ಕಳೆದ ವರ್ಷ ಆಗಸ್ಟ್ 09ರಂದು ಇಡೀ ಜಗತ್ತನ್ನೇ ಬೆಚ್ಚಿಬೇಳಿಸಿದ್ದ ಕೋಲ್ಕತದ ಆರ್ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ನಡೆದ ಟ್ರೈನಿ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣದ ಆರೋಪಿ ಸಂಜಯ್ ರಾಯ್ನನ್ನು ಕೋರ್ಟ್ ನಿನ್ನೆ (ಜ.18) ಅಪರಾಧಿ ಎಂದು ತೀರ್ಪು ನೀಡಿತು.

ಯುವ ಟ್ರೈನಿ ವೈದ್ಯೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಬರ್ಬರವಾಗಿ ಹತ್ಯೆಗೈದ ಪ್ರಕರಣದ ತೀರ್ಪು ಪ್ರಕಟವಾದ ಬೆನ್ನಲ್ಲೇ ದೇಶದ ಜನತೆ ಹೆತ್ತವರ ಕಣ್ಣೀರಿಗೆ ಬೆಲೆ ಸಿಕ್ಕಿದೆ. ಕಡೆಗೂ ನ್ಯಾಯ ದೊರಕಿದೆ ಎಂದು ಹೇಳಿದರು. ಕೋರ್ಟ್ ತೀರ್ಪು ನೀಡಿದ್ದೇ ಆದರೂ ಅಪರಾಧಿಗೆ ಇನ್ನೂ ಯಾವ ಶಿಕ್ಷೆ ಎಂಬುದನ್ನು ಕೋರ್ಟ್ ಪ್ರಕಟಿಸಿಲ್ಲ.

ಅತ್ತ ಮಗಳನ್ನು ಕಳೆದುಕೊಂಡ ಪೋಷಕರು ಸಂಜಯ್ ಒಬ್ಬನೇ ಅಪರಾಧಿ ಅಲ್ಲ. ಅವನ ಜತೆಗೆ ಇನ್ನೂ ಕೆಲವರ ಕೈವಾಡವಿದೆ. ಅವರನ್ನೂ ಬಂಧಿಸಿ, ಶಿಕ್ಷೆಗೆ ಗುರಿಯಾಗಿಸಬೇಕು. ಆಗ ಮಾತ್ರ ನಮ್ಮ ಮಗಳ ಆತ್ಮಕ್ಕೆ ಶಾಂತಿ ಸಿಗುವುದು. ನಮಗೆ ನ್ಯಾಯ ದೊರಕುವುದು. ಕೋರ್ಟ್ ಸಂಜಯ್ನನ್ನು ಅಪರಾಧಿ ಎಂದು ತೀರ್ಪು ನೀಡಿರಬಹುದು. ಆದ್ರೆ, ನಮಗಿನ್ನೂ ನ್ಯಾಯ ಸಿಕ್ಕಿಲ್ಲ. ಉಳಿದ ಅಪರಾಧಿಗಳನ್ನು ಶೀಘ್ರವೇ ಬಂಧಿಸಿ ಎಂದು ಮೃತ ಟ್ರೈನಿ ವೈದ್ಯೆಯ ತಾಯಿ ಕಣ್ಣೀರಿಟ್ಟಿದ್ದಾರೆ.

ಇನ್ನು ಸಂಜಯ್ ರಾಯ್ನ ತಾಯಿ ಮಾಲತಿ ರಾಯ್, ಪುತ್ರನನ್ನು ಆರ್ಜಿ ಕರ್ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಅಪರಾಧಿ ಎಂದು ಘೋಷಿಸಿದ ನ್ಯಾಯಾಲಯದ ತೀರ್ಪನ್ನು ಗೌರವಿಸಿದ್ದಾರೆ. ಕೋರ್ಟ್ನಿಂದ ಆರು ಕಿಮಿ ದೂರವಿರುವ ಕೆರೆಯ ಬಳಿ ಕುಳಿತು ಕಣ್ಣೀರಿಟ್ಟ ತಾಯಿ, ‘ನನಗೂ ಮೂವರು ಹೆಣ್ಣುಮಕ್ಕಳಿದ್ದಾರೆ. ಮಗಳನ್ನು ಕಳೆದುಕೊಂಡ ಪೋಷಕರ ನೋವು ನನಗೆ ಅರ್ಥವಾಗುತ್ತೆ. ಅಪರಾಧಿ ಯಾವ ಶಿಕ್ಷೆಗೆ ಅರ್ಹನೋ ಅದೇ ದೊರೆಯಲಿ. ನ್ಯಾಯಾಲಯ ಆತನಿಗೆ ಮರಣ ದಂಡನೆ ಶಿಕ್ಷೆ ವಿಧಿಸಿದರು ನನಗೇನು ಬೇಸರವಿಲ್ಲ. ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ,

Leave a Reply

Your email address will not be published. Required fields are marked *

Join WhatsApp Group
error: Content is protected !!