

ಪುತ್ತೂರು; ಕೊನೆಗೂ ಪುತ್ತೂರು ನಗರಸಭೆ ಎಚ್ಚೆತ್ತುಕೊಂಡಿದೆ. ಮಹಿಳೆಯ ಕಾಲು ಸಿಲುಕಿಕೊಂಡ ಚರಂಡಿಯ ಪೈಪ್ ನ್ನು ಹೊಸದಾಗಿ ಅಳವಡಿಸುವ ಮೂಲಕ `ವಿದ್ಯಾಮಾನ’ ದ ಕಾಳಜಿಗೆ ಸ್ಪಂಧಿಸಿದೆ. ಹೊಸ ಪೈಪ್ ಹಾಕಿ ದುರಸ್ಥಿ ಮಾಡುವ ಮೂಲಕ ಉಂಟಾಗಬಹುದಾದ ಅಪಾಯವನ್ನು ತಪ್ಪಿಸುವ ಕೆಲಸ ಮಾಡಿದೆ.
ಪುತ್ತೂರಿನ ಹೂವಿನ ಮಾರುಕಟ್ಟೆ ಬಳಿಯಲ್ಲಿ ಕಾಲೊನಿಯೊಂದಕ್ಕೆ ಹೋಗುವ ಚರಂಡಿಗೆ ಹಾಕಲಾದ ಪೈಪ್ ತುಂಡಾಗಿ ಹಲವು ಕಾಲವಾಗಿತ್ತು. ಮೂರುದಿನಗಳ ಹಿಂದೆ ಈ ಚರಂಡಿಯ ತುಂಡಾದ ಪೈಪ್ ಭಾಗದಲ್ಲಿ ಮಹಿಳೆಯೊಬ್ಬರ ಕಾಲು ಸಿಲುಕಿಕೊಂಡು ಪರದಾಟ ನಡೆಸುವಂತಾಗಿತ್ತು. ಈ ಬಗ್ಗೆ ವಿದ್ಯಾಮಾನ’ ತಕ್ಷಣ ವರದಿ ಮಾಡುವ ಮೂಲಕ ಜನತೆಯ ಹಾಗೂ ನಗರಸಭೆಯ ಗಮನ ಸೆಳೆದಿತ್ತು. ಆದರೆ ಈ ಚರಂಡಿಯ ಪೈಪ್ ತುಂಡಾದ ಭಾಗಕ್ಕೆ ಕಲ್ಲುಗಳನ್ನು ಇಟ್ಟು ದುರಸ್ಥಿ ನಡೆದಿದೆ ಎನ್ನುವಂತೆ ಮಾಡಲಾಗಿತ್ತು. ಈ ಬಗ್ಗೆಯೂ ವಿದ್ಯಾಮಾನ ಸಾರ್ವಜನಿಕ ಕಾಳಜಿಯಿಂದ ವರದಿ ಮಾಡಿ ಇಂತಹ ದುರಸ್ಥಿಯಿಂದ ಮತ್ತೆ ಸಮಸ್ಯೆ ಉಂಟಾಗಲಿದೆ ಎಂದು ತಿಳಿಸುವ ಕೆಲಸ ಮಾಡಿತ್ತು. ಇದೀಗ ನಗರಸಭೆಯ ಅಧಿಕಾರಿಗಳು ಚರಂಡಿಗೆ ಹೊಸ ಪೈಪ್ ಗಳನ್ನು ಅಳವಡಿಸಿ ಉತ್ತಮವಾದ ರೀತಿಯಲ್ಲಿ ದುರಸ್ಥಿ ಮಾಡಿದ್ದಾರೆ. ಆ ಮೂಲಕ ಜನತೆಗಾಗುವ ತೊಂದರೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ಅಧಿಕಾರಿಗಳ ಈ ಕಾರ್ಯಕ್ಕೆ `ವಿದ್ಯಾಮಾನ’ ಅಭಿನಂದಿಸುತ್ತದೆ.
