಲ್ಲೆಗಳು ಮತ್ತು ಪುದುಚೇರಿಯ ಡೆಲ್ಟಾ ಜಿಲ್ಲೆಗಳಲ್ಲಿ ಚಂಡಮಾರುತ ಫೆಂಗಾಲ್ ನಿಂದ ಉಂಟಾದ ತೀವ್ರ ಹವಾಮಾನದಿಂದಾಗಿ, ಚೆನ್ನೈ ವಿಮಾನ ನಿಲ್ದಾಣವನ್ನು ಭಾನುವಾರ ಮುಂಜಾನೆ 4 ಗಂಟೆಯವರೆಗೆ ಮುಚ್ಚಲಾಗಿತ್ತು.
ಆದರೆ ಶನಿವಾರದಂದು ಚೆನ್ನೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತೀವ್ರವಾದ ಹವಾಮಾನ ಪರಿಸ್ಥಿತಿ ಹಲವು ಆತಂಕದ ಕ್ಷಣಗಳಿಗೆ ಕಾರಣವಾಯಿತು. ಭಾರೀ ಮಂಜು ಮತ್ತು ಬಿರುಗಾಳಿಯಿಂದ ವಿಮಾನಗಳು ನಿಲ್ದಾಣದಲ್ಲಿ ಇಳಿಯಲು ಹೆಣಗಾಡಿದವು.
ಅಂತಹ ಅಪಾಯಕಾರಿ ಹವಾಮಾನ ಪರಿಸ್ಥಿತಿಗಳಲ್ಲಿ ವಿಮಾನಗಳನ್ನು ಏಕೆ ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂದು ನೆಟ್ಟಿಗರು ಪ್ರಶ್ನಿಸುವುದರೊಂದಿಗೆ ವಿಮಾನ ಲ್ಯಾಂಡಿಂಗ್‌ನ ಭಯಾನಕ ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ಹವಾಮಾನ ವೈಪರೀತ್ಯದಿಂದ ವಿಮಾನ ಇಳಿಸಲು ಸವಾಲುಗಳನ್ನು ಎದುರಿಸಿದ ಚಾಲಕ ಕೊನೆಯ ಕ್ಷಣದಲ್ಲಿ ಲ್ಯಾಂಡಿಂಗ್ ಮಾಡದೇ ತನ್ನ ನಿರ್ಧಾರ ಬದಲಿಸುವಂತಾಯಿತು. ಏತನ್ಮಧ್ಯೆ ಮತ್ತೊಂದು ವಿಮಾನವು ಕ್ರಾಸ್‌ವಿಂಡ್‌ಗಳನ್ನು ಎದುರಿಸಲು ಮತ್ತು ಸುರಕ್ಷಿತವಾಗಿ ಇಳಿಯುವಲ್ಲಿ ಯಶಸ್ವಿಯಾಯಿತು. ಇದು ವಿಮಾನದಲ್ಲಿದ್ದವರಿಗೆ ಕೈಯಲ್ಲಿ ಜೀವ ಹಿಡಿದುಕೊಳ್ಳುವಂತಹ ಅನುಭವ ನೀಡಿತು.
ಪುದುಚೇರಿ ಮತ್ತು ತಮಿಳುನಾಡು ಕರಾವಳಿಯಲ್ಲಿ ಭೂಕುಸಿತವನ್ನು ಉಂಟುಮಾಡಿದ ಫೆಂಗಾಲ್ ಚಂಡಮಾರುತವು ಕಳೆದ ಆರು ಗಂಟೆಗಳ ಪುದುಚೇರಿ ಬಳಿ ಸ್ಥಿರವಾಗಿದೆ. ಕಡಲೂರ್‌ನಿಂದ ಉತ್ತರಕ್ಕೆ ಸುಮಾರು 30 ಕಿಲೋಮೀಟರ್ ಮತ್ತು ವಿಲ್ಲುಪುರಂನಿಂದ ಪೂರ್ವಕ್ಕೆ 40 ಕಿಲೋಮೀಟರ್ ದೂರದಲ್ಲಿದೆ.
ಹವಾಮಾನ ವೈಪರೀತ್ಯದ ಹಿನ್ನೆಲೆಯಲ್ಲಿ ಉತ್ತರ ತಮಿಳುನಾಡು, ಪುದುಚೇರಿ ಮತ್ತು ದಕ್ಷಿಣ ಆಂಧ್ರಪ್ರದೇಶದ ಕೆಲವು ಭಾಗಗಳಿಗೆ ಐಎಂಡಿ ರೆಡ್ ಅಲರ್ಟ್ ಘೋಷಿಸಿದೆ.
