ಕೊಡಗು: ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ (KM Cariappa) ಮತ್ತು ಜನರಲ್ ತಿಮ್ಮಯ್ಯಗೆ ವಕೀಲ ವಿದ್ಯಾಧರ್ರಿಂದ ಅವಮಾನ ಮಾಡಲಾಗಿದ್ದು, ವಿದ್ಯಾಧರ್ ಗಡಿಪಾರಿಗೆ ಒತ್ತಾಯಿಸಿ ಡಿ 12 ರಂದು ಕೊಡಗು ಬಂದ್ಗೆ ಕರೆ ನೀಡಲಾಗಿದೆ. ಜಿಲ್ಲೆಯ ವಿವಿಧ ಸಂಘ ಸಂಸ್ಥೆಗಳಿಂದ ಬೆಂಬಲ ವ್ಯಕ್ತವಾಗಿದ್ದು, ಅನುದಾನ ರಹಿತ ಶಾಲೆಗಳಿಗೆ ಡಿ 12 ರಂದು ರಜೆ ಘೋಷಣೆ ಮಾಡಲಾಗಿದೆ.

ವೀರಸೇನಾನಿಗಳಿಗೆ ಅಪಮಾನ ಖಂಡಿಸಿ ಕೊಡಗು ಜಿಲ್ಲಾ ಸಮಾನ ಮನಸ್ಕರ ಒಕ್ಕೂಟದಿಂದ ಡಿ 12 ರಂದು ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆಯವರೆಗೆ ಬಂದ್ ಗೆ ಕರೆ ನೀಡಲಾಗಿದೆ. ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರನ್ನು ಅಪಮಾನಿಸಿ ವಕೀಲ ವಿದ್ಯಾಧರ್ ಸೊಶೀಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು ಇದು ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.

ವೀರಸೇನಾನಿಗಳಿಗೆ ಅಪಮಾನದ ಬಳಿಕ ವಿದ್ಯಾಧರ್ ಅವರನ್ನು ನಂವೆಂಬರ್ 22ರಂದು ತಡರಾತ್ರಿ ಕೊಡಗು ಪೊಲೀಸರು ಬಂಧಿಸಿದ್ದರು. ಬಳಿಕ ಅವರನ್ನು ಮಡಿಕೇರಿಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ (ಜೆಎಂಎಫ್‌ಸಿ) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಅಲ್ಲಿ ಸರ್ಕಾರಿ ಅಭಿಯೋಜಕರು ಜಾಮೀನಿಗೆ ಆಕ್ಷೇಪ ವ್ಯಕ್ತಪಡಿಸಿದರು. ವಿರೋಧದ ನಡುವೆಯೂ ವಿದ್ಯಾಧರ್ ಅವರಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಲಾಗಿದ್ದು, ಸಂಜೆ ವೇಳೆಗೆ ಬಿಡುಗಡೆಗೊಂಡಿದ್ದರು. ಇದು ಸ್ಥಳೀಯರ ಆಕ್ರೋಶಕ್ಕೆ ಮತ್ತಷ್ಟು ಕಾರಣವಾಗಿತ್ತು.

ರಾಜೀವ್ ಬೋಪಯ್ಯ ಹೇಳಿದ್ದಿಷ್ಟು

ಇನ್ನು ಈ ಬಗ್ಗೆ ಮಡಿಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಂಚಾಲಕ ರಾಜೀವ್ ಬೋಪಯ್ಯ, ಇಂತಹ ಆಕ್ಷೇಪಾರ್ಹ ಕೃತ್ಯಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳುವ ತುರ್ತು ಅಗತ್ಯವಿದೆ. ವಕೀಲ ವಿದ್ಯಾಧರ್ ಹೇಳಿಕೆಯಿಂದ ಸ್ಥಳೀಯ ಜನತೆಯ ಭಾವನೆಗಳಿಗೆ ತೀವ್ರ ಧಕ್ಕೆ ಉಂಟಾಗಿದೆ ಎಂದಿದ್ದಾರೆ. ನಾಳೆ ಬಂದ್ಗೆ ಆಟೋ ಚಾಲಕರು,ವ್ಯಾಪಾರಿಗಳು ಮತ್ತು ವ್ಯಾಪಾರ ಮಾಲೀಕರು, 29 ಸಮುದಾಯ ಸಂಘಟನೆಗಳ ಒಕ್ಕೂಟವು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದ್ದಾರೆ.

ಫೀಲ್ಡ್ ಮಾರ್ಷಲ್ ಕೆಎಂ ಕಾರ್ಯಪ್ಪ ಮತ್ತು ಜನರಲ್ ತಿಮ್ಮಯ್ಯ ಅವರು ದೇಶಕಂಡ ಮಹಾ ಸೇನಾನಿಗಳು. ಕೊಡಗಿನ ಪ್ರೀತಿಪಾತ್ರರು. ಅವರ ಪರಂಪರೆಯು ಸಮುದಾಯಕ್ಕೆ ದೊಡ್ಡ ಹೆಮ್ಮೆ ವಿಷಯವಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!