
ಪುತ್ತೂರು: ವೈದ್ಯಕೀಯ ಹಾಗೂ ಪಾರಂಪರಿಕ ತಾಂತ್ರಿಕ ವೃತ್ತಿಕ್ಷೇತ್ರಗಳಲ್ಲಿ ನೀಡಿದ ಅಪಾರ ಸೇವೆಯನ್ನು ಗುರುತಿಸಿ, ಪುರುಷರಕಟ್ಟೆ ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ನ ತಜ್ಞ ವೈದ್ಯ ಡಾ. ಸುಜಯ್ ತಂತ್ರಿ ಕೆಮ್ಮಿಂಜೆಯವರಿಗೆ ಪೂಣೆಯ ‘ನಿರ್ವಿಕಾರ್ ಆಯುರ್ವೇದ ಆಸ್ಪತ್ರೆ ಮತ್ತು ಚಾರಿಟೇಬಲ್ ಟ್ರಸ್ಟ್’ ವತಿಯಿಂದ ಆಯೋಜಿಸಲಾದ ಸನ್ಮಾನ ಸಮಾರಂಭದಲ್ಲಿ ‘ಆಯುರ್ವೇದ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪ್ರಸಿದ್ಧ ತಂತ್ರಿ ಮನೆತನದ ಬ್ರಹ್ಮಶ್ರೀ ದಿವಂಗತ ಕೆಮ್ಮಿಂಜೆ ಕೇಶವ ತಂತ್ರಿಗಳ ಮೊಮ್ಮಗ ಹಾಗೂ ಕೆಮ್ಮಿಂಜೆ ದಿವಂಗತ ಸುಬ್ರಹ್ಮಣ್ಯ ತಂತ್ರಿ ಮತ್ತು ಸರಸ್ವತಿ ದಂಪತಿಯ ಪುತ್ರರಾಗಿರುವ ಡಾ. ಸುಜಯ್ ತಂತ್ರಿ ಕೆಮ್ಮಿಂಜೆ ಅವರು ಬೆಳ್ತಂಗಡಿಯ ಪ್ರಸನ್ನ ಆಯುರ್ವೇದ ಕಾಲೇಜಿನ ಕಾಯಚಿಕಿತ್ಸ ವಿಭಾಗದಲ್ಲಿ ಅಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಆಯುರ್ವೇದ ವೈದ್ಯಕೀಯ ಸೇವೆಯ ಜೊತೆಗೆ ಪಾರಂಪರಿಕ ತಾಂತ್ರಿಕ ವೃತ್ತಿಯನ್ನು ಸಮರ್ಥವಾಗಿ ನಿರ್ವಹಿಸುತ್ತಿರುವ ತಾಲೂಕಿನ ಏಕೈಕ ವೈದ್ಯ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ. ಸೇವಾ ಮನೋಭಾವದಿಂದ ಅನೇಕ ಆರ್ಥಿಕವಾಗಿ ಅಶಕ್ತರಿಗೆ ಉಚಿತ ಹಾಗೂ ಸೇವಾರೂಪದ ಚಿಕಿತ್ಸೆಯನ್ನು ನೀಡುತ್ತಾ ಜನಮಾನಸದಲ್ಲಿ ಅಪಾರ ಗೌರವವನ್ನು ಗಳಿಸಿಕೊಂಡಿದ್ದಾರೆ.
ಡಾ. ಸುಜಯ್ ತಂತ್ರಿ ಅವರು ಪುರುಷರಕಟ್ಟೆಯಲ್ಲಿ ‘ಆತ್ರೇಯ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್’ ಅನ್ನು ನಡೆಸುತ್ತಿದ್ದು, ಪ್ರತಿದಿನ ಸಂಜೆ 5ರಿಂದ 7 ಗಂಟೆಯವರೆಗೆ ರೋಗಿಗಳ ಪರಿಶೀಲನೆಗೆ ಲಭ್ಯರಿರುತ್ತಾರೆ.






