
ಸುಳ್ಯ: ಕಡಬ ತಾಲೂಕಿನ ಸವಣೂರು ನಿವಾಸಿ ಸವಣೂರು ಬಳಿಯ ಮುಗೇರು ನಿವಾಸಿ ದಿ. ಜಯರಾಮ ರೈಯವರ ಪುತ್ರ,ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಿಜಯಪುರ ಜಿಲ್ಲಾ ನಿರ್ದೇಶಕರಾಗಿದ್ದ ಸಂತೋಷ್ ಕುಮಾರ್ ರೈಯವರು (42 ವ) ಜ. 02 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ಜ. 01 ರಂದು ರಾತ್ರಿ ಎದೆನೋವು ಕಾಣಿಸಿಕೊಂಡಿತ್ತು. ಇಂದು ಬೆಳಿಗ್ಗೆ ಎದೆ ನೋವು ಉಲ್ಬಣಿಸಿದ್ದು ತಕ್ಷಣ ಅವರನ್ನು ವಿಜಯಪುರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಬದುಕುಳಿಯಲಿಲ್ಲ
ಮೃತ ಸಂತೋಷ್ ಕುಮಾರ್ ರೈಯವರು ರಾಜ್ಯ ಪ್ರಶಸ್ತಿ ವಿಜೇತ ಸವಣೂರು ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದರು ಹಾಗೂ ಹವ್ಯಾಸಿ ಯಕ್ಷಗಾನ ಕಲಾವಿದರಾಗಿದ್ದರು. ಬಿಜಾಪುರಕ್ಕೆ ವರ್ಗಾವಣೆಗೊಳ್ಳುವ ಮೊದಲು ಅವರು ಸುಳ್ಯದಲ್ಲಿ ಧ.ಗ್ರಾ.ಯೋಜನೆಯ ಯೋಜನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು.
ಮೃತರು ಪತ್ನಿ ರಕ್ಷಾ,ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.






