ಇಲ್ಲೊಬ್ಬರು ತಾತಪ್ಪ ಹಣ ಸಂಗ್ರಹಿಸಲು ಸಖತ್ ಕ್ರಿಯೇಟಿವ್ ಪ್ಲ್ಯಾನ್ ಒಂದನ್ನು ಮಾಡಿದ್ದು, ಅವರ ಈ ಪ್ಲ್ಯಾನ್ ಮತ್ತು ಅದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಅಮೆರಿಕಾದ ಲಾಸ್ ವೆಗಾಸ್ ನಲ್ಲಿ ಹಿರಿಯ ಪ್ರಾಯದ ವ್ಯಕ್ತಿಯೊಬ್ಬರು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಫಲಕದಲ್ಲಿರುವ ಬರಹವೊಂದು ಇದೀಗ ಎಲ್ಲರನ್ನೂ ವಿಸ್ಮಯಗೊಳಿಸುತ್ತಿದೆ. ‘ನಿಮ್ಮ ಹುಡುಗಿ ಹಾಟ್ ಆಗಿದ್ದರೆ ನನಗೆ ಟಿಪ್ಸ್ ನೀಡಿ..’ ಎಂಬ ಬರಹವುಳ್ಳ ಫಲಕವನ್ನು ಹಿಡಿದುಕೊಂಡ ಈ ವ್ಯಕ್ತಿ ಇಲ್ಲಿನ ಫೇಮಸ್ ಹೊಟೇಲೊಂದರ ಹೊರಗಡೆ ನಿಂತಿರುವ ಫೊಟೋ ಇದಾಗಿದೆ.
ಈ ಹಿರಿಯ ವ್ಯಕ್ತಿ ಖಂಡಿತವಾಗಿಯೂ ಸಖತ್ ತಲೆಯವರೇ ಆಗಿರ್ಬೇಕು. ಯಾಕಂದ್ರೆ ಇವರು ಹಿಡ್ಕೊಂಡಿದ್ದ ಫಲಕದಲ್ಲಿದ್ದ ಬರಹವನ್ನು ಓದಿದವರೆಲ್ಲರೂ, ಅದ್ರಲ್ಲೂ ಜೋಡಿ ಹಕ್ಕಿಗಳು ಇವರಿಗೆ ಟಿಪ್ಸ್ ನೀಡಿಯೇ ಮುಂದೆ ಹೋಗ್ತಿದ್ದಾರಂತೆ!
ತಮ್ಮ ಸಂಗಾತಿಯ ಜೊತೆ ಹೋಗುವ ಬಾಯ್ ಫ್ರೆಂಡ್ಸ್ ಅಂತೂ ಈ ತಾತಪ್ಪನಿಗೆ ಟಿಪ್ಸ್ ಕೊಡದೇ ಮುಂದೆ ಹೋದ್ರೆ ಅವರ ಸಂಗಾತಿಯ ಸಿಟ್ಟಿಗೆ ಗುರಿಯಾಗೋದಂತು ಗ್ಯಾರಂಟಿ. ಯಾಕಂದ್ರೆ ಈ ತಾತಪ್ಪ ಬರೆದಿರೋ ಹಾಗೆ, ಇವರಿಗೆ ಟಿಪ್ಸ್ ಹಾಕದಿದ್ರೆ ಅಂತವರ ಗರ್ಲ್ ಫ್ರೆಂಡ್ ‘ಹಾಟ್’ ಅಲ್ಲ ಅಂತ ಆಯ್ತಲ್ವ..? ಇದನ್ನು ಯಾವ ಗರ್ಲ್ ಫ್ರೆಂಡ್ ಆದ್ರೂ ಸಹಿಸಿಕೊಳ್ತಾಲಾ ನೀವೇ ಹೇಳಿ..? ಅಷ್ಟರಮಟ್ಟಿಗೆ ಈ ತುಂಟ ತಾತಪ್ಪನ ಕ್ಲೆವರ್ ಪ್ಲ್ಯಾನ್ ವರ್ಕೌಟ್ ಆಗಿದೆ!
ಈ ವೈರಲ್ ವಿಡಿಯೊದಲ್ಲಿರುವಂತೆ, ಈ ತಾತಪ್ಪನ ಬಳಿಯಿಂದ ಹಾದು ಹೋಗುವ ಜೊಡಿಯೊಂದು, ಇವರ ಕೈಯಲ್ಲಿದ್ದ ಫಲಕವನ್ನು ನೋಡಿ, ಆತನ ಜೊತೆಯಲ್ಲಿದ್ದ ಬೆಡಗಿ ತನ್ನ ಬಾಯ್ ಫ್ರೆಂಡ್ ಗೆ ತಾತಪ್ಪನಿಗೆ ಟಿಪ್ ನೀಡುವಂತೆ ಸೂಚಿಸಿದ್ದಾಳೆ. ಮೊದಲಿಗೆ ಅವಳ ಮಾತಿಗೆ ಕೇರ್ ಮಾಡದ ಆ ಬಾಯ್ ಫ್ರೆಂಡ್ ಬಳಿಕ ಮುಂದಾಗಬಹುದಾದ ಅನಾಹುತವನ್ನು ನೆನೆದು, ಕೂಡಲೇ ಹಿಂತಿರುಗಿ ಬಂದು ಈ ತಾತನಿಗೆ ಟಿಪ್ಸ್ ನೀಡಿ ಮುಂದೆ ಹೊಗಿದ್ದಾನೆ. ಅಷ್ಟರಮಟ್ಟಿಗೆ ಈ ತಾತಪ್ಪನ ‘ಕ್ರಿಯೇಟಿವ್ ಪ್ಲ್ಯಾನ್’ ಸಿಕ್ಕಾಪಟ್ಟೆ ವರ್ಕೌಟ್ ಆಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಾ ವೈರಲ್ ಆಗುತ್ತಿದ್ದಂತೆ ಈ ಕ್ರಿಯೇಟಿವ್ ಬರಹಕ್ಕೆ ಮತ್ತು ತಾತನ ಸೂಪರ್ ಕ್ರಿಯೇಟಿವಿಟಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ‘ಕಷ್ಟ್ಪಟ್ಟು ಮಾತ್ರವಲ್ಲ, ಸ್ಮಾರ್ಟ್ ಆಗಿಯೂ ಕೆಲಸ ಮಾಡ್ಬೇಕು’ ಎಂದು ಒಬ್ರು ಕಮೆಂಟ್ ಮಾಡಿದ್ದರೆ, ‘ಲೆಜೆಂಡ್ ಗಳು ಏಕಾಂಗಿಯಾಗಿರ್ತಾರೆ, ಆದರೆ ಅವರು ಕಾರಣವಿಲ್ಲದೇ ಟಿಪ್ ಕೇಳ್ತಾರೆ’ ಅಂತ ಇನ್ನೊಬ್ರು ಕಮೆಂಟ್ ಮಾಡಿದ್ದಾರೆ. ಹೀಗೆ ಹಲವರು ಹಲವು ರೀತಿಯಲ್ಲಿ ಈ ಪೋಸ್ಟ್ ಗೆ ಕಮೆಂಟ್ ಮಾಡಿದ್ದಾರೆ.