ಜನವರಿ 13ರಿಂದ ಅರಂಭವಾಗಿರುವ ಮಹಾಕುಂಭಮೇಳಕ್ಕೆ (Maha Kumbh Mela) ದೇಶ, ವಿದೇಶಗಳಿಂದ ಪ್ರತಿನಿತ್ಯ ಕೋಟ್ಯಂತರ ಭಕ್ತರು ಭೇಟಿ ನೀಡುತ್ತಿದ್ದು, ಹೊಸ ದಾಖಲೆಯನ್ನೇ ಬರೆದಿದೆ. ಪ್ರಮುಖವಾಗಿ ನಾಗಾಸಾಧುಗಳು ಹಾಗೂ ವಿದೇಶಿಗರು ಹೆಚ್ಚು ಗಮನವನ್ನು ಸೆಳೆಯುತ್ತಿದ್ದು, ಇದೀಗ ವ್ಯಕ್ತಿಯೊಬ್ಬರು ದುಬೈ ಶೇಖ್ನಂತೆ (Dubai Sheikh) ಡ್ರೆಸ್ ಮಾಡಿಕೊಂಡು ಜನರಿಂದ ಥಳಿತಕ್ಕೆ ಒಳಗಾಗಿರುವ ಘಟನೆ ಘಟನೆ ಬೆಳಕಿಗೆ ಬಂದಿದೆ.

ವೈರಲ್ ಆಗಿರುವ ವಿಡಿಯೋ ನೋಡುವುದಾದರೆ ದುವೈ ಶೇಖ್ನಂತೆ (Dubai Sheikh) ಡ್ರೆಸ್ ಮಾಡಿಕೊಂಡಿರುವ ವ್ಯಕ್ತಿಯನ್ನು ಜನರು ಸುತ್ತುವರೆದಿದ್ದು, ಆತನನ್ನು ಥಳಿಸುತ್ತಿದ್ದು, ಹಲ್ಲೆಗೊಳಗಾದ ವ್ಯಕ್ತಿಯನ್ನು ಸಾಧುಗಳು ರಕ್ಷಿಸುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋದಲ್ಲಿ ನೋಡಬಹುದಾಗಿದೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಅನೇಕರು ವ್ಯಕ್ತಿಯ ನಡೆಯನ್ನು ಖಂಡಿಸಿದ್ದಾರೆ.

ಆಗಿದ್ದಾದರು ಏನು?

ರಾಜಸ್ಥಾನದ ಮೂಲದ ವ್ಯಕ್ತಿಯೊಬ್ಬರು ರೀಲ್ಸ್ಗಾಗಿ ಶೇಖ್ನಂತೆ (Dubai Sheikh) ಡ್ರೆಸ್ ಮಾಡಿಕೊಂಡು ಕುಂಭಮೇಳಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈತನನ್ನು ನೋಡಿದ ಜನರು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಈತನ ಹೆಸರು ಕೇಳಿದಾಗ ಆತ  ಪ್ರೇಮಾನಂದ್ ಎಂದು ಹೇಳಿದ್ದಾನೆ. ಇದರಿಂದ ಅನುಮಾನಗೊಂಡ ಜನ ಆತನನ್ನು ಸುತ್ತುವರೆದು ಪ್ರಶ್ನಿಸಲು ಶುರು ಮಾಡಿದ್ದಾರೆ.

ಆತ ಸುಳ್ಳು ಹೇಳುತ್ತಿರುವುದನ್ನು ಮನಗಂಡ ಜನರು ವ್ಯಕ್ತಿಯನ್ನು ಥಳಿಸಲು ಶುರು ಮಾಡಿದ್ದು, ಬಳಿಕ ಆತ ಓಡಿ ಹೋಗಿದ್ದಾನೆ. ನಾಗಾಸಾಧುಗಳು ಆತನನ್ನು ರಕ್ಷಿಸಿದ್ದು, ಬಳಿಕ ರೀಲ್ಸ್ಗಾಗಿ ಈ ರೀತಿ ಮಾಡಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದ್ದು, ಇದು ಕುಂಭಮೇಳ ಫ್ಯಾನ್ಸಿ ಡ್ರೆಸ್ ಕಾಂಪಿಟೇಷನ್ ಅಲ್ಲ ಎಂದು ನೆಟ್ಟಿಗರು ಕಮೆಂಟ್ ಹಾಕಿ ಕಿಡಿಕಾರಿದ್ದಾರೆ.

https://twitter.com/MR_COOL77777/status/1880992266506117607?ref_src=twsrc%5Etfw%7Ctwcamp%5Etweetembed%7Ctwterm%5E1880992266506117607%7Ctwgr%5E94ba118118c3c08d919249aae7a387adf4733c13%7Ctwcon%5Es1_c10&ref_url=https%3A%2F%2Fapi-news.dailyhunt.in%2F

Leave a Reply

Your email address will not be published. Required fields are marked *

Join WhatsApp Group
error: Content is protected !!