
ಪುತ್ತೂರು, ಜ.19: ಕೊಡ್ಲಿಪೇಟೆ ಬೇಡಗೊಟ್ಟ ನಿವಾಸಿ ಹಾಗೂ ಪ್ರಸ್ತುತ ಮಾಣಿ–ಬೀಟಿಗೆ ಸಮೀಪದ ಪೇರಮೊಗರು ಜುಮಾ ಮಸೀದಿಯ ಖತೀಬರಾಗಿದ್ದ ಬಹುಃ ಮುಹಮ್ಮದ್ ಫಾಝೀಲ್ ಅಲ್ ಕಾಮಿಲ್ ಸಖಾಫಿ ಉಸ್ತಾದ್ (44) ಅವರು ಸೋಮವಾರ ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಈ ಹಿಂದೆ ಪುತ್ತೂರಿನ ಕೆಮ್ಮಾಯಿ ಬದ್ರಿಯಾ ಜುಮಾ ಮಸೀದಿಯಲ್ಲಿ ಮುದರ್ರಿಸ್ ಆಗಿಯೂ, ಬಳಿಕ ವಿಟ್ಲ ಕೊಡುಂಗಾಯಿ ಪ್ರದೇಶದಲ್ಲಿಯೂ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು. ಧಾರ್ಮಿಕ ಬೋಧನೆ, ಸಮಾಜಸೇವೆ ಹಾಗೂ ಸರಳ ಸ್ವಭಾವದಿಂದ ಅವರು ಜನಮಾನಸದಲ್ಲಿ ಗೌರವ ಪಡೆದಿದ್ದರು.






