ಪ್ರಯಾಣಿಕ ಜೆಟ್ (Passenger Jet) ಹೆಲಿಕಾಪ್ಟರ್‌ಗೆ (Helicopter) ಡಿಕ್ಕಿಯೊಡೆದು ಗುರುವಾರ ರೊನಾಲ್ಡ್ ರೇಗನ್ ವಾಷಿಂಗ್ಟನ್ (Washington) ರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಪೊಟೊಮ್ಯಾಕ್ ನದಿಯಲ್ಲಿ (Potomac River) ಪತನಗೊಂಡಿದೆ ಎಂದು ಶ್ವೇತಭವನವನ್ನು ಉಲ್ಲೇಖಿಸಿ ಎಎಫ್‌ಪಿ ವರದಿ ಮಾಡಿದೆ.

ವಾಷಿಂಗ್ಟನ್ ಅಗ್ನಿಶಾಮಕ ಇಲಾಖೆಯ ಪ್ರಕಾರ, ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿರುವುದರಿಂದ ಹಲವಾರು ಅಗ್ನಿಶಾಮಕ ದೋಣಿಗಳು ಸ್ಥಳದಲ್ಲಿವೆ ಎಂದು ರಾಯಿಟರ್ಸ್ ತಿಳಿಸಿದೆ.

ಕೆಲವು ಮಾಧ್ಯಮ ವರದಿಗಳ ಪ್ರಕಾರ, ವಿಮಾನ ನಿಲ್ದಾಣದ ಬಳಿ ಅಮೆರಿಕನ್ ಏರ್ಲೈನ್ಸ್ ಫ್ಲೈಟ್ 5342 ಮತ್ತು ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ನಡುವೆ ಡಿಕ್ಕಿ ಸಂಭವಿಸಿದೆ. ಆದಾಗ್ಯೂ, ಈ ಬಗ್ಗೆ ಅಧಿಕೃತ ದೃಢೀಕರಣವನ್ನು ಇನ್ನೂ ನಿರೀಕ್ಷಿಸಲಾಗಿದೆ.

ವಿಮಾನದಲ್ಲಿದ್ದರು 64 ಜನ

ರೇಗನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಮಯದಲ್ಲಿ ವಿಮಾನವು ಹೆಲಿಕಾಪ್ಟರ್ಗೆ ಅಪ್ಪಳಿಸಿದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ವಿಮಾನದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 64 ಮಂದಿ ಇದ್ದರು ಎಂದು ವರದಿಯಾಗಿದೆ.

ಈ ನಡುವೆ ತುರ್ತು ಸಿಬ್ಬಂದಿ ಘಟನೆಗೆ ಸ್ಪಂದಿಸಿದ್ದರಿಂದ ವಿಮಾನ ನಿಲ್ದಾಣದಲ್ಲಿ ಎಲ್ಲಾ ಟೇಕಾಫ್‌ಗಳು ಮತ್ತು ಲ್ಯಾಂಡಿಂಗ್‌ಗಳನ್ನು ಸ್ಥಗಿತಗೊಳಿಸಲಾಯಿತು. “MPD ಪೊಟೊಮ್ಯಾಕ್ ನದಿಯಲ್ಲಿನ ವಿಮಾನ ಅಪಘಾತಕ್ಕೆ ಪ್ರತಿಕ್ರಿಯಿಸುತ್ತಿದೆ. ಹಲವು ಏಜೆನ್ಸಿಗಳು ಪ್ರತಿಕ್ರಿಯಿಸುತ್ತಿ” ಎಂದು ವಾಷಿಂಗ್ಟನ್‌ನ ಮೆಟ್ರೋಪಾಲಿಟನ್ ಪೊಲೀಸ್ ಇಲಾಖೆಯು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ. ಅಪಘಾತದಲ್ಲಿ ಗಾಯಗೊಂಡವರು ಅಥವಾ ಸತ್ತವರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಟೆಕ್ಸಾಸ್ ಸೆನೆಟರ್ ಹೇಳಿದ್ದೇನು?

‘ನಾನು DCA ನಲ್ಲಿನ ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದೇನೆ, FAA ಯಿಂದ ನಾನು ಮಾಹಿತಿಯನ್ನು ಸ್ವೀಕರಿಸುತ್ತೇನೆ. ವಿಮಾನದಲ್ಲಿ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂದು ನಮಗೆ ಇನ್ನೂ ತಿಳಿದಿಲ್ಲವಾದರೂ, ಸಾವುನೋವುಗಳಿವೆ ಎಂದು ನಮಗೆ ತಿಳಿದಿದೆ’ ಎಂದು ಟೆಕ್ಸಾಸ್ ಸೆನೆಟರ್ ಟೆಡ್ ಕ್ರೂಜ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.

https://twitter.com/RT_com/status/1884791951679275128?ref_src=twsrc%5Etfw%7Ctwcamp%5Etweetembed%7Ctwterm%5E1884791951679275128%7Ctwgr%5E682a40c8f2bb9acd9b9c022bd5af757d46f3976a%7Ctwcon%5Es1_c10&ref_url=https%3A%2F%2Fapi-news.dailyhunt.in%2F

Leave a Reply

Your email address will not be published. Required fields are marked *

Join WhatsApp Group
error: Content is protected !!