
ಪುತ್ತೂರು; ಪುತ್ತೂರು ಬಸ್ ನಿಲ್ದಾಣದ ಬಳಿ,ಎಂ ಟಿ ರಸ್ತೆಯಲ್ಲಿರುವ ಬದ್ರಿಯಾ ಜುಮ್ಮಾ ಮಸ್ಜಿದ್ ವಠಾರದಲ್ಲಿ, ಅಂತ್ಯವಿಶ್ರಮಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ತಂಞಳ ರವರ ಐತಿಹಾಸಿಕ “ಪುತ್ತೂರು ಉರೂಸ್” ಸಮಾರಂಭದ ಸಮಾರೋಪ ಸಮಾರಂಭ ಜ.12 ಆದಿತ್ಯವಾರದಂದು ರಾತ್ರಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಪ್ರಖ್ಯಾತ ಧಾರ್ಮಿಕ ಪಂಡಿತರಾದ ಮಂಗಳೂರು ಖಾಝಿ ತ್ವಾಹ ಅಹಮದ್ ಮುಸ್ಲಿಯರ್, ಅಂತರಾಷ್ಟ್ರೀಯ ಖ್ಯಾತಿ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಪತ್ತನಾಪುರಂ ಸಹಿತ, ವಿವಿಧ ಧಾರ್ಮಿಕ ಹಾಗೂ ಸಾಮಾಜಿಕ ನಾಯಕರಗಳು ಪಾಲ್ಗೊಳ್ಳಲಿರುವ ಈ ಬೃಹತ್ ಕಾರ್ಯಕ್ರಮದಲ್ಲಿ, ಸಾವಿರಾರು ಮಂದಿ ಭಾಗವಹಿಸಲಿದ್ದಾರೆ. ಪುತ್ತೂರು ಟ್ರಾಫಿಕ್ ಪೊಲೀಸ್ ಇಲಾಖೆಯ ಸಹಕಾರದೊಂದಿಗೆ ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್ ವ್ಯವಸ್ಥೆಗಳು ಸುಗಮವಾಗಿ ನಡೆಯಲಿರುತ್ತದೆ. ಕಾರ್ಯಕ್ರಮದಲ್ಲಿ ತಬರ್ರೂಕ್ ವಿತರಣೆ ನಡೆಯಲಿದೆ.
ಪುತ್ತೂರು ಉರೂಸ್ ಕಾರ್ಯಕ್ರಮವನ್ನು ಮತ್ತಷ್ಟು ಅವಿಸ್ಮರಣೀಯಗೊಳಿಸುವ ನಿಟ್ಟಿನಲ್ಲಿ, ತಾಲೂಕಿನ ಸರ್ವ ಜಮಹತರು ಸಮಾರೋಪ ಸಮಾರಂಭದಲ್ಲಿ ಭಾಗಿಯಾಗಿ,ಸರ್ವ ರೀತಿಯ ಸಹಕಾರವನ್ನು ನೀಡಬೇಕೆಂದು ಪುತ್ತೂರು ಉರೂಸ್ ಸಮಿತಿಯ ಉಪಾಧ್ಯಕ್ಷರಾದ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮನವಿ ಮಾಡಿದ್ದಾರೆ.






