
ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಸಿಕ್ಕಿದ ಮಾಂಗಲ್ಯ ಸರವನ್ನು ಅದರ ಮಾಲೀಕರಿಗೆ ಮರಳಿಸಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿನಿ ರಜಿಯಾ ಪ್ರಾಮಾಣಿಕತೆ ಮೆರೆದಿದ್ದಾರೆ.
ತುಮರಿ ಸಮೀಪದ ಕಾರಣಿ ಗ್ರಾಮದ ಸಂಗೀತ ಎಂಬ ಮಹಿಳೆ ತಮ್ಮ ಮಗುವಿಗೆ ಚಿಕಿತ್ಸೆ ಕೊಡಿಸಲು ಈಚೆಗೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದರು.
ಈ ಸಂದರ್ಭದಲ್ಲಿ ಅವರ 8 ಗ್ರಾಂ ತೂಕದ ಮಾಂಗಲ್ಯ ಸರ ಆಸ್ಪತ್ರೆ ಆವರಣದಲ್ಲಿ ಬಿದ್ದಿತ್ತು.
ಎಷ್ಟು ಹುಡುಕಿದರೂ ಸರ ಸಿಕ್ಕಿರಲಿಲ್ಲ. ಆಸ್ಪತ್ರೆಗೆ ಬಂದಿದ್ದ ರಜಿಯಾ ಅವರಿಗೆ ಸರ ದೊರಕಿದ್ದು ಅದನ್ನು ಪೊಲೀಸರ ಸಮ್ಮುಖದಲ್ಲಿ ವಾರಸುದಾರರಿಗೆ ಮರಳಿಸಿದ್ದಾರೆ. ರಜಿಯಾ ಅವರು ಜೋಸೆಫ್ ನಗರ ಬಡಾವಣೆಯ ಮೆಹಬೂಬ್ ಸಾಬ್ ಅವರ ಪುತ್ರಿ.
