ಕ ಲರ್ಸ್ ಕನ್ನಡ ವಾಹಿನಿಯಲ್ಲಿ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ನಡೆಸಿಕೊಟ್ಟ ‘ಬಿಗ್ ಬಾಸ್ ಕನ್ನಡ’ 12ನೇ ಸೀಸನ್‌ನಲ್ಲಿ ಗಿಲ್ಲಿ ನಟ ಎಂದೇ ಖ್ಯಾತಿ ಪಡೆದಿರುವ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ನಟರಾಜ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.

ಫೈನಲ್‌ನಲ್ಲಿ ಕರಾವಳಿ ಮೂಲದ, ಪ್ರಸ್ತುತ ಮುಂಬೈಯಲ್ಲಿ ವಾಸವಿರುವ ರಕ್ಷಿತಾ ಶೆಟ್ಟಿ ಅವರು ರನ್ನರ್‌ಅಪ್ ಪ್ರಶಸ್ತಿಗೆ ಪಾತ್ರರಾದರೆ, ಕನ್ನಡಪರ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ಅಶ್ವಿನಿ ಗೌಡ ಎರಡನೇ ರನ್ನರ್‌ಅಪ್ ಆಗಿದ್ದಾರೆ.

ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಡದಪುರ ಗ್ರಾಮದ ರೈತ ಕುಟುಂಬದಿಂದ ಬಂದಿರುವ ಗಿಲ್ಲಿ ನಟ, ಹಾಸ್ಯ ಕಲಾವಿದನಾಗಿ ಜನಮನ ಗೆದ್ದಿದ್ದಾರೆ. 10ನೇ ತರಗತಿ ಪೂರ್ಣಗೊಳಿಸಿದ ಬಳಿಕ ಐಟಿಐ ಕೋರ್ಸ್ ಮಾಡಿದ ಅವರು, ತಮ್ಮ ಹಳ್ಳಿ ಮಾತಿನ ಶೈಲಿಯನ್ನೇ ಹಾಸ್ಯದಲ್ಲಿ ಬಳಸಿ ಅಪಾರ ಜನಪ್ರಿಯತೆ ಗಳಿಸಿದ್ದರು. ಇದೇ ವೈಶಿಷ್ಟ್ಯ ಬಿಗ್ ಬಾಸ್ ಮನೆಯಲ್ಲೂ ಅವರನ್ನು ಫೈನಲ್ ತನಕ ಕರೆದೊಯ್ದಿತು.

ವಿಜೇತರಾಗಿ ಗಿಲ್ಲಿ ನಟ ಅವರಿಗೆ 50 ಲಕ್ಷ ರೂ. ನಗದು ಬಹುಮಾನ ಹಾಗೂ ಮಾರುತಿ ಕಂಪನಿಯ ಹೊಸ ಕಾರು ಲಭಿಸಿದೆ.
ಇನ್ನು ಗಿಲ್ಲಿ ನಟ ಜಯಗಳಿಸಿದ ಹಿನ್ನೆಲೆ ಬೆಂಗಳೂರಿನ ಹೊರವಲಯದಲ್ಲಿರುವ ಬಿಗ್ ಬಾಸ್ ಸ್ಟುಡಿಯೋ ಎದುರು ಅಭಿಮಾನಿಗಳ ಭಾರೀ ಜಮಾವಣೆ ಕಂಡುಬಂದಿತು

Leave a Reply

Your email address will not be published. Required fields are marked *

Join WhatsApp Group
error: Content is protected !!