
ಈ ಬಾರಿಯ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ತನ್ನದೇ ಆದ ಆಟವನ್ನಾಡಿ ಅಭಿಮಾನಿಗಳನ್ನು ಹೊಂದಿರುವ ಚೈತ್ರಾ ಕುಂದಾಪುರ ಫಿನಾಲೆ ವಾರ ತಲುಪುವಲ್ಲಿ ವಿಫಲರಾಗಿ ಹೊರಬಿದ್ದಿದ್ದರು. ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ ಸದ್ಯ ಸಾಲು ಸಾಲು ಸಂದರ್ಶನಗಳಲ್ಲಿ ನಿರತರಾಗಿದ್ದು, ಬಿಗ್‌ಬಾಸ್ ಬಳಿಕ ತನ್ನ ಮುಂದಿನ ಜೀವನ ಹೇಗಿರಬೇಕು ಎಂಬುದರ ಕುರಿತು ಸಮಯವಿದು.
ಆದರೆ ಸಾಮಾಜಿಕ ಜಾಲತಾಣದಲ್ಲಿ ಕಳೆದೆರಡು ದಿನಗಳಿಂದ ಇದೇ ಚೈತ್ರಾ ಕುಂದಾಪುರ ವಿಚಾರವಾಗಿ ಕೆಲ ಕಿಡಿಗೇಡಿಗಳು ಇಲ್ಲಸಲ್ಲದ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಹೌದು, ಚೈತ್ರಾ ಕುಂದಾಪುರ ಅವರು ಕಿರಿಕ್ ಕೀರ್ತಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಪೋಸ್ಟ್‌ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು.
ಇಂತಹ ಪೋಸ್ಟ್‌ಗಳನ್ನು ಕಂಡ ಕೂಡಲೇ ಕಿರಿಕ್ ಕೀರ್ತಿ ತಮ್ಮ ಸ್ಪೀಡ್ ನ್ಯೂಸ್ ಯುಟ್ಯೂಬ್ ಚಾನೆಲ್‌ನಲ್ಲಿ ವಿಡಿಯೊವೊಂದನ್ನ ಹರಿಬಿಟ್ಟಿದ್ದು, ತಾನು ಹಾಗೂ ಚೈತ್ರಾ ಕುಂದಾಪುರ ಮದುವೆ ಸುದ್ದಿ ಬಗ್ಗೆ ಮಾತನಾಡಿ ಕಿಡಿಕಾರಿದ್ದಾರೆ. 15 ನಿಮಿಷಗಳ ವಿಡಿಯೊವನ್ನು ಹಂಚಿಕೊಂಡಿರುವ ಕಿರಿಕ್ ಕೀರ್ತಿ ಮದುವೆ ಕುರಿತಾಗಿ ಹರಿದಾಡುತ್ತಿರುವ ಎಲ್ಲಾ ಸುದ್ದಿಗಳೂ ಸಹ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ
