ಉಪ್ಪಿನಂಗಡಿ: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸಿನ ಚಾಲಕನೊಬ್ಬ ಕಂಠಪೂರ್ತಿ ಕುಡಿದು ಯದ್ವಾತದ್ವ ಬಸ್‌ ಚಲಾಯಿಸಿ ಪ್ರಯಾಣಿಕರನ್ನು ಭೀತಿಯಲ್ಲಿ ಕೆಡವಿದ ಘಟನೆ ರವಿವಾರ ರಾತ್ರಿ ಉಪ್ಪಿನಂಗಡಿಯಲ್ಲಿ ಘಟಿಸಿದೆ.

ಪುತ್ತೂರಿನಿಂದ ಉಪ್ಪಿನಂಗಡಿಗೆ ಆಗಮಿಸಿ ಆಲಂತಾಯದತ್ತ ಸಾಗುತ್ತಿದ್ದ ಕೆಎ 19 ಎಫ್3324 ಕೆಎಸ್ಸಾರ್ಟಿಸಿ ಬಸ್ಸನ್ನು ಆದರ ಚಾಲಕ ಮದ್ಯ ಅಮಲಿನಲ್ಲಿ ಓಲಾಡುತ್ತಾ ಬಸ್ಸನ್ನು ಮನಸೋ ಇಚ್ಛೆ ಚಲಾಯಿಸಿದ ಪರಿಣಾಮ ಮಹಿಳೆಯರು, ಮಕ್ಕಳಾದಿಯಾಗಿ ಪ್ರಯಾಣಿಕರೆಲ್ಲ ಭಯದಿಂದ ಚೀರಾಡತೊಡಗಿದರು.

ಇದನ್ನು ಗಮನಿಸಿದ ಸ್ಥಳೀಯ ನಾಗರಿಕರು ಬಸ್ಸನ್ನು ಬಲವಂತವಾಗಿ ನಿಲ್ಲಿಸಿ ಚಾಲಕನನ್ನು ಕೆಳಗಿಳಿಸಿ ತರಾಟೆಗೆ ತೆಗೆದುಕೊಂಡರು.

ದೇಹದ ನಿಯಂತ್ರಣ ಕಳೆದುಕೊಂಡು ತೂರಾಡುತ್ತಿದ್ದ ಚಾಲಕನ್ನು ಬಳಿಕ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು. ಪ್ರಯಾಣಿಕರು ಅತಂತ್ರರಾಗುವುದನ್ನು ತಪ್ಪಿಸುವ ಸಲುವಾಗಿ ನಿರ್ವಾಹಕನೇ ಬಸ್ಸನ್ನು ಚಲಾಯಿಸಿದರು.

Leave a Reply

Your email address will not be published. Required fields are marked *

Join WhatsApp Group
error: Content is protected !!